Tuesday November 14 2017

Follow on us:

Contact Us
    506

ದೇಶದೆಲ್ಲೆಡೆ ಮೂತ್ರಬ್ಯಾಂಕ್ ಸ್ಥಾಪಿಸುವ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ: ನಿತಿನ್ ಗಡ್ಕರಿ

ನ್ಯೂಸ್ ಕನ್ನಡ ವರದಿ(14.11.2017): ದೇಶದಲ್ಲಿ ಕೃಷಿಗಾಗಿ ಅಗತ್ಯವಿರುವ ಯೂರಿಯಾ ಉತ್ಪಾದನೆಗಾಗಿ ಹೊಸದೊಂದು ಯೋಜನೆಯನ್ನು ಕೈಗೊಂಡಿರುವ ಕೇಂದ್ರ ಸರಾರವು ಪ್ರತಿ ಹಳ್ಳಿಗಳಲ್ಲಿ ಮೂತ್ರ ಬ್ಯಾಂಕ್ ಸ್ಥಾಪಿಸುವ ಯೋಜನೆಯನ್ನು ಹೊಂದಿದೆ ಹಾಗೂ ಈ ಕುರಿತಾದಂತೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಯೂರಿಯಾ ಉತ್ಪಾದನೆಯಲ್ಲಿ ಬೇರೆಯವರನ್ನು ಅವಲಂಬಿಸದೇ ಸ್ವಾಲಂಬಿ ಉತ್ಪಾದನೆಯನ್ನು ಕೈಗೊಳ್ಳುವ ಸಲುವಾಗಿ ಈ ಯೋಜನೆ ಜಾರಿಗೆ ತರುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜ್ಯಗಳನ್ನು ಸಂಪತ್ತಾಗಿ ಪರಿವರ್ತಿಸುವಂತಹ ಪ್ರಯತ್ನಗಳು ದೇಶದಲ್ಲಿ ನಡೆಯಬೇಕಾಗಿದೆ. ವ್ಯರ್ಥವಾಗಿ ಹೋಗುವ ಮಾನವ ಮೂತ್ರದಲ್ಲಿ ನೈಟ್ರೋಜನ್ ನ ಅಪಾರ ಅಂಶಗಳಿವೆ. ಈ ಯೋಜನೆಯನ್ನು ಸರಕಾರವು ಜಾರಿಗೆ ತರುವುದರಿಂದ ಯಾರಿಗಾದರೂ ತೊಂದರೆಯಾಗಬಹುದು ಎಂದು ನಾನು ಭಾವಿಸುವುದಿಲ್ಲ. ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಕಾರ್ಯವು ಉತ್ತಮವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆರಂಭದಲ್ಲಿ ನಾಗ್ಪುರದ ದಾಪೇವಾಡ ಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ. ರೈತರು ಕ್ಯಾನ್‌ಗಳಲ್ಲಿ 10 ಲೀಟರ್‌ಗಳಷ್ಟು ಮೂತ್ರ ಸಂಗ್ರಹಿಸಿ ತಾಲ್ಲೂಕು ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ ಕೊಡಬೇಕು. ಅವರಿಗೆ ಪ್ರತಿ ಲೀಟರ್‌ಗೆ ₹1ರಂತೆ ನೀಡಲಾಗುವುದು. ಸ್ವೀಡನ್‌ನ ವಿಜ್ಞಾನಿಗಳ ಸಹಯೋಗದೊಂದಿಗೆ ಈ ಯೋಜನೆ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪಾಕಿಸ್ತಾನ: ಕೋಳಿಯ ಮೇಲೆ ಅತ್ಯಾಚಾರವೆಸಗಿದ ಬಾಲಕನ ಬಂಧನ!

ಮುಂದಿನ ಸುದ್ದಿ »

ಹಿಂದುತ್ವವನ್ನು ವಿರೋಧಿಸುವವರು ದೇಶವಿರೋಧಿಗಳು: ಯೋಗಿ ಆದಿತ್ಯನಾಥ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×