Thursday January 5 2017

Follow on us:

Contact Us
15871277_1122429324538081_272009166_n
  42109

ಯುಪಿಎ ಸರ್ಕಾರ ಕೊಟ್ಟಾಗ ಅಪಹಾಸ್ಯ ಮಾಡಿ,ತಾನು ಕೊಟ್ಟಾಗ ಹೇಳಿ ಬೀಗಿದ ಮೋದಿ!

ನ್ಯೂಸ್ ಕನ್ನಡ ನೆಟ್ ವರ್ಕ್-ಲಕ್ನೋ(5-1-17): ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನರೇಂದ್ರ ಮೋದಿಯವರು ಆ ಸಂದರ್ಭ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಯುಪಿಎ ಸರಕಾರ ಗುಜರಾತ್ ಗೆ ನೀಡಿದ್ದ ಅನುದಾನಗಳ ಬಗ್ಗೆ ವ್ಯಂಗ್ಯವಾಡಿದ್ದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ನಡೆದ “ಪರಿವರ್ತನ್ ರ್ಯಾಲಿ”ಯಲ್ಲಿ ಪ್ರಧಾನಿ ಮೋದಿಯವರು ತಾವು ಅಧಿಕಾರಕ್ಕೆ ಬಂದ ಬಳಿಕ ವಿವಿಧ ರಾಜ್ಯಗಳಿಗೆ ನೀಡಿರುವ ಅನುದಾನಗಳ ಬಗ್ಗೆ ಬಡಾಯಿ ಕೊಚ್ಚಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ.

ಲಕ್ನೋದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ನಾವು ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರತಿವರ್ಷ 1 ಲಕ್ಷ ಕೋಟಿಯಂತೆ ಅನುದಾನ ನೀಡಿದ್ದೇವೆ. ಎರಡು ವರ್ಷಕ್ಕೆ ಒಟ್ಟು 2.5 ಲಕ್ಷ ಕೋಟಿ ರೂ.ಗಳನ್ನು ಉತ್ತರ ಪ್ರದೇಶ ಸರ್ಕಾರದ ನೀಡಿದ್ದೇವೆ. ಒಂದು ಲಕ್ಷ ಕೋಟಿ ಎಂಬುವುದೇನೂ ಸಣ್ಣ ಮೊತ್ತವಲ್ಲ ಎಂದಿದ್ದರು. ಯುಪಿಎ ಸರಕಾರ ನೀಡಿದ್ದ 10,000 ಕೋಟಿ ಅನುದಾನದ ಕುರಿತು ಹಿಂದೆ ಚುನಾವಣಾ ಪ್ರಚಾರಗಳಲ್ಲಿ ವ್ಯಂಗ್ಯವಾಡಿದ್ದ ಮೋದಿ, ಇದೀಗ ತಮ್ಮ ಸರಕಾರ ನೀಡಿದ ಅನುದಾನಗಳ ಬಗ್ಗೆ ಕೊಚ್ಚಿಕೊಳ್ಳುತ್ತಿರುವುದು ಸರಿಯೇ ಎನ್ನುವುದು ಟೀಕಾಕಾರರ ಪ್ರಶ್ನೆ.

ಯುಪಿಎ ನೇತೃತ್ವದ ಸರ್ಕಾರ ನೀಡಿದ್ದ 10,000 ಕೋಟಿ ಅನುದಾನದ ಕುರಿತು ಚುನಾವಣಾ ಪ್ರಚಾರಗಳಲ್ಲಿ ಲೇವಡಿ ಮಾಡಿದ್ದ ಮೋದಿ, ಈ ಹಣ ಯಾವುದೇ ಪಕ್ಷಕ್ಕೆ ಅಥವಾ ಸರ್ಕಾರಕ್ಕೆ ಸೇರಿದ್ದಲ್ಲ. ಇದು ಜನರ ಹಣ ಎಂದು ಚುನಾವಣಾ ಪ್ರಚಾರದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ನೀವು ಹಣ ಕೊಟ್ಟಿದ್ದೀರಿ ಎಂಬುವುದನ್ನು ಮತ್ತೆ ಮತ್ತೆ ಒತ್ತಿ ಹೇಳುವ ಅಗತ್ಯವಿಲ್ಲ. ನೀವು ಕೊಟ್ಟ ಹಣ ನಿಮ್ಮ ಮಾವನ ಮನೆಯಿಂದ ತಂದದ್ದಲ್ಲ, ಎಂದು ಅಪಹಾಸ್ಯ ಮಾಡಿದ್ದರು.

ಚುನಾವಣೆಯ ರ್ಯಾಲಿಯಲ್ಲಿ ಉತ್ತರ ಪ್ರದೇಶದ ಮತದಾರರನ್ನು ಭಾಷಣದ ಮೂಲಕ ಸೆಳೆಯುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಮೋದಿ, ತಮ್ಮ ರಾಜಕೀಯ ಪ್ರವಚನದ ವಿರೋಧಾಭಾಸಗಳನ್ನು ಈ ಮೂಲಕ ಹೊರಗೆಡವಿದ್ದಾರೆ.

ಮತ್ತೊಂದೆಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಬರೆದಿರುವ 15 ಅಂಶಗಳನ್ನೊಳಗೊಂಡ ಪತ್ರದಲ್ಲಿ, ಸರ್ಕಾರದ ಹಲವು ಯೋಜನೆಗಳ ಅನುದಾನಗಳು ಇನ್ನೂ ಲಭಿಸದಿರುವ ಬಗ್ಗೆ, ಮತ್ತು ನೋಟ್ ಬ್ಯಾನ್ ನಿಂದ ಉಂಟಾದ ಆರ್ಥಿಕ ನಷ್ಟಗಳಿಗೆ ಸೂಕ್ತ ಪರಿಹಾರವೊಪ್ಪಿಸುವಂತೆ ಬೇಡಿಕೆಯನ್ನಿಟ್ಟಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯ ವೇಳೆ ಮೋದಿ, ರಾಹುಲ್, ಬಿಎಸ್.ಪಿ ಮತ್ತು ಸಮಾಜವಾದಿ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷವೊಂದು 15 ವರ್ಷಗಳಿಂದ ಮಗನನ್ನು ಆಡಳಿತದಲ್ಲಿ ಭದ್ರಗೊಳಿಸಲು ಪ್ರಯತ್ನಿಸುತ್ತಿದ್ದರೂ ಇನ್ನೂ ಯಶಸ್ಚಿಯಾಗಿಲ್ಲ. ಮತ್ತೊಂದು ಪಕ್ಷ ಕಪ್ಪುಹಣವನ್ನು ಉಳಿಸಿಕೊಳ್ಳಲು ಸ್ಥಳಾವಕಾಶಗಳಿಲ್ಲದೆ ಚಡಪಡಿಸುತ್ತಿದೆ. ಹಣವನ್ನು ರಾಶಿ ಹಾಕಲು ಬ್ಯಾಂಕುಗಳಿಗಾಗಿ ಹುಡುಕಾಡುತ್ತಿದ್ದಾರೆ. ಮತ್ತೊಂದು ಪಕ್ಷದ ಪೂರ್ತಿ ಶಕ್ತಿ, ಕುಟುಂಬವನ್ನು ಉಳಿಸಲು ಮಾತ್ರ ಉಪಯೋಗವಾಗುತ್ತಿದೆ ಎಂದು ಲೇವಡಿ ಮಾಡಿದರು.

ವೈರಲ್ ವೀಡಿಯೋ ನೋಡಿ:

nkhap

 

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಿಂಡರ್ ಗಾರ್ಟನ್ ಗೆ ನುಗ್ಗಿ ಮಕ್ಕಳ ಮೇಲೆ ಬ್ಲೇಡ್ ನಿಂದ ದಾಳಿ ನಡೆಸಿದ ಆಗಂತುಕ

ಮುಂದಿನ ಸುದ್ದಿ »

ಟ್ರಂಪ್‌ ಆಪ್ತ ಸಹಾಯಕರಾಗಿ ಭಾರತೀಯ ಯುವಕ ನೇಮಕ

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×