Tuesday February 13 2018

Follow on us:

Contact Us
    417

ಖಾಕಿ ಚಡ್ಡಿ ಮತ್ತು ಬಿದಿರಿನ ಕೋಲು ಹಿಡಿದ ಗುಂಪನ್ನು ಸೇನೆಗೆ ಹೋಲಿಸಬೇಡಿ: ಶಶಿ ತರೂರ್

ನ್ಯೂಸ್ ಕನ್ನಡ ವರದಿ-(13.2.18): ನವದೆಹಲಿ: ಇತ್ತೀಚಿಗೆ ಬಿಹಾರದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್, ‘ದೇಶಕ್ಕಾಗಿ ಆರೆಸ್ಸೆಸ್ ಕೇವಲ ಮೂರು ದಿನಗಳಲ್ಲಿ ಸೇನೆಯನ್ನು ರಚಿಸುತ್ತದೆ, ಇದೇ ಭಾರತೀಯ ಸೇನೆಯಾಗಿದ್ದರೆ 6-7 ತಿಂಗಳುಗಳ ಕಾಲ ತೆಗೆದುಕೊಳ್ಳುತ್ತದೆ’ ಎಂಬ ಹೇಳಿಕೆ ದೇಶಾದ್ಯಂತ ವಿವಾದವನ್ನೇ ಸೃಷ್ಟಿಸಿದ್ದು, ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಪ್ರತಿಕ್ರಿಯಿಸಿ ಭಾಗವತ್ ಅವರ ಇಂತಹ ಹೇಳಿಕೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಹುತಾತ್ಮ ಯೋಧರನ್ನು ಅವಮಾನ ಮಾಡಿದಂತಾಗಿದೆ , ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದ್ದರು.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್, ” ಕಾಲಿಗೆ ಖಾಕಿ ಶಾರ್ಟ್ಸ್ ಧರಿಸಿ ಬಿದಿರಿನ ಕೋಲು ಹಿಡಿದ ಗುಂಪನ್ನು ದಯವಿಟ್ಟು ಸೇನೆಗೆ ಹೋಲಿಸಬೇಡಿ, ಆರೆಸ್ಸೆಸ್ ಜತೆ ಸೇನೆಯನ್ನು ಹೋಲಿಕೆ ಮಾಡಿರುವ ಅವರ ಹೇಳಿಕೆಯಿಂದ ನನಗೆ ಅಘಾತವಾಗಿದೆ” ಎಂದು ಹೇಳಿದ್ದಾರೆ. ಮೋಹನ್ ಭಾಗವತ್ ಅವರ ಹೇಳಿಕೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದು, ಈ ರೀತಿ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಫೊಖ್ರಾನ್ ನಲ್ಲಿ ಬಾಂಬ್ ಸ್ಫೋಟ: ವೀರಯೋಧ ಕರ್ನಾಟಕದ ಜಾವೇದ್ ಹುತಾತ್ಮ!

ಮುಂದಿನ ಸುದ್ದಿ »

ಫೆಬ್ರವರಿ.17: ದಾವಣಗೆರೆ ಮತ್ತು ಸುಳ್ಯದಲ್ಲಿ ಪಾಪ್ಯುಲರ್ ಫ್ರಂಟ್ ಡೇ ಕಾರ್ಯಕ್ರಮ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×