Friday October 20 2017

Follow on us:

Contact Us
    454

ವಯೋವೃದ್ಧನಿಗೆ ಚಪ್ಪಲಿಯಿಂದ ಹೊಡೆದು ಎಂಜಲು ನೆಕ್ಕಿಸಿದ ವಿಕೃತರು!

ಪಾಟ್ನಾ: ದೇಶದ ಹಲವೆಡೆಗಳಲ್ಲಿ ಅಮಾನವೀಯ ಘಟನೆಗಳು ವರದಿಯಾಗುತ್ತಿದ್ದು, ವೃದ್ಧರು, ಮಹಿಳೆಯರೆನ್ನದೇ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದೀಗ ಪಾಟ್ನಾದಲ್ಲಿ ಅಮಾನವೀಯ ಘಟನೆಯೊಂದರಲ್ಲಿ ವೃದ್ಧನೊಬ್ಬ ಬಾಗಿಲು ತಟ್ಟದೇ ಗ್ರಾಮ ಪಂಚಾಯತ್‌ ಅಧ್ಯಕ್ಷನ ಮನೆಯೊಳಗೆ ಪ್ರವೇಶ ಮಾಡಿದ್ದಾನೆ ಎಂಬ ಕಾರಣಕ್ಕೆ ಅತ್ಯಂತ ಕೀಳು ಮಟ್ಟದಲ್ಲಿ ಶಿಕ್ಷಿಸಲಾಗಿದೆ.

ಸರ್ಕಾರಿ ಸೌಲಭ್ಯ ಕೇಳಿಕೊಂಡು ಬಂದ ವೃದ್ಧ ಮನೆಯೊಳಗೆ ಏಕಾಏಕಿ ಪ್ರವೇಶಿಸಿದ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರು ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾತ್ರವಲ್ಲದೆ ನೆಲಕ್ಕೆ ಬೀಳಿಸಿ ತನ್ನ ಎಂಜಲನ್ನು ತಾನೇ ನೆಕ್ಕುವಂತೆ ಮಾಡಿದ್ದಾರೆ. ಘಟನೆಯ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತಿಶ್‌ ಕುಮಾರ್‌ ಅವರ ತವರು ಜಿಲ್ಲೆ ನಳಂದಾದ ಅಜೈಪುರ್‌ನಲ್ಲೇ ಘಟನೆ ನಡೆದಿದೆ. ಘಟನೆಯನ್ನು ಸಚಿವ ನಂದ ಕಿಶೋರ್‌ ಯಾದವ್‌ ಅವರು ಖಂಡಿಸಿದ್ದು , ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬೇರೆ ದೇಶಗಳ ಪರವಾಗಿ ಕ್ರಿಕೆಟ್ ಆಡಲು ನಾನು ಉತ್ಸುಕನಾಗಿದ್ದೇನೆ: ಎಸ್. ಶ್ರೀಶಾಂತ್

ಮುಂದಿನ ಸುದ್ದಿ »

ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 30 ಮಂದಿ ಮೃತ್ಯು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×