Thursday January 5 2017

Follow on us:

Contact Us
7
  1810

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ: ಹುಸೇನ್ ಆರೋಪ

ನ್ಯೂಸ್ ಕನ್ನಡ ವರದಿ (5-1-17): ಮಡಿಕೇರಿ: ನೋಟುಗಳನ್ನು ಅಮಾನ್ಯೀಕರಣಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ಸರ್ಜಿಕಲ್ ದಾಳಿ ನಡೆಸಿ, ಹಣವನ್ನು ಲೂಟಿಮಾಡುವ ಕಾರ್ಯ ಮಾಡಿದೆ ಎಂದು ಎಐಸಿಸಿ ಸಂಯೋಜಕಿ ಉಷಾ ನಾಯ್ಡು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ನೋಟುಗಳನ್ನು ನಿಯಂತ್ರಣ ಮಾಡುತ್ತೇವೆ ಎಂದು ಹೇಳಿಕೊಂಡ ಕೇಂದ್ರ ಸರಕಾರ, ನ.8 ರಂದು ನೋಟುಗಳನ್ನು ಅಮಾನ್ಯೀಕರಣಗೊಳಿಸಿತು. ಆದರೆ, ಮಾರನೇ ದಿನವೇ 2 ಸಾವಿರ ರೂ. ಮುಖ ಬೆಲೆಯ ನಕಲಿ ನೋಟುಗಳು ಚಾಲವಣೆಗೊಂಡವು ಎಂದು ಟೀಕಿಸಿದರು.

ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೂತನ ನೋಟುಗಳು ಬಿಜೆಪಿ ನಾಯಕರ ಬಳಿಯಲ್ಲೆ ಪತ್ತೆಯಾಗಿದೆ. ಗುಜರಾತ್‍ ನ ಸಹಕಾರಿ ಬ್ಯಾಂಕ್‍ ವೊಂದರಲ್ಲಿ ಬಿಜೆಪಿಗೆ ಸೇರಿದ 500 ಕೊಟಿ ರೂ. ಕೇವಲ 3 ದಿನಗಳಲ್ಲಿ ಜಮೆಯಾಗಿದೆ. ಇದು ಕೇಂದ್ರ ಸರ್ಕಾರದ ಲೂಟಿ ಮಾಡುವ ಸಂಚಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೊಡಗಿನಂತಹ ಪ್ರದೇಶದಲ್ಲಿ ಬೆಳೆಗಾರರು ಹಾಗೂ ಕಾರ್ಮಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. “ನನ್ನ ಹಣ, ನನ್ನ ಖರ್ಚು” ಎನ್ನುವ ನೀತಿ ಪಾಲನೆಯಾಗಬೇಕೇ ಹೊರತು, ದುಡಿದ ಹಣದ ಮೇಲೆ ಯಾರ ನಿಯಂತ್ರಣವೂ ಇರಬಾರದು. ದೇಶದ ಜನರ ಆರ್ಥಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವ ಪ್ರಧಾನ ಮಂತ್ರಿಗಳಿಂದ ಮಹಿಳಾ ವರ್ಗಕ್ಕೂ ಸಂಕಷ್ಟ ಎದುರಾಗಿದೆ. ಕಷ್ಟದ ದಿನಗಳಿಗಾಗಿ ಹಣವನ್ನು ಕೂಡಿಡುವುದು ಈ ದೇಶದ ಮಹಿಳೆಯರ ಸಂಸ್ಕೃತಿಯಾಗಿದ್ದು, ಇದಕ್ಕೂ ಕೇಂದ್ರ ಸರ್ಕಾರ ಅಡ್ಡಿಯಾಗಿದೆ ಎಂದು ಉಷಾ ನಾಯ್ಡು ಟೀಕಿಸಿದರು.

ದೇಶದಲ್ಲಿರುವ ಅವಿದ್ಯಾವಂತರ ಬಳಿ ಯಾವುದೇ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳಿಲ್ಲ. ಆದರೂ ಕ್ಯಾಶ್ ಲೆಸ್ ವ್ಯವಹಾರವೆನ್ನುವ ಆತುರದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಆರ್ಥಿಕ ಸ್ಥಿತಿ ಸುಧಾರಿಸಲು ಇನ್ನೂ 9 ತಿಂಗಳು ಬೇಕೆಂದು ಈಗಾಗಲೆ ಆರ್‍.ಬಿಐ ತಿಳಿಸಿದೆ. ಇದರಿಂದ ಆರ್ಥಿಕ ಕ್ಷೇತ್ರದ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮಗಳು ಎದುರಾಗಬಹುದೆಂದು ಅಭಿಪ್ರಾಯಪಟ್ಟ ಉಷಾ ನಾಯ್ಡು, ಜನರಿಂದ ಆಯ್ಕೆಯಾಗಿ ಬಂದ ಪ್ರಧಾನಿ ಮೋದಿ ಅವರು ಏಕ ನಿರ್ಧಾರವನ್ನು ತೆಗೆದುಕೊಳ್ಳದೆ, ಜನರ ಭಾವನೆಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ಹುಸೇನ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಯಾವುದೇ ಆರ್ಥಿಕ ತಜ್ಞರು ಸ್ವಾಗತ ಮಾಡಿಲ್ಲವೆಂದು ಅಭಿಪ್ರಾಯಪಟ್ಟ ಅವರು, ನೋಟು ಅಮಾನ್ಯೀಕರಣಗೊಂಡು 50 ದಿನ ಕಳೆದ ನಂತರ ಜನರಲ್ಲಿದ್ದ ವಿಶ್ವಾಸ ಹುಸಿಯಾಗಿದೆ ಎಂದರು. ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡುವುದಕ್ಕಾಗಿ ಡಿಜಿಟಲ್ ವ್ಯವಹಾರವನ್ನು ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹುಸೇನ್ ಟೀಕಿಸಿದರು.

nkicmhap

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬರ ಪರಿಹಾರ ಕೋರಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ: ಜಿ.ಪಂ ನಿರ್ಧಾರ

ಮುಂದಿನ ಸುದ್ದಿ »

ನೋಟು ನಿಷೇಧದ ನಂತರ ಆರ್ಥಿಕತೆಯ ಕುಸಿತ: ಬಡವರ ಬಗ್ಗೆ ಕಾಳಜಿ ವಹಿಸಿ ಎಂದ ರಾಷ್ಟ್ರಪತಿ

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×