ಬ್ರೇಕಿಂಗ್ ನ್ಯೂಸ್: ಪಂಜಾಬ್; ಸಚಿವ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ!

0
220

ನ್ಯೂಸ್ ಕನ್ನಡ ವರದಿ: ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಲ್ಲಿಸಿದ ಸಿಧು ಅದರ ಪ್ರತಿಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪತ್ರವು 2019 ರ ಜೂನ್ 10ನೇ ದಿನಾಂಕವನ್ನೊಳಗೊಂಡಿದೆ.

ಈ ಪತ್ರವನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೂ ಕಳುಹಿಸಲಾಗಿದೆಯೇಎಂಬುದು ಇನ್ನೂ ಖಚಿತವಾಗಿಲ್ಲ.

ಜೂನ್ 6 ರಂದು ಅಮರೀಂದರ್ ಸಿಂಗ್ ತಮ್ಮ ಸಂಪುಟ ಪುನರ್ರಚನೆ ಮಾಡಿದ್ದು ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರದಂತಹ ಪ್ರಮುಖ ಖಾತೆಗಳನ್ನು ಸಿಧು ಅವರಿಂದ ಹಿಂಪಡೆದಿದ್ದು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಖಾತೆ ನಿಡಿದ್ದರು.

ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಜೂನ್ 8 ರಂದು ಮುಖ್ಯಮಂತ್ರಿ ರಚಿಸಿದ ಸಲಹಾ ಸಮಿತಿಗಳಿಂದಲೂ ಸಿಧು ಅವರನ್ನು ದೂರವಿಡಲಾಗಿತ್ತು. ಇನ್ನು ಕಳೆದ ತಿಂಗಳು ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ನವದೆಹಲಿಯಲ್ಲಿ ಭೇಟಿಯಾಗಿ “ಪರಿಸ್ಥಿತಿಯ ಬಗ್ಗೆ ತಿಳಿಸಿದರು” ಮತ್ತು ಅವರಿಗೆ ಪತ್ರವೊಂದನ್ನು ಸಹ ನೀಡಿದ್ದರು.

LEAVE A REPLY

Please enter your comment!
Please enter your name here