Friday September 23 2016

Follow on us:

Contact Us
passport
  481670

ಪಾಸ್ ಪೊರ್ಟ್ ಮಾಡಿಸಲು ಹೊರಟಿದ್ದೀರೇ ? ಅರ್ಜಿ ಸಲ್ಲಿಸಿ, ಕೈಗೆ ತಲುಪುವ ತನಕದ ಸಂಪೂರ್ಣ ಮಾಹಿತಿ

ನ್ಯೂಸ್ ಕನ್ನಡ ಎಕ್ಸ್ ಕ್ಲೂಸಿವ್- 24 ಸೆ.2016: ಪ್ರತೀ ದೇಶ ಪ್ರಜೆಯು ವಿದೇಶಗಳಿಗೆ ಪ್ರಯಾಣಿಸಲು ಪಾಸ್ ಪೊರ್ಟ್ ಅತ್ಯಗತ್ಯವಾಗಿ ಬೇಕಾಗಿದೆ. ಪಾಸ್ ಪೋರ್ಟ್ ಪಡೆಯಲು ಅನುಸರಿಸಬೇಕಾದ ವಿಧಾನ ಹಾಗೂ ಕೆಲವು ಅತೀ ಮುಖ್ಯ ಮಾಹಿತಿಗಳನ್ನು ನ್ಯೂಸ್ ಕನ್ನಡವು ಓದುಗರಿಗೆ ನೀಡುತ್ತಿದೆ.

ಪಾಸ್ ಪೋರ್ಟ್ ಪಡೆಯಲು ಬೇಕಾದ ದಾಖಲೆಗಳು:
►ನಿಮ್ಮ ಮತದಾರರ ಗುರುತು ಪತ್ರ (Voter ID card)

►ಅಧಾರ್ ಕಾರ್ಡ್

►ಶಾಲಾ ವರ್ಗಾವಣೆ ಪತ್ರ (TC)

►50 ವರ್ಷ ಮೇಲ್ಪಟ್ಟವರಿಗೆ TC ಬದಲು ಅಫಿದಾವಿಟ್ ಮಾಡಿಸಬೇಕು

►ಜನನ ಪ್ರಮಾಣ ಪತ್ರ ಹಾಗೂ ಸ್ಕೂಲ್ ಸ್ಟಡಿ ಸರ್ಟಿಫಿಕೇಟ್ (24 ವರ್ಷ ಕೆಳಗಿನವರಿಗೆ)

►ಪಡಿತರ ಚೀಟಿ (ರೇಷನ್ ಕಾರ್ಡ್)

►ವಿವಾಹಿತರಾಗಿದ್ದರೆ (ಪತಿ, ಪತ್ನಿ ಒಟ್ಟಿಗೆ ತೆಗೆಸಿದ ಫೊಟೊ)

►ವಿವಾಹ ಧೃಡೀಕರಣ ಪತ್ರ (ಮ್ಯಾರೇಜ್ ಸರ್ಟಿಫಿಕೇಟ್)

►ಮದುವೆಯ ಅಫಿದಾವಿಟ್

ಕೆಳಗೆಕೊಟ್ಟಿರುವ ಪಾಸ್ ಪೋರ್ಟ್ ಸೇವಾ ವೆಬ್ ಲಿಂಕ್ ಮೂಲಕ ಭೇಟಿಕೊಟ್ಟು ನಿಮ್ಮ ಸಂಪೂರ್ಣ ಮಾಹಿತಿಯನ್ನು ದಾಖಲಿಸಿ, ಕ್ರೆಡಿಟ್ ಕಾರ್ಡ್ ಅಥವ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಬೇಕಾಗಿದೆ.

 https://portal2.passportindia.gov.in/AppOnlineProject/user/RegistrationBaseAction?request_locale=en

ವಯಸ್ಕರ ಪಾಸ್ ಪೋರ್ಟ್ ಗಾಗಿ ರೂ.1,500/- ಹಾಗೂ ಮಕ್ಕಳಿಗೆ 1,000/-

ನಿಮ್ಮ ಪ್ರತೀ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ ಲೈನ್ ಅಪ್ಲೋಡ್ ಮಾಡಬೇಕು.

ನಿಮ್ಮ ಎಲ್ಲಾ ಮಾಹಿತಿಗಳು ಭರ್ತಿಯಾದ ನಂತರ ನಿಮ್ಮ ಸಮೀಪದ ಪಾಸ್ ಪೋರ್ಟ್ ಕಚೇರಿಗೆ ಭೇಟಿ ನೀಡಬೇಕಾದ (appointment) ಸಮಯ ಹಾಗೂ ದಿನಾಂಕ ದೊರೆಯುತ್ತದೆ.

ಪಾಸ್ ಪೋರ್ಟ್ ಕಚೇರಿಯ ಒಳಗಿನ ಕಾರ್ಯ ವಿಧಾನಗಳು:

ಪಾಸ್ ಪೊರ್ಟ್ ಕಚೇರಿಗೆ ನೀವು ಭೇಟಿ (ಅಪಾಯಿಂಟ್ ಮೆಂಟ್) ನೀಡಬೇಕಾದ ದಿನಾಂಕ ಹಾಗೂ ಸಮಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ತಲುಪಿ ನಿಮ್ಮ ಸಮಯಕ್ಕಾಗಿ ಹೊರಗಡೆ ಕಾಯಿರಿ. ನಿಮಗೆ ಲಭಿಸಿರುವ ಸಮಯಕ್ಕೆ ಮಾತ್ರ ನಿಮ್ಮನ್ನು ಒಳಗೆ ಬಿಡಲಾಗುವುದು. ನಿಮಗೆ ಲಭಿಸಿರುವ ಸಮಯಕ್ಕೆ ತಡವಾಗಿ ತಲುಪಿದರೆ, ಕಚೇರಿಯ ಒಳಗೆ ಪ್ರವೇಶ ಸಿಗುವುದಿಲ್ಲ. ನಂತರ ಹೊಸದಾಗಿ ಭೇಟಿ (ಅಪಾಯಿಂಟ್ ಮೆಂಟ್) ನೀಡಬೇಕಾದ ದಿನಾಂಕ ಹಾಗೂ ಸಮಯ ಪಡೆಯಬೇಕಾಗಿದೆ.

ಒಂದು ಸಲ ಒಳ ಪ್ರವೇಶಿಸಿದ ನಂತರ, ತಾವು ತಂದಿರುವ ದಾಖಲೆಗಳ ಎಲ್ಲಾ ಜೆರಾಕ್ಸ್ ಕಾಪಿಗಳ ಮೇಲೆ ನಿಮ್ಮ ಹಸ್ತಾಕ್ಷರ ಮಾಡಿ, ಪ್ರಥಮ ಕೌಂಟರ್ ನಲ್ಲಿ ನೀಡಿದ ಕೆಲವು ನಿಮಿಷಗಳ ನಂತರ ಟೋಕನ್ ನಂಬ್ರವಿರುವ ರಶೀದಿ ಸಿಗುತ್ತದೆ. ಈ ಟೋಕನ್ ಸಂಖ್ಯೆಯು ನಿಮ್ಮ ಕೈಗೆ ಪಾಸ್ ಪೊರ್ಟ್ ಸಿಗುವ ತನಕ ಪ್ರಾಮುಖ್ಯವಾಗಿದೆ. ಹಾಗಾಗಿ ಈ ಟೋಕನ್ ಸಂಖ್ಯೆ ಕಳೆದುಕೊಳ್ಳದಂತೆ ಭದ್ರವಾಗಿರಿಸಿಕೊಳ್ಳಿ. ಒಂದು ವೇಳೆ ಯಾವುದಾದರೂ ದಾಖಲೆ ಪ್ರತಿಯ ಜೆರಾಕ್ಸ್ ತೆಗೆಯಲು ಮರೆತಿದ್ದರೆ ಚಿಂತಿತರಾಗಬೇಕಿಲ್ಲ. ಅಲ್ಲೇ ಪ್ರಥಮ ಕೌಂಟರ್ ಬಳಿ ಹಣ ಪಾವತಿಸಿ ಜೆರಾಕ್ಸ್ ಪಡೆಯಬಹುದಾಗಿದೆ.

ಟೋಕನ್ ನಂಬ್ರ ದೊರೆತ ಬಳಿಕ ನೇರವಾಗಿ ಹಲವಾರು ಕೌಂಟರ್ ಗಳಿರುವ “A” ವಿಭಾಗಕ್ಕೆ ಕಳುಹಿಸಲಾಗುವುದು. ಅಲ್ಲಿರುವ ಹಲವಾರು ಕೌಂಟರ್ ಗಳಲ್ಲಿ ಯಾವ ಕೌಂಟರ್ ಗೆ ತಾವು ಹೋಗಬೇಕೆಂದು ಅಲ್ಲಿ ಅಳವಡಿಸಲಾಗಿರುವ TV ಪರದೆಯ ಮೇಲೆ ನಿಮ್ಮ ಟೋಕನ್ ನಂಬ್ರ ಮೂಲಕ ತಿಳಿಯಬಹುದಾಗಿದೆ. ನೀವು ಭೇಟಿ ನೀಡಬೇಕಾಗಿರುವ “A” ಕೌಂಟರ್ ಗೆ ಹೋಗಿ ನಿಮ್ಮ ಎಲ್ಲಾ ದಾಖಲೆಗಳ ಪ್ರತಿಗಳನ್ನು ನೀಡಬೇಕು. ನಂತರ ನಿಮ್ಮ ವಿಳಾಸ, ಬೆರಳಚ್ಚು (ಫಿಂಗರ್ ಪ್ರಿಂಟ್)ಗಳನ್ನು ಕಂಪ್ಯೂಟರ್ ನಲ್ಲಿ ನಮೂದಿಸಿ, ಅದೇ ಕೌಂಟರ್ ನಲ್ಲಿ ಅಳವಡಿಸಿರುವ ಕ್ಯಾಮೆರಾದ ಮೂಲಕ ನಿಮ್ಮ ಫೊಟೋ ಕ್ಲಿಕ್ಕಿಸಲಾಗುವುದು. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಜೆರಾಕ್ಸ್ ಕಾಪಿಗಳನ್ನು ಅಸಲಿ ದಾಖಲೆಗಳೊಂದಿಗೆ ತಾಳೆ ಹಾಕಿ ಪರೀಕ್ಷಿಸಲು “B” ಕೌಂಟರ್ ಗೆ ಹೋಗಬೇಕಾಗಿದೆ.

“B” ಕೌಂಟರ್ ಗೆ ಹೋಗಲು ಪುನಃ ವೈಟಿಂಗ್ ರೂಂ ನಲ್ಲಿ ನಿಮ್ಮ ಟೋಕನ್ ನಂಬ್ರ ಮತ್ತೊಮ್ಮೆ TV ಪರದೆಯ ಮೇಲೆ ಬರುವವರೆಗೆ ಕಾಯಬೇಕಿದೆ. ಇಲ್ಲಿ ಟಾಯ್ಲೆಟ್ ಹಾಗೂ ಸಣ್ಣ ಕಾಫಿ ಶಾಪ್ ವ್ಯವಸ್ಥೆ ಕೂಡಾ ಇದೆ. TV ಪರದೆಯ ಮೇಲೆ ನಿಮ್ಮ ಟೋಕನ್ ನಂಬ್ರ ಬಂದ ನಂತರ ನಿರ್ದಿಷ್ಟ ಕೌಂಟರ್ ನಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಅಸಲಿ ಅಸಲಿ ದಾಖಲೆಗಳನ್ನು ನೀಡಬೇಕಾಗಿದೆ. ಇಲ್ಲಿ ಕೆಲವರು ಮಾಡವ ತಪ್ಪನ್ನು ನೀವು ಮಾಡಬೇಡಿ. ಅದೇನೆಂದರೆ… ನಿಮ್ಮ ಅಸಲಿ ಆಧಾರ್ ಕಾರ್ಡ್ ತೋರಿಸುವಾಗ ಕೇವಲ ನಿಮ್ಮ ಫೋಟೊ ಮತ್ತು ವಿಳಾಸವಿರುವ (ವೋಟರ್ ಐಡಿ ಗಾತ್ರದ) ಆಧಾರ್ ಕಾರ್ಡನ್ನು ನೀಡಬೇಡಿ. ಬದಲಾಗಿ ಉದ್ದವಿರುವ ಪೂರ್ಣ ಪ್ರಮಾಣದ ಆಧಾರ್ ಕಾರ್ಡನ್ನು ನೀಡಿ. ಏಕೆಂದರೆ ಸಣ್ಣ ಗಾತ್ರದ ಆಧಾರ್ ಕಾರ್ಡ್ ನಲ್ಲಿ ಎಕ್ಸ್ ಪರಿ ಡೇಟ್ ನಮೂದಿಸಿರುವುದಿಲ್ಲ. ಎಕ್ಸ್ ಪರಿ ಡೇಟ್ ಇಲ್ಲದ ಅಧಾರ್ ಕಾರ್ಡ್ ಸ್ವೀಕರಿಸಲಾಗುವುದಿಲ್ಲ ಹಾಗೂ ಮತ್ತೊಮ್ಮೆ ಮರುದಿನದ ಅಥವಾ ಮೂರನೇ ದಿನದ ಹೊಸ ಅಪಾಯಿಂಟ್ ಮೆಂಟ್ ಟೈಂ ಪಡೆದು ಮತ್ತೊಮ್ಮೆ ಪೂರ್ಣ ಆಧಾರ್ ಕಾರ್ಡ್ ನೊಂದಿಗೆ ಭೇಟಿಯಾಗಬೇಕಾದ ಅನಿವಾರ್ಯತೆಯಾಗುವುದು. “B” ಕೌಂಟರ್ ನಲ್ಲಿ ಪರಿಶೀಲನೆಯ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನೆರವೇರಿದ ನಂತರ. ಮಗದೊಮ್ಮೆ “C” ಕೌಂಟರ್ ಗೆ ಹೋಗಲು ನಿಮ್ಮ ಸರದಿಗಾಗಿ TV ಪರದೆಯ ಮೇಲೆ ನಿಮ್ಮ ಸರದಿ ಬರುವ ತನಕ ಕಾಯಬೇಕಿದೆ.

ಈವಾಗ ನೀವು ಅಂತಿಮ ಹಂತವಾದ “C” ವಿಭಾಗಕ್ಕೆ ತೆರಳಿ ಮಗದೊಮ್ಮೆ ನಿಮ್ಮ ದಾಖಲೆ ಪತ್ರಗಳನ್ನು ಪರಿಶೀಲಿಸಿ ಅಂತಿಮ ಮೊಹರು ಒತ್ತಲಾಗುವುದು. ಇಲ್ಲಿಗೆ ಕಚೇರಿಯೊಳಗಿನ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುವುದು. ಇದಾದ ಸುಮಾರು 7 ದಿನಗಳಲ್ಲಿ ಪೊಲೀಸ್ ವಿಚಾರಣೆಗಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ SMS ಬರುತ್ತದೆ. ಹಾಗೂ ನಿಮ್ಮ ಊರಿನ ಪೊಲೀಸ್ ಠಾಣೆಯಿಂದ ವಿಚಾರಣೆಗಾಗಿ ಕರೆ ಬರುತ್ತದೆ.

ಪೊಲೀಸ್ ವಿಚಾರಣೆ:
ಪೊಲೀಸ್ ವಿಚಾರಣೆಯ ಸಮಯದಲ್ಲಿ ಈ ಮೊದಲು ತಾವು ನೀಡಿರುವ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಎರಡು ಫೋಟೊಗಳೊಂದಿಗೆ ನೀಡಬೇಕಿದೆ. ಆರಂಭದ ಹಂತದಲ್ಲಿ ಹೆಸರಿಸಿದ್ದ ಇಬ್ಬರು ಸಾಕ್ಷಿಗಳ ಸಮೇತ ಭೇಟಿ ನೀಡಿ ಹಸ್ತಾಕ್ಷರ ಹಾಕಬೇಕಿದೆ. ಸ್ಥಳೀಯ ಪೊಲೀಸ್ ಠಾಣಾಧಿಕಾರಿಯವರು ತಮ್ಮ ದಾಖಲೆಗಳನ್ನು ಪರಿಶೀಲಿಸಿ, ತಾವು ಅದೇ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸವಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಒಂದು ವೇಳೆ ಈ ಮೊದಲು ತಾವು ಬೇರೆ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸವಾಗಿದ್ದು ಈಗ ಪ್ರಸಕ್ತ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ವಿಳಾಸದ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರೆ, ನಗರ ಸಭೆ/ಗ್ರಾಮ ಪಂಚಾಯತ್ ನಿಂದ ವಾಸ್ತವ್ಯ ಧೃಡೀಕರಣ ಪತ್ರ ಅತ್ಯಗತ್ಯವಾಗಿದೆ. ವಾಸ್ತವ್ಯ ದೃಢೀಕರಣ ಪತ್ರ ಮಾಡಿಸಲು ನೀವು ಕಟ್ಟಿರುವ ತೆರಿಗೆಯ (TAX) ರಶೀದಿ ತೋರಿಸಬೇಕಿದೆ. ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ, ಮನೆ ಮಾಲಕರಿಂದ ಆ ಮನೆಗೆ ಇತ್ತೀಚೆಗೆ (Latest) ಕಟ್ಟಿರುವ ತೆರಿಗೆ ರಶೀದಿಯೊಂದಿಗೆ ಮನೆ ಮಾಲಕರ ಒಪ್ಪಿಗೆ ಪತ್ರವನ್ನು ನೀಡಬೇಕಿದೆ. ಒಂದು ವೇಳೆ ವಾಸ್ತವ್ಯ ದೃಢೀಕರಣ ಪತ್ರ ಮಾಡಿಸದಿದ್ದರೆ, ಹೊಸದಾಗಿ ಮಾಡಿಸಲು ಸುಮಾರು 10 ರಿಂದ 15 ದಿನಗಳು ತಗಲುವುದು. ಹಾಗಾಗಿ ಇದನ್ನು ಮುಂಚಿತವಾಗಿಗೆ ಮಾಡಿಸಿಡುವುದು ಒಳಿತು.

ಇಲ್ಲಿಗೆ ನಿಮ್ಮ ಪಾಸ್ ಪೋರ್ಟ್ ಕಾರ್ಯಗಳಗಳು ಮುಕ್ತಾಯಗೊಂಡು ಕೆಲವೇ ದಿನಗಳಲ್ಲಿ ಕೊರಿಯರ್ ಮೂಲಕ ನಿಮ್ಮ ಹೊಸ ಪಾಸ್ ಪೋರ್ಟ್ ನಿಮ್ಮ ಕೈ ಸೇರುವುದು.

ಈ ಹಿಂದಿನ ಪಾಸ್ ಪೊರ್ಟ್ ನ ಎಕ್ಸ್ ಪಾಯಿರಿ ದಿನ ಮುಗಿದ ನಂತರ ನವೀಕರಣ ಮಾಡಿಸುವವರಿಗೆ ಕೂಡಾ ಇದೇ ವಿಧಾನಗಳು ಅನ್ವಯವಾಗುವುದು.

ಮಾಹಿತಿ: ಮುಖ್ತಾರ್ ಉಚ್ಚಿಲ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕೆಪಿಎಲ್ ಕ್ರಿಕೆಟ್ ಮೇಲೆ ಬೆಟ್ಟಿಂಗ್ ದಂಧೆಯ ಕರಿ ನೆರಳು: ನಾಲ್ವರ ಬಂಧನ

ಮುಂದಿನ ಸುದ್ದಿ »

ಭೀಕರ ಪ್ರವಾಹಕ್ಕೆ 8 ಮಂದಿ ಬಲಿ

ಸಿನೆಮಾ

 • 1404997240_kamal-hasan-2

  ತಮಿಳಿನ ಬಿಗ್‌ಬಾಸ್‌ಗೆ ಕಮಲ್‌ ಹಾಸನ್‌ ಸಾರಥ್ಯ

  April 24, 2017

  ನ್ಯೂಸ್ ಕನ್ನಡ-(24.4.17): ಬಿಗ್‌ಬಾಸ್‌ ರಿಯಾಲಿಟಿ ಷೋನ ತಮಿಳು ಆವೃತ್ತಿಯನ್ನು ನಡೆಸಿಕೊಡಲು ನಟ ಕಮಲ್‌ ಹಾಸನ್‌ ಒಪ್ಪಿಕೊಂಡಿದ್ದಾರೆ. ‘ದಿ ಕ್ವಿಂಟ್‌’ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಕಮಲ್‌ ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಈವರೆಗೆ ನಾನು ಕಲಾವಿದನಾಗಿ ಜನರನ್ನು ರಂಜಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×