Friday October 20 2017

Follow on us:

Contact Us
    684

ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 30 ಮಂದಿ ಮೃತ್ಯು

ನ್ಯೂಸ್ ಕನ್ನಡ ವರದಿ-(20.10.17): ಅಫಘಾನಿಸ್ತಾನದ ಮಸೀದಿಯೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಸುಮಾರು 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ಥಾನ ಆಂತರಿಕ ಸಚಿವಾಲಯದ ಅಧಿಕೃತರು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಮೇಜರ್ ಜನರಲ್ ಅಲಿಮಸ್ತ್ ಮೊಮಾಂದ್ ಪ್ರಕಾರ, ಶುಕ್ರವಾರದಂದು ಮಸೀದಿಗೆಂದು ಆಗಮಿಸಿದ ಆಗಂತುಕರು ದಷ್ಟಿ ಬಾಚ್ ಏರಿಯಾದಲ್ಲಿರುವ ಇಮಾಮ್ ಝಮಾನ್ ಮಸೀದಿಯಲ್ಲಿ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ದಾಳಿಕೋರರಲ್ಲಿ ಇಬ್ಬರ ಮೃತದೇಹವು ಪತ್ತೆಯಾಗಿದ್ದು, ಸುಮಾರು 30 ಮಂದಿಯ ಮೃತದೇಹವು ಈ ವರೆಗೆ ದೊರಕಿದೆ ಎಂದು ಇಸ್ತಿಕ್ಲಾಲ್ ಆಸ್ಪತ್ರೆಯ ಅಧಿಕಾರಿ ಸಬೀರ್ ನಸೀಬ್ ತಿಳಿಸಿದ್ದಾರೆ. ಶಿಯಾ ಮಸೀದಿಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಈ ವರೆಗೆ ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ ಎನ್ನಲಾಗಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವಯೋವೃದ್ಧನಿಗೆ ಚಪ್ಪಲಿಯಿಂದ ಹೊಡೆದು ಎಂಜಲು ನೆಕ್ಕಿಸಿದ ವಿಕೃತರು!

ಮುಂದಿನ ಸುದ್ದಿ »

ನನ್ನನ್ನು ಯಾಕೆ ಸ್ವರ್ಗಕ್ಕೆ ಕರೆದೊಯ್ಯಲಿಲ್ಲ?

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×