Wednesday January 4 2017

Follow on us:

Contact Us
1
  5248

ಮುಸ್ಲಿಮರೇ,ನಿಮ್ಮ ಮತಗಳನ್ನು ಒಡೆಯದಿರಿ: ಮಾಯಾವತಿ ಮನವಿ

ನ್ಯೂಸ್ ಕನ್ನಡ ವರದಿ (4-1-17): ಲಖನೌ: ಉತ್ತರಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯಲ್ಲಿ  ನಿಮ್ಮ ಮತಗಳನ್ನು ಒಡೆಯದಿರಿ ಎಂದು ಮುಸ್ಲಿಮರಲ್ಲಿ  ಬಿ.ಎಸ್.ಪಿ ಅಧ್ಯಕ್ಷೆ ಮಾಯಾವತಿ ಮನವಿ ಮಾಡಿದ್ದು , ಪೊಳ್ಳು ಭರವಸೆಗಳಿಗೆ  ದಲಿತರು ಮರುಳಾಗುವುದಿಲ್ಲವೆಂದು ಹೇಳಿದ್ದಾರೆ.

ಅಧಿಕಾರದಾಸೆಯಿಂದ ಆಂತರಿಕ ಸಮಸ್ಯೆ ಎದುರಿಸುತ್ತಿರುವ ಸಮಾಜವಾದಿ ಪಕ್ಷಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕದಿರುವಂತೆ ಮುಸ್ಲಿಮರಿಗೆ ಮಾಯಾವತಿ ಮನವಿ ಮಾಡಿದ್ದಾರೆ.

ಸಮಾಜವಾದಿ ಪಕ್ಷ ಈಗ ಎರಡು ಭಾಗಗಳಾಗಿದೆ. ಸಮಾಜವಾದಿ ಪಕ್ಷದವರು ತಮ್ಮ ಮತಗಳನ್ನು ಒಡೆಯದಂತೆ ಚುನಾವಣೆಯ ವೇಳೆ ಮುಸ್ಲಿಮರು ಬಹಳ ಎಚ್ಚರಿಕೆಯಿಂದ ಇರಬೇಕು, ಎಂದು ಮಾಯಾವತಿ ಹೇಳಿದ್ದಾರೆ.

ಜಾತಿ ಆಧಾರಿತ ರಾಜಕೀಯದ ಮೇಲೆ ತನಗೆ ನಂಬಿಕೆಯಿದೆ ಎಂಬ ಆರೋಪವನ್ನು ಮಾಯಾವತಿ ಅಲ್ಲಗೆಳೆದಿದ್ದು, ನನಗೆ ಎಲ್ಲ ಸಮುದಾಯಗಳ ಹಿತದ ಮೇಲೆ ಆಸಕ್ತಿ ಮತ್ತು ನಂಬಿಕೆ ಇದೆ, ಎಲ್ಲಾ ಜಾತಿಯವರಿಗೂ ಪಕ್ಷದ ಟಿಕೆಟ್ ಗಳನ್ನು ಸಮಾನವಾಗಿ ಹಂಚಿದ್ದೇನೆ ಎನ್ನುತಾ, ಕಳೆದ ಚುನಾವಣೆಯಲ್ಲಿ ಬಿ ಎಸ್ ಪಿ ಪಕ್ಷದಿಂದ ಸೆಣಸಿದ್ದ ಅಭ್ಯರ್ಥಿಗಳ ಪಟ್ಟಿ ನೀಡಿದ್ದಾರೆ. ಬ್ರಾಹ್ಮಣರಿಗೆ 66 ಕ್ಷೇತ್ರಗಳಲ್ಲಿ, ಕ್ಷತ್ರಿಯರಿಗೆ 36 ಮತ್ತು ಇತರ ಸಮುದಾಯಗಳಿಗೆ 11 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಿದ್ದಾಗಿ ಮಾಯಾವತಿ ಹೇಳಿದ್ದಾರೆ.

ಮುಸ್ಲಿಂ ಮತ್ತು ಉಚ್ಚ ಜಾತಿಗಳನ್ನು ಒಲಿಸುವ ಪ್ರಯತ್ನ ನಡೆಸಿರುವ ಮಾಯಾವತಿ, ತಮ್ಮ ಆಡಳಿತಾವಧಿಯಲ್ಲಿ, ಉಚ್ಚ ಜಾತಿಗಳ ಕುಂದುಕೊರತೆಗಳನ್ನು ಕೂಡಾ ಪರಿಗಣಿಸಲಾಗಿತ್ತು ಎಂದಿದ್ದಾರೆ. ಉಚ್ಚ ಜಾತಿಗಳು, ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಮೀಸಲಾತಿ ನೀಡಬೇಕೆಂದು ಲೋಕಸಭೆಯಲ್ಲಿ ನಮ್ಮ ಪಕ್ಷ ವಾದಿಸಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಕೆಟ್ಟ ಸ್ಥಿತಿಯಲ್ಲಿದೆ ಎಂದಿರುವ ಬಿ.ಎಸ್.ಪಿ ಮುಖ್ಯಸ್ಥೆ, ಭೀಮ್ ರಾವ್ ಅಂಬೇಡ್ಕರ್ ಹೆಸರಿನಲ್ಲಿ ಯೋಜನೆಗಳನ್ನು  ಘೋಷಣೆ ಮಾಡಿಬಿಟ್ಟರೆ ದಲಿತರು ಅದಕ್ಕೆ ಮರುಳಾಗುವುದಿಲ್ಲ ಎಂದು ಮಾಯಾವತಿ ಮೋಧಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ದಲಿತರನ್ನು ಮರುಳರಲ್ಲ, ದಲಿತರಿಗೆ ಎಲ್ಲವೂ ಚೆನ್ನಾಗಿ ತಿಳಿದಿದೆ. ರೋಹಿತ್ ವೇಮುಲಾ ಅವರ ಕೊಲೆ ಮತ್ತು ಗುಜರಾತಿನ ಉನಾದಲ್ಲಿ ನಡೆದ ದಲಿತರ ಮೇಲಿನ ಹಲ್ಲೆಯಂತಹ ಘಟನೆಗಳನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.

nkhap

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ತಮಿಳುನಾಡಿಗೆ ಮತ್ತೆ 2 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂಕೋರ್ಟ್ ಸೂಚನೆ

ಮುಂದಿನ ಸುದ್ದಿ »

ಎಸ್ ಪಿ ಶಾಸಕನ ಅಂಗರಕ್ಷಕನ ಖಾತೆಯಲ್ಲಿ 100 ಕೋಟಿ ರೂ.!

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×