Saturday June 25 2016

Follow on us:

Contact Us
    14472

ಮಹಾಮಾರಿ ಡೆಂಗ್ಯೂಗೆ ಇಲ್ಲಿದೆ ಪರಿಹಾರ

ನ್ಯೂಸ್ ಕನ್ನಡ ವರದಿ-ಮುಂಗಾರು ಮಳೆ ಪ್ರವೇಶದ ಬೆನ್ನಲ್ಲೇ ಇತ್ತ ಡೆಂಗ್ಯೂ ಮಹಾಮಾರಿ ಕೂಡ ಹೆಚ್ಚಾಗುತ್ತಿದೆ, ಈ ವರ್ಷ  ಕರಾವಳಿಯಲ್ಲಿ 10ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, ದಿನದಿಂದ ದಿನಕ್ಕೆ ಡೆಂಗ್ಯೂ ಸಾವು ಪ್ರಕರಣ ಕೂಡ ಅಧಿಕವಾಗುತ್ತಿದೆ.

ಡೆಂಗ್ಯೂ ಮಹಾಮಾರಿಗೆ ಲಸಿಕೆಯನ್ನು ನೀಡಲಾಗುತ್ತಿದ್ದರೂ, ಪರಿಪೂರ್ಣವಾಗಿ ರೋಗಿಗಳು ಗುಣಮುಖವಾಗುವ ಬಗ್ಗೆ ಯಾವುದೇ ಭರವಸೆ ಕೂಡ ಇರುವುದಿಲ್ಲ. ಡೆಂಗ್ಯೂ ಲಸಿಕೆ ತುಂಬಾ ದುಬಾರಿಯಾಗಿದ್ದು, ಈ ಇಂಜೆಕ್ಷನ್ ಸುಮಾರು 5,000 ದಿಂದ 10,000 ವೆಚ್ಚವನ್ನು ಒಳಗೊಂಡಿದೆ.

ಈ ಚಿಕಿತ್ಸೆಯಲ್ಲಿ ಒಂದೇ ಕ್ಲೋನ್ ನಿಂದ (organism or cell) ತಯಾರಾದ ಪ್ರತಿಕಾಯಗಳನ್ನು (ಮೋನೋ ಕ್ಲೋನಲ್ ಆಂಟಿಬಾಡಿ) ರೋಗಿಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ರೋಗಿಗಳು ಆಸ್ಪತ್ರೆಯಿಂದ ಡಿಸ್ಚರ್ಜ್ ಮಾಡಿಸಿ ಮನೆ ಮದ್ದಿನ ಮೂಲಕ ಡೆಂಗ್ಯೂ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಿರುವ ಉದಾಹರಣೆಗಳಿವೆ.

ಆದ್ದರಿಂದ ನೀವು ಯೋಚಿಸಬೇಡಿ ನಿಮ್ಮಲ್ಲಿ ಯಾರಿಗಾದರೂ ಡೆಂಗ್ಯೂ ಬಂದಿದೆ ಎಂದು ರಕ್ತ ಪರೀಕ್ಷೆಯಲ್ಲಿ ಖಚಿತವಾದರೆ ನಿಮ್ಮ ಮನೆಯ ಅಂಗಳದಲ್ಲೇ ಇರುವ ಔಷಧೀಯ ಪಪ್ಪಾಯ ಎಲೆ ಮೂಲಕ ಡೆಂಗ್ಯೂವನ್ನು ಗುಣ ಪಡಿಸಿಕೊಳ್ಳಿ.

ಪಪ್ಪಾಯ ಎಲೆ: ಔದು ನಮ್ಮ ಮನೆ ಮುಂದೆಯೇ ಎಷ್ಟೋ ಔಷಧೀಯ ಮರಗಳಿದ್ದರೂ ನಮಗೆ ಅದರ ಪ್ರಾಮುಖ್ಯತೆ ತಿಳಿದಿರುವುದಿಲ್ಲ.

ಆದರೆ ಇತ್ತೀಚ್ಛಿನ ಸಂಶೋಧನೆಯ ಪ್ರಕಾರ ಪಪ್ಪಾಯ ಮರದ ಎಲೆಗೆ ಡೆಂಗ್ಯೂ ರೋಗ ನಿರೋಧಕ ಶಕ್ತಿ ಇದೆ ಎಂದು ಪತ್ತೆ ಹಚ್ಚಿದ್ದಾರೆ. ಬಹುತೇಕ ವೈದ್ಯರು ಕೂಡ ರೋಗಿಗಳಿಗೆ ಈ ಬಗ್ಗೆ ಮನವರಿಕೆಯನ್ನು ಕೂಡ ಮಾಡಿಕೊಡುತ್ತಿದ್ದಾರೆ.

ಬಳಸುವ ವಿಧಾನ

ಪಪ್ಪಾಯ ಎಲೆಯನ್ನು ನೀರಿನೊಂದಿಗೆ ಸೇರಿಸಿ ಮಿಕ್ಸಿಯಲ್ಲಿ ಹಾಕಿ ಚಿಕ್ಕ ಉಂಡೆ ಗಾತ್ರದಲ್ಲಿ ಮಾಡಿ

ಬಳಿಕ ಮಾಡಿದ ಪಪ್ಪಾಯ ಎಲೆಯ ಉಂಡೆಯನ್ನು ನೀರಿನೊಂದಿಗೆ ಸೇವಿಸಿ

ಹಗಲಲ್ಲಿ ಪ್ರತೀ 3 ಗಂಟೆಗೆ ಒಂದು ಉಂಡೆಯಂತೆ ನಾಲ್ಕು ಬಾರಿ ತೆಗೆದುಕೊಳ್ಳಿ

ನಂತರ ಖಂಡಿತವಾಗಿಯೂ ನಿಮಗೆ ಜ್ವರದಲ್ಲಿ ಇಳಿಕೆ ಕಾಣಿಸುತ್ತದೆ. ಬಳಿಕ ಅದೇ ರೀತಿ ಮೂರು- ನಾಲ್ಕು ದಿನ ಪಪ್ಪಾಯ ಎಲೆ ಉಂಡೆಯನ್ನು ಮಾಡಿ ನೀರಿನೊಂದಿಗೆ ಸೇವಿಸಿ ಜ್ವರ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

ಡೆಂಗ್ಯೂ ರೋಗಿ ಏನೆಲ್ಲಾ ಅನುಸರಿಸಬೇಕು?

ಡೆಂಗ್ಯೂ ಸೋಂಕಿತ ವ್ಯಕ್ತಿ ಹೆಚ್ಚಿನ ವಿಶ್ರಾಂತಿಯಲ್ಲಿರಬೇಕು

ನೀರಿನ್ನು ಹೊರತುಪಡಿಸಿ ಸಾಕಷ್ಟು ಪ್ರಮಾಣದಲ್ಲಿ ರಸ, ಸಾರು, ಅಂಬಲಿಯಂತಹ ದ್ರವಗಳನ್ನು ಸೇವಿಸಬೇಕು

ಸೂಪ್, ಹಣ್ಣಿನ ರಸವನ್ನು – ಒಂದು ದಿನದಲ್ಲಿ ಎರಡೂವರೆ ಲೀಟರ್ ಗಳವರೆಗೆ ಕುಡಿಯಬೇಕು

ಆಸ್ಪಿರಿನ್ ಮತ್ತು ಇತರ ಸಾಂಪ್ರದಾಯಿಕ ನೋವು ನಿವಾರಕಗಳು ರೀತಿಯ ಮಾತ್ರೆಗಳನ್ನು ತಪ್ಪಿಸಬೇಕು.

ಜ್ವರ ನಿಯಂತ್ರಿಸಲು ಪ್ಯಾರಸಿಟಮಾಲ್ ಮಾತ್ರೆಗಳನ್ನು ಬಳಸಿ

ಪ್ಯಾರಸಿಟಮಾಲ್ ಹೊರತಾಗಿಯೂ ಜ್ವರ ಹೆಚ್ಚಾದರೆ ಒದ್ದೆ ಬಟ್ಟೆಯಲ್ಲಿ ದೇಹವನ್ನು ಒರೆಸಿ.

ಹೊಟ್ಟೆ ನೋವು, ಎದೆನೋವು, ವಾಂತಿ, ರಕ್ತಸ್ರಾವ, ಮೂಗು, ವಸಡು ಮತ್ತು ಡಾರ್ಕ್ ಹೊಂದಿರುವ ಕಲರ್ಡ್ ಮಲ ಈ ಲಕ್ಷಣಗಳಿದ್ದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ

 

ಡೆಂಗ್ಯೂ ಜ್ವರ ಬಂದಾಗ ಏನು ಮಾಡಬಾರದು?

ದೇಹವು ಬಿಸಿಯಾಗಿದ್ದೂ, ಕೈ ಮತ್ತು ಕಾಲು ತಣ್ಣಗಿರುವಾಗ ಆಸ್ಪಿರಿನ್ ಮತ್ತು ಸಾಂಪ್ರದಾಯಿಕ ನೋವು ನಿವಾರಕಗಳನ್ನು, ಸ್ಟೀರಾಯ್ಡ್ ಗಳನ್ನು, ಪ್ರತಿಜೀವಕಗಳನ್ನು, ರಕ್ತ ಅಥವಾ ಪ್ಲೇಟ್ಲೆಟ್ ವರ್ಗಾವಣೆಗಳನ್ನು ಆದಷ್ಟು ತಪ್ಪಿಸಬೇಕು.

ಯಾವುದೇ ಹೊರವಸ್ತು ಅಥವಾ ಔಷಧಗಳಿಂದ ಪ್ಲೇಟ್ಲೆಟ್ ಎಣಿಕೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ, ಡೆಂಗ್ಯೂವನ್ನು ಆರಂಭದಲ್ಲಿಯೇ ಪತ್ತೆ ಮಾಡುವುದರಿಂದ ಮತ್ತು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದರಿಂದ ಈ ರೋಗದ ತೊಡಕುಗಳನ್ನು ತಡೆಯಬಹುದು.

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅನ್ಯಜಾತಿಯ ಯುವಕನ ಪ್ರೀತಿಸಿದ ಮಗಳ ಬರ್ಬರ ಹತ್ಯೆ

ಮುಂದಿನ ಸುದ್ದಿ »

9 ವರ್ಷಗಳ ಹಿಂದೆ ಮೃತ ಮಹಿಳೆ ಚುನಾವಣೆಯಲ್ಲಿ ಗೆಲುವು!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×