Saturday January 7 2017

Follow on us:

Contact Us
    15937

ಅಶ್ಲೀಲ ಪಾತ್ರಗಳಲ್ಲಿ ನಟಿಸುವವರಿಂದ ನೈತಿಕತೆಯ ಪಾಠ; ಸಾಮಾಜಿಕ ತಾಣದಲ್ಲಿ ಅಕ್ಷಯ್ ಕುಮಾರ್ ವಿರುದ್ಧ ಆಕ್ರೋಶ

ನ್ಯೂಸ್ ಕನ್ನಡ ಸ್ಪೆಷಲ್: ಇತ್ತೀಚೆಗೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದಂತಹಾ ಹೀನ ಘಟನೆ ನಡೆದ ನಂತರ, ಈ ಬಗ್ಗೆ ಹಲವಾರು ಮಂದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಸದಾ ಮಹಿಳೆಯರನ್ನು ತಮ್ಮ ಸಿನೆಮಾಗಳಲ್ಲಿ ಅಶ್ಲೀಲವಾಗಿ ತೋರಿಸಿ ಹಣ ಸಂಪಾದಿಸುವ ಚಿತ್ರ ತಾರೆಗಳು ಕೂಡಾ ಅನುಕಂಪದ ನಾಟಕವಾಡುತ್ತಾರೆ. ತಮ್ಮ ಚಿತ್ರಗಳಲ್ಲಿ ಮಹಿಳೆಯರನ್ನು ಕಾಮೋದ್ರೇಕ ಸನ್ನಿವೇಶಗಳಲ್ಲಿ ಬಳಸಿಕೊಂಡು ಹಣ ಗಳಿಸುವವರಿಗೆ, ಮಹಿಳೆಯರ ಬಗ್ಗೆ ಅನುಕಂಪದ ಮಾತುಗಳನ್ನಾಡುವ ಯಾವ ನೈತಿಕ ಹಕ್ಕು ಇದೆ?

l_024824b0ಅಕ್ಷಯ್ ಕುಮಾರ್ ಎಂಬ ಬಾಲಿವುಡ್ ನಟನ ಹೆಸರು ಕೇಳಿದೊಡನೇ ಜನರಿಗೆ ತಟ್ಟನೆ ನೆನಪಾಗುವುದು ಚಲನ ಚಿತ್ರಗಳಲ್ಲಿ ಕರಾಟೆಯಂತಹ ಸಾಹಸಮಯ ಸನ್ನಿವೇಶಗಳು, ವಿವಾದಗಳು ಮತ್ತು ಅಶ್ಲೀಲತೆ. ಅಸಲಿಗೆ ಈ ನಟ ಒಪ್ಪಿಕೊಳ್ಳುವ ಬಹುತೇಕ ಪಾತ್ರಗಳು ಸ್ತ್ರೀಗಳ ಕುರಿತು ಕೀಳಭಿರುಚಿಯನ್ನು ಹೊಂದಿರುವ ಪಾತ್ರಗಳು ಮಾತ್ರವಾಗಿರುತ್ತದೆ ಎಂಬುವುದು ವಾಸ್ತವ. ಕಮ್ಮನಹಳ್ಳಿ ಘಟನೆಯ ಬಗ್ಗೆ ಇದೇ ಅಕ್ಶಯ್ ಕುಮಾರ್ ಕೂಡಾ ಸಾಮಾಜಿಕ ತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಸಾಮಾಜಿಕ ತಾಣದ ಬಳಕೆದಾರರಿಂದ ಉಗಿಸಿಕೊಳ್ಳುತ್ತಿದ್ದಾರೆ.

Captureಆದರೆ ಈ ಬಾರಿ ಅಕ್ಷಯ್ ಕುಮಾರ್ ಸ್ತ್ರೀ ಪರ ಆಡಿರುವ ಮಾತುಗಳು ಅವರ ಸ್ವತಃ ವ್ಯಕ್ತಿತ್ವಕ್ಕೆ ಹೊಂದಿಕೆಯಾಗದಿದ್ದರಿಂದಲೋ ಏನೋ, ಅವರ ಹೇಳಿಕೆ ದೇಶದಾದ್ಯಂತ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದೆ, ವಿಮರ್ಶೆಗೊಳಗಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಪ್ರತಿಕ್ರಿಯೆ ನೀಡಿದ್ದ ಅಕ್ಷಯ್ ಕುಮಾರ್, ದುಷ್ಕರ್ಮಿಗಳನ್ನು ಮೃಗಗಳು, ಇದೊಂದು ಅವಮಾನಕರ ಘಟನೆ , ಮನುಷ್ಯರು ಮೃಗಗಳಾಗಿ ಬದಲಾಗುತ್ತಿದ್ದೇವೋ ಎಂದು ತೀರಾ ಸದ್ಗುಣಶೀಲನಂತೆ ಪ್ರತಿಕ್ರಿಯಿಸಿದ್ದರು. ಸಮಾಜಕ್ಕೆ ಮಾದರಿಯಾಗುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬದಲು, ಸದಾ ಜೇಬು ತುಂಬಿಸುವ, ಅಬ್ಬರದ ಅಶ್ಲೀಲ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ, ಪ್ರಚಾರ ಪ್ರಿಯ ನಟನ ಈ ಹೇಳಿಕೆ ಕೇವಲ ಪ್ರಚಾರ ಪಡೆಯುವ, ಬಾಲಿವುಡ್ ನಲ್ಲಿ ಕಳೆಗುಂದಿರುವ ತನ್ನ ಹಿಡಿತವನ್ನು ಕೊಂಚಮಟ್ಟಿಗೆ ಬಿಗಿಗೊಳಿಸುವ ಪ್ರಯತ್ನವೇ ಎಂಬ ಸಹಜ ಅನುಮಾನ ವಿಮರ್ಶಕರನ್ನು ಕಾಡಿದ್ದು ತಪ್ಪಲ್ಲ. ಬೆಂಗಳೂರಿನ ಘಟನೆಯಿಂದ ರಕ್ತ ಕುದಿಯಿತೆನ್ನುವ ಅಕ್ಷಯ್, ಮಹಿಳೆಯರನ್ನು ಗೌರವಿಸದ ಸಮಾಜ ಅಮಾನವೀಯ ಎಂಬ ಹೇಳಿಕೆಯು, ಸಿನೆಮಾ ಬದುಕಿನಲ್ಲಿ ಮಾತ್ರವಲ್ಲದೇ ವೈಯುಕ್ತಿಕ ಬದುಕಿನಲ್ಲೂ ಸದಾ ವಿವಾದಗಳಲ್ಲಿ ಮಿಂದೇಳುವ , ಒಬ್ಬ ಪಕ್ಕಾ ಫ್ಲರ್ಟ್ ಆಗಿ ಹೆಸರು ಪಡೆದಿರುವ ಬ್ಯಾಡ್ ಬಾಯ್ ಅಕ್ಷಯ್ ನಿಗೆ ತುಸು ಹೇಚ್ಚೇ ಹೊಂದುತ್ತದೆ. ಅಕ್ಷಯ್ ಕುಮಾರ್ ಸಿನೆಮಾಗಳೆಂದರೆ ಕೆಲವು ಹಸಿ-ಬಿಸಿ ದೃಶ್ಯಗಳ, ಅಶ್ಲೀಲ ಹಾಡುಗಳ (ವಿ)ಚಿತ್ರಗಳು. ಅಕ್ಷಯ್ ಸಿನೆಮಾಗಳಲ್ಲಿ ಕೌಟುಂಬಿಕ ಚಿತ್ರಗಳು ತೀರಾ ಕಡಿಮೆ. ಪಡ್ಡೆ ಹುಡುಗರಿಗೆ ಬಲುಪ್ರಿಯನಾಗುವ ನಟರ ಸಾಲಿನಲ್ಲಿ ಅಕ್ಷಯ್ ರಿಗೆ ಮಹತ್ವದ ಸ್ಥಾನವಿದೆ. ತನ್ನನ್ನೇ ಮಾದರಿ ಮಾಡಿಕೊಂಡ, ಅಥವಾ ತನ್ನಂತವರಿಂದ ಪರೋಕ್ಷವಾಗಿ ಕುಚೇಷ್ಟಗಳಿಗೆ ಬಿದ್ದು ಹೋದ ಯುವ ಸಮೂಹಕ್ಕೆ ಮತ್ತೆ ಅಕ್ಷಯ್ ಸಭ್ಯತೆಯ ಪಾಠ ಹೇಳಿಕೊಡುತ್ತಿರುವುದು ವಿಪರ್ಯಾಸವಾಗಿದೆ.

f65265f22463573219aa8d9063251cb8ಅಕ್ಷಯ್ ವಿವಾದಗಳು:

►ಅಕ್ಷಯ್ ಕುಮಾರ್ 2009ರ ಫ್ಯಾಶನ್ ಶೋ ಕಾರ್ಯಕ್ರಮವೊಂದರಲ್ಲಿ ತನ್ನ ಪತ್ನಿಯಿಂದ ಪ್ಯಾಂ ಟ್ ನ ಬಟನ್ ತೆಗೆಸಿದ್ದರು.

►ಟಿಪ್ ಟಿಪ್ ಬರ್ಸಾ ಪಾನಿ ಚಿತ್ರದ ಬಳಿಕ ಅಕ್ಷಯ್ ಕುಮಾರ್ ಮತ್ತು ರವೀನಾರ ಮಧ್ಯೆ ಸಂಬಂಧದ ಬಗ್ಗೆ ಚರ್ಚೆಯಾಗಿದ್ದವು.

► ಐತ್ರಾಝ್ ಚಿತ್ರದ ಬಳಿಕ ಪ್ರಿಯಾಂಕ ಛೋಪ್ರಾ-ಅಕ್ಷಯ್ ಜೋಡಿಯ ತೆರೆಮರೆಯಾಟ ಪತ್ರಿಕೆಗಳಿಗೆ ಆಹಾರವಾಗಿತ್ತು. ನಂತರದ ದಿನಗಳಲ್ಲಿ ಕೆಲಕಾಲ ಅಕ್ಷಯ್ ರಿಗೆ ನಿರ್ದಿಷ್ಟ ಸಿನೆಮಾಗಲ್ಲಿ ನಟಿಸದಂತೆ ನಿಷೇಧಗಳಿತ್ತು.

►ಶಿಲ್ಪಾ ಶೆಟ್ಟಿ ಮತ್ತು ಹಲವು ನಟಿಯರೊಂದಿಗಿನ ಅಕ್ಷಯ್ ರ ಸಂಬಂಧಗಳ ಬಗ್ಗೆ ಚರ್ಚೆಯಾಗಿತ್ತು.

1989a711e3d8e5dce1811a22e325cd61ಇಲ್ಲಿ ಕೆಲವು ಅತನ ಕೆಲವು ಫೋಟೊಗಳನ್ನು ಮಾತ್ರ ಹಾಕಿದ್ದೇವೆ. ಇನ್ನು ಹೆಚ್ಚಿನ ಪ್ರಕಟಿಸಲಸಾಧ್ಯವಾದ ಫೊಟೊ ಗಳಿಗಾಗಿ ಗೂಗಲ್ ನಲ್ಲಿ ಹುಡುಕ ಬಹುದಾಗಿದೆ.

ಹೀಗೆ ಸಾಲು ಸಾಲು ವಿವಾದಗಳಲ್ಲಿ ಕಾಣಿಸಿಕೊಂಡ ಅಕ್ಷಯ್ ಇತ್ತೀಚಿನ ಸಿನಿಮಾಗಳು ಸೋತು ಕೆಂಗೆಟ್ಟಿರುವ ಅಕ್ಷಯ್, ಸ್ತ್ರೀ ಪರ ಮುಖವಾಡದೊಂದಿಗೆ ಮತ್ತೆ ಕಾಣಿಸಿಕೊಳ್ಳುವ ಸಲುವಾಗಿ ಹೀಗೊಂದು ಪ್ರತಿಕ್ರಿಯೆ ನೀಡುತ್ತಿದ್ದಾರೋ ಎಂಬ ಅನುಮಾನಗಳು ಮೂಡುವುದು ಸಹಜ. ತನ್ನ ಭೂತಕಾಲದ ವಿನೋಧಗಳನ್ನು, ಸ್ವೇಚ್ಚಾಚಾರವನ್ನು ಮರೆತ ಅಕ್ಷಯ್ ಇತರರಿಗೆ ಬೋಧಿಸುವುದರಿಂದ ಬದಲಾವಣೆ ಸಾಧ್ಯವಿಲ್ಲ… ಬೋಧಿಸಲ್ಪಡುವವರು ಬದಲಾಗಬೇಕಾದರೆ ಮೊದಲು ಬೋಧಿಸುವವರು ಬದಲಾಗಲೇಬೇಕು.

“ಗರಂ ಮಸಾಲ” ಹಾಗೂ ಇದೇ ಮಾದರಿಯ ಇತರ ಚಿತ್ರಗಳಲ್ಲಿ ಆರಂಭದಿಂದ ಅಂತ್ಯದವರೆಗೂ ಮಹಿಳೆಯರ ದೇಹ ಸಿರಿಯನ್ನು ಬಳಸಿ ಹಣ ಮಾಡಿಕೊಂಡವರಿಂದಲೇ ನೀತಿ ಪಾಠ ಕೇಳಬೇಕಾಗಿ ಬಂದಿರುವುದೇ ಬೇಸರದ ಸಂಗತಿ.

 

nkmqhhp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಟಿಪ್ಪರ್-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೆ ಸಾವು

ಮುಂದಿನ ಸುದ್ದಿ »

ಕೂಲಿ ಕಾರ್ಮಿಕರು ನಿದ್ರಿಸುತ್ತಿದ್ದ ಗುಡಿಸಲಿಗೆ ನುಗ್ಗಿದ ಕಾರು; ನಾಲ್ವರು ದುರ್ಮರಣ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×