Monday June 19 2017

Follow on us:

Contact Us

ರಾಷ್ಟ್ರಪತಿ ಚುನಾವಣೆ: ಮುಲಾಯಂ ಬಿಜೆಪಿಗೆ ಬೆಂಬಲ- ಅಖಿಲೇಶ್ ಕಾಂಗ್ರೆಸ್ ಗೆ ಬೆಂಬಲ !!

ನ್ಯೂಸ್ ಕನ್ನಡ ವರದಿ-(19.6.17) ಲಕ್ನೊ: ಮುಲಾಯಂಸಿಂಗ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್ ನಡುವೆ ಕಲಹ ಕೊನೆಗೊಂಡಿಲ್ಲ. ಕಳೆದ ವಿಧಾನಸಭಾ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆಯ ವರೆಗೂ ಈ ಕಲಹೆ ಮುಂದುವರಿದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನ ಭೇಟಿಯಾದ ವೆಂಕಯ್ಯನಾಯ್ಡು ಮತ್ತು ರಾಜನಾಥ್ ಸಿಂಗ್‍ರಿಗೆ ಬಿಜೆಪಿಗೆ ಬೆಂಬಲ ನೀಡುವುದಾಗಿ ಮುಲಾಯಂ ತಿಳಿಸಿದ್ದಾರೆ.

ಮುಲಾಯಂರ ಬೇರೆ ನಿರ್ಧಾರ ತಳೆದದ್ದರಿಂದ ಸಮಾಜವಾದಿ ಪಕ್ಷದೊಳಗೆ ಅಸ್ಪಷ್ಟತೆ ಕಾಡುತ್ತಿದೆ. ವರದಿಯಾಗಿರುವ ಪ್ರಕಾರ ಶುಕ್ರವಾರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ವೆಂಕಯ್ಯನಾಯ್ಡು ಭೇಟಿಯಾಗಿದ್ದರು. ಮೂಲಗಳು ತಿಳಿಸಿರುವ ಪ್ರಕಾರ ಮುಲಾಯಂ ಶರ್ತಬದ್ಧವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ಸರ್ವಸಮ್ಮತದ ವ್ಯಕ್ತಿ ಆಗಿರಬೇಕು ಮತ್ತು ಅವರು ಕಟು ಸಂಘಪರಿವಾರದ ವ್ಯಕ್ತಿ ಆಗಿರಬಾರದು ಎಂದು ಮುಲಾಯಂ ಹೇಳಿದ್ದಾರೆ.

ಆದರೆ ಅಖಿಲೇಶ್ ಯಾದವ್ ಕಾಂಗ್ರೆಸ್ ನೇತೃತ್ವದ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಗೆ ಈಗಾಗಲೇ ಬೆಂಬಲವನ್ನು ಘೋಷಿಸಿದ್ದಾರೆ. ಹೀಗಿರುವಾಗ ಮುಲಾಯಂರ ಬಿಜೆಪಿ ಸಂಗ, ಅಖಿಲೇಶ್‍ಗೆ ಭಾರೀ ತಲೆನೋವು ಎನಿಸಿಕೊಳ್ಳಲಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮುಸ್ಲಿಮರು ಮುಗ್ದರು, ಕಾಂಗ್ರೇಸ್ಸ್ ಅವರಿಗೆ ಮೋಸ ಮಾಡುತ್ತಿದೆ: ಕಲ್ಲಡ್ಕ ಪ್ರಭಾಕರ ಭಟ್ಟ್

ಮುಂದಿನ ಸುದ್ದಿ »

ಪಾಕ್‌ಗೆ ಹೋಗಿ ಜಯವನ್ನು ಸಂಭ್ರಮಿಸಿ: ಹುರಿಯತ್ ನಾಯಕನ ವಿರುದ್ಧ ಗಂಭೀರ್ ಆಕ್ರೋಶ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×