Tuesday November 14 2017

Follow on us:

Contact Us
    201

ಭಾರತದ ಯೋಗಕ್ಕೆ ಕ್ರೀಡಾ ಮಾನ್ಯತೆ ನೀಡಿದ ಸೌದಿ ಅರೇಬಿಯಾ ಸರಕಾರ

ರಿಯಾದ್‌: ಸೌದಿ ಅರೇಬಿಯಾ ಯೋಗಕ್ಕೆ ಸಂಪೂರ್ಣ ಮಾನ್ಯತೆ ನೀಡಿದ್ದು ಕ್ರೀಡೆಯನ್ನಾಗಿ ಪರಿಗಣಿಸಿ ದೇಶದಲ್ಲಿ ಯೋಗ ಕಲಿಕೆಗೆ ಸರ್ಕಾರ ಅನುಮತಿ ನೀಡಿದೆ. ಭಾರತೀಯ ಮೂಲದ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಖ್ಯಾತಿಗೆ ಸೌದಿ ಅರೇಬಿಯಾ ಪಾತ್ರವಾಗಿದೆ. ಈ ಹಿಂದೆ ಜೂನ್‌ 21 ರಂದು ನಡೆಸಲಾಗುವ ವಿಶ್ವ ಯೋಗದಿನದ ಸಹಭಾಗಿತ್ವವನ್ನು ಸೌದಿ ಅರೇಬಿಯಾ ಪಡೆದಿರಲಿಲ್ಲ. ಆದರೆ ಈಗ ಕೈಗೊಂಡಿರುವ ನಿರ್ಧಾರ ಐತಿಹಾಸಿಕವಾಗಿದ್ದು, ಬದಲಾವಣೆಯ ಸೂಚನೆ ಎನ್ನಲಾಗಿದೆ.

2015ರಲ್ಲಿ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತ್ತು. ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯರ ಶಾಲೆಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ನೌಫಲ್ ಮರ್‌ವಾಯಿ ಅವರು ಯೋಗ ಪಾಠ ಮಾಡಿದ ಮೊದಲ ಸೌದಿ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ. ಇವರು, ಸೌದಿಯಲ್ಲಿ ಯೋಗವನ್ನು ಪ್ರಚುರಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹಿಂದುತ್ವವನ್ನು ವಿರೋಧಿಸುವವರು ದೇಶವಿರೋಧಿಗಳು: ಯೋಗಿ ಆದಿತ್ಯನಾಥ್

ಮುಂದಿನ ಸುದ್ದಿ »

ಟೈಮ್ಸ್ ನೌ ಚಾನೆಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಪಾಪ್ಯುಲರ್ ಫ್ರಂಟ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×