ಕುಮಾರಸ್ವಾಮಿ CM, ಪರಮೇಶ್ವರ್ DCM: ನಿಜವಾಯ್ತು ನ್ಯೂಸ್ ಕನ್ನಡದ ಚುನಾವಣಾ ಪೂರ್ವ ವಿಶ್ಲೇಷಣೆ!

0
2589

ನ್ಯೂಸ್ ಕನ್ನಡ ವರದಿ-(23.05.18): ಕುಮಾರಸ್ವಾಮಿ ಮುಖ್ಯಮಂತ್ರಿ, ಪರಮೇಶ್ವರ್ ಉಪಮುಖ್ಯಮಂತ್ರಿ ಆಗುತ್ತಾರೆ ಎಂದು ನ್ಯೂಸ್ ಕನ್ನಡವು ಚುನಾವಣಾ ಪೂರ್ವದಲ್ಲಿ ವರದಿ ಮಾಡಿದ್ದು ಇಂದು ವಾಸ್ತವದಲ್ಲಿ ನಿಜವಾಗಿದೆ. ನಮ್ಮ ವರದಿಗಾರ ಹನೀಫ್ ಪುತ್ತೂರ್ ರವರು ಖ್ಯಾತ ವಿದ್ವಾಂಸ ಶಾಫಿ ಸಅದಿಯವರೊಂದಿಗೆ ನಡೆಸಿದ ಸಂದರ್ಶನದಲ್ಲಿ ವ್ಯಕ್ತವಾದ ಈ ಅಭಿಪ್ರಾಯವನ್ನು ನ್ಯೂಸ್ ಕನ್ನಡ ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಿತ್ತು.

ಕಳೆದ ಇಪ್ಪತ್ತು ವರ್ಷದಿಂದ ಹಲವಾರು ಪತ್ರಿಕೆಯಲ್ಲಿ ಮತ್ತು ಟೀವಿ ಚಾನೆಲ್ ಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿರುವ ನಮ್ಮ ವೆಬ್ ನ್ಯೂಸ್ ನ ಪತ್ರಕರ್ತನ ರಾಜಕೀಯ ವಿಶ್ಲೇಷಣೆಯು ರಾಜ್ಯದಾದ್ಯಂತ ಬಹು ಚರ್ಚಿತ ವಿಷಯವೂ ಆಗಿತ್ತು. ನ್ಯೂಸ್ ಕನ್ನಡಕ್ಕೆ ಹಲವರು ಕರೆಗಳನ್ನು ಮಾಡಿ ಇದು ಕಪೋಲಕಲ್ಪತ ಎಂದೂ ಹೇಳಿದ್ದರು. ಶಾಫಿ ಸಹದಿಯವರ ಸೃಷ್ಟೀಕರಣದೊಂದಿಗೆ ಒಟ್ಟು ಸಮೂಹವೇ ನಮ್ಮ ವರದಿಗಾರನ ವಿರುದ್ದ ತಿರುಗಿ ಬಿದ್ದಿತ್ತು.

ಕಳೆದ ನಾಲ್ಕು ವರ್ಷದಿಂದ ಯಾವುದೇ ವರ್ಗ- ಪಕ್ಷ – ವಿಭಾಗದ ಹಂಗು ಇಲ್ಲದೆ, ಯಾರೊಂದಿಗೂ ರಾಜಿಮಾಡಿಕೊಳ್ಳದೇ, ಯಾರಲ್ಲೂ ಕೈ ಚಾಚದೆ ಸ್ವತಂತ್ರವಾಗಿ ಬೆಳೆದು ಬಂದ ನ್ಯೂಸ್ ಕನ್ನಡದ ವೆಬ್ ಪೋರ್ಟಲ್ ದೃತಿಗೆಡದೆ ನಮ್ಮ ವರದಿಗಾರನ ಪ್ರಾಮಾಣಿಕ ಪ್ರಯತ್ನದ ಜೊತೆ ಸೇರಿತು. ಕರ್ನಾಟಕ ಹಾಗೂ ವಿದೇಶದಲ್ಲಿ ನುರಿತ ತಂತ್ರಜ್ಞರು , ವಿಶ್ವಾಸರ್ಹ ಮಾಹಿತಿ ನೀಡುವ ಮತ್ತು ಬಿತ್ತರಿಸುವ ಒಂದು ಬಲಿಷ್ಠ ತಂಡದ ಸ್ನೇಹ ಪೂರ್ವಕ ಪರಿಶ್ರಮದಿಂದ ನ್ಯೂಸ್ ಕನ್ನಡ ಬೆಳೆದು ಬಂದಿದೆ. ಹಾಗಾಗಿ ನಮ್ಮ ವರದಿಗಳ ಬಗ್ಗೆ ನಮಗೆ ನೂರರಷ್ಟು ಖಾತ್ರಿ ಇರುತ್ತದೆ.

2000 ನೇ ಇಸವಿಯಲ್ಲಿ ಪ್ರಕಾಶ್ ಪಾಂಡೇಶ್ವರ್ ರವರ ಕ್ರೈಂ ವಾರ್ತೆ ಪತ್ರಿಕೆಗೆ ವರದಿಗಾರನಾಗಿ ಸೇರಿದ್ದ ಹನೀಫ್ ಪುತ್ತೂರು ಅನಂತರ ನ್ಯೂ ಮಂಗಳೂರು ಚಾನೆಲ್ ನಲ್ಲಿ ಟೀವಿ ಜರ್ನಲಿಸ್ಟ್ ಆಗಿ ಸೇರಿದರು. ಆಗ ರಾಜ್ಯದಲ್ಲಿ ಯಾವುದೇ ನ್ಯೂಸ್ ಟೀವಿ ಚಾನೆಲ್ ಗಳು ಇರಲಿಲ್ಲ. ಈ ಟೀವಿ ಗಂಟೆಗೆ ಒಂದು ನ್ಯೂಸ್ ಬಿತ್ತರಿಸುತ್ತಿತ್ತು. ಕರಾವಳಿಯ ಪ್ರಪ್ರಥಮ ಮುಸ್ಲಿಂ ಟೀವಿ ಜರ್ನಲಿಸ್ಟ್ ಎಂಬ ಹೆಗ್ಗಳಿಕೆ ಹನೀಫ್ ಪುತ್ತೂರ್ ಗಿದೆ. ಇವರ ಜೊತೆ ಪಳಗಿದ ಹಲವು ಯುವಕರು ಇಂದು ದೇಶ- ವಿದೇಶದ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಯಾಮರಾಮೆನ್, ಸ್ಕ್ರಿಪ್ಟ್ ರೈಟರ್, ಸುದ್ದೀವಾಚಕ, ನ್ಯೂಸ್ ಎಡಿಟಿಂಗ್ ಹೀಗೇ ಇವರು ಒಂದು ಟೀವಿ ಚಾನೆಲ್ ನಡೆಸುವ ಸಾಮರ್ಥ್ಯದ ವಿಧ್ವತ್ತನ್ನು ಹೊಂದಿದ್ದಾರೆ. ಜಯಕಿರಣ ಪತ್ರಿಕೆಯಲ್ಲಿ 2004 ರಿಂದ 2006 ರವರೆಗೆ ವರದಿಗಾರನಾಗಿ ಸೇವೆ ಸಲ್ಲಿಸಿದ್ದ ಇವರ ವಿಶೇಷ ವರದಿಗಳು ಹಾಗೇ ತನಿಖಾ ವರದಿಗಳು ಕರಾವಳಿ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸುತ್ತಿತ್ತು. ಡಜನ್ ವಂಚಕರ ಮದುವೆ ಕೂಟ ಎಂಬ ವರದಿಯು ಜಿಲ್ಲಾ ಪೋಲೀಸ್ ಇಲಾಖೆಗೆ ದೊಡ್ಡ ನೆರವನ್ನು ನೀಡಿತ್ತು. ಸಾಮಾಜಿಕ ಕಳಕಳಿ ಇರುವ ಇವರ ವರದಿಗಳಿಗೆ ಹಲವಾರು ಸನ್ಮಾನಗಳು ಸಿಕ್ಕಿದ್ದವು. ಕೋಲ್ಯ ಸ್ವಾಮೀಜಿಯು ಹನೀಫ್ ರವರನ್ನು ಹುಡುಕಿ ಕೊಂಡು ಅವರ ಪುತ್ತೂರಿನ ಮನೆಯಲ್ಲಿ ಸನ್ಮಾನಿಸಿದ್ದರು.

ಅನಂತರ ಉಡುಪಿಯಲ್ಲಿ ಉಡುಪಿವಾರ್ತೆ ಚಾನೆಲ್ ಮಾಡಿದ್ದ ಹನೀಫ್ ಮುಂದೆ ಮಂಗಳೂರು ಮೀಡಿಯಾ ಸೆಂಟರ್ ಎಂಬ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಹುಟ್ಟು ಹಾಕಿದರು. 2007 ರಲ್ಲಿ ಇವರು ನಿರ್ಮಿಸಿದ ‘ಆಕ್ರಂದನ’ ಡಾಕ್ಯುಮೆಂಟರಿ ಮುಸ್ಲಿಮ್ ಸಮುದಾಯದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿತ್ತು. ಸಯ್ಯದ್ ಮದನೀ ದರ್ಗಾದ ಇತಿಹಾಸ, ಜಮ್ಮೀಯತ್ತುಲ್ ಫಲಾಹದ ಸಾಧನೆಗಳು ಇರುವ ಪ್ರಗತಿ ಸಾಕ್ಷ್ಯಚಿತ್ರ, ಹಿದಾಯ ಪೌಂಡೇಶನ್ ನ ಸಮಗ್ರ ಅಭಿವೃದ್ದಿಗೆ ಕಾರ್ಯಕ್ಕೆ ಕೊಡುಗೆ ನೀಡಿದ ‘ ದ ಪ್ಯಾಕ್ಟ್ ‘ ಸಾಕ್ಷ್ಯಚಿತ್ರ, ಟಾಲೆಂಟ್ ರಿಸರ್ಚ್ ಪೌಂಡೇಶನ್ ನ ಸಮಾಜ ಕಲ್ಯಾಣ ಕಾರ್ಯಕ್ಕೆ ಕನ್ನಡಿ ಹಿಡಿದ ‘ ಚಿಗುರು’, ಡಿಕೆ ಎಸ್ಸೀ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮೂಲೂರು ಇದರ ಮೈಲುಗಲ್ಲನ್ನು ಬಿಂಬಿಸಿದ ಸಾರ್ಥಕ ಸಾಕ್ಷ್ಯಚಿತ್ರ, ದಾರುಣ್ಣೂರು ಕಾಶಿಪಟ್ನ ಇದರ ಪ್ರಗತಿಯ ಚಿತ್ರಣ, ಶಾಂತಿಪ್ರಕಾಶನದ ‘ದ ವಿಶ್ಯನ್ ‘ ಸಾಕ್ಷ್ಯಚಿತ್ರ, ಕರ್ನಾಟಕ ಸರಕಾರದ ಜನಪರ ಯೋಜನೆಗಳ ಹಲವಾರು ಚಿತ್ರಿಕೆಗಳು, ಮುಂಬೈ ಭಂಟರ ಇತಿಹಾಸ ವಿವರಿಸುವ ಮುಂಬೈ ಭಂಟರು ಹೀಗೇ ಹನೀಫ್ ಪುತ್ತೂರು ನಿರ್ಮಿಸಿದ ಸಾಕ್ಷ್ಯಚಿತ್ರಗಳು ಸಂಘ ಸಂಸ್ಥೆಗಳ ಕಾರ್ಯಾಚರಣೆಗೆ ಇನ್ನಷ್ಟೂ ವೇಗವನ್ನು ನೀಡಿತ್ತು.

ಸಾಮಾಜಿಕ -ಧಾರ್ಮಿಕ – ಶೈಕ್ಷಣಿಕ – ರಾಜಕೀಯ ಕ್ಷೇತ್ರದಲ್ಲಿ ಹನೀಫ್ ಪುತ್ತೂರ್ ಗೆ ಅಪರಿಚಿತರಿಲ್ಲ. ಶಾಫಿ ಸಅದಿಯನ್ನೂ ಇವರು ಬಹಳ ಹತ್ತಿರದಿಂದ ಬಲ್ಲರು. ಬೆಂಗಳೂರಿನ ಸಅದಿಯ ಪೌಂಡೇಶನ್ ಗೂ ತನ್ನ ಮಾಧ್ಯಮ ಸೇವೆಯನ್ನು ನೀಡಿದ ಇವರು ಮಾಡಿದ ಸಂದರ್ಶನ ಕರಾವಳಿಯಲ್ಲಿ ಕೇವಲ ಆಗಿದ್ದು ವಿಪರ್ಯಾಸವೇ ಸರಿ. ಹನೀಫ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅವಮಾನಕರವಾಗಿ ಬರೆದಾಗ ನಾವು ಹನೀಫ್ ಗೆ ಕರೆ ಮಾಡಿ ಸೃಷ್ಠೀಕರಣ ಕೊಡುವ ಎಂದು ಹೇಳಿದ್ದೆವು ಆಗ ಅವರು ಹೇಳಿದ ಮಾತು ‘ ಕುರೈಶಿ ಪ್ರಕರಣದಲ್ಲಿ ನಾನು ಸತ್ಯವನ್ನು ಬರೆದಿದ್ದೆ, ಹೋರಾಟಗಾರರು ಏಕಾಂಗಿ ಆಗುತ್ತಾರೆ ಎಂದೂ ಹೇಳಿದ್ದೆ, ಉದ್ದೇಶ ಹಿತಾಸಕ್ತಿ ನುಂಗುತ್ತದೆ ಎಂದೂ ಬರೆದಿದ್ದೆ ಆಗ ಎಲ್ಲರೂ ನನ್ನ ವಿರುದ್ದ ತಿರುಗಿ ನಿಂತರು. ಈಗ ಶಾಫಿ ಸಹದಿ ಉಸ್ತಾದರ ಸಂದರ್ಶನ ನಿಜವಾಗುವ ಸಮಯದವರೆಗೆ ಕಾಯುವ ಅನಂತರ ಸಮಾಜವು ತನ್ನನ್ನು ತಿದ್ದಿಕೊಳ್ಳುತ್ತದೆ ”

LEAVE A REPLY

Please enter your comment!
Please enter your name here