Thursday January 5 2017

Follow on us:

Contact Us
11
  2050

ನಾನು ಅಧಿಕಾರ ವಹಿಸಿಕೊಂಡ ಬಳಿಕ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ – ನಿತಿನ್ ಗಡ್ಕರಿ

ನ್ಯೂಸ್ ಕನ್ನಡ ನೆಟ್ ವರ್ಕ್-ಹೊಸದಿಲ್ಲಿ(5-1-17): ರಸ್ತೆ ಮತ್ತು ಹೆದ್ದಾರಿ ಸಚಿವನಾಗಿ ನಾನು ಅಧಿಕಾರ ಸ್ವೀಕರಿಸಿದ ಬಳಿಕ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ, ಈ ಪ್ರಮಾಣವನ್ನು ಇಳಿಸಲು ಸೂಕ್ತ ಕ್ರಮ ಜರಗಿಸಲಾಗುವುದು ಎಂದು  ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಾನು ಸಚಿವನಾದ (ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ) ನಂತರದ ದಿನಗಳಲ್ಲಿ ರಸ್ತೆ ಅಪಘಾತಗಳು ಪ್ರತಿಶತ 4ರಷ್ಟು ಹೆಚ್ಚಳವಾಗಿದೆಯೆಂದು ಗಡ್ಕರಿ ವರದಿಗಾರರ ಮುಂದೆ ಹೇಳಿಕೊಂಡಿದ್ದಾರೆ.

ರಸ್ತೆ ಅಪಘಾತಗಳು ನಮಗೆ ತೀವ್ರ ಸಂಕಟವನ್ನುಂಟು ಮಾಡಿವೆ, ಈ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಂದ ಮುಂದೆ ರಸ್ತೆ ಅಪಘಾತಗಳ ಸಂಖ್ಯೆ ಇಳಿಮುಖವಾಗಲಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರವು ಮೋಟಾರು ವಾಹನ (ತಿದ್ದುಪಡಿ)ಕಾಯ್ದೆ 2016 ಯನ್ನು ಆಗಸ್ಟ್ ನಲ್ಲಿ ಲೋಕಸಭೆಯಲ್ಲಿ ಪರಿಚಯಿಸಿದ್ದು, ಸಂಸತ್ತಿನ ಒಪ್ಪಿಗೆಗಾಗಿ ಕಾಯುತ್ತಿದೆ ಎನ್ನಲಾಗಿದೆ.

ಅಪಘಾತಗಳ ನಿಯಂತ್ರಣಕ್ಕೆ ನಾವು ಬಹಳಷ್ಟು ಶ್ರಮಿಸಿದ್ದೇವೆ. ಕೆಲವು ಸಂಗತಿಗಳು ನಮ್ಮ ನಿಯಂತ್ರಣದಲ್ಲಿಲ್ಲದೇ ಇರುವುದರಿಂದ ಎಲ್ಲವನ್ನೂ ಅಷ್ಟು ಸುಲಭದಲ್ಲಿ ಪರಿಹರಿಸಲಾಗುತ್ತಿಲ್ಲ.  ಮೋಟಾರ್ ವಾಹನ (ತಿದ್ದುಪಡಿ) ಕಾಯ್ದೆ ಜಂಟಿ ಆಯ್ಕೆ ಸಮಿತಿಯ ಮುಂದೆ ತಲುಪಿವೆಯಾದರೂ ಅದರ ವರದಿ ನಮ್ಮ ಬಳಿಗೆ ಇನ್ನೂ ತಲುಪಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರಸ್ತೆ ಅಪಘಾತಗಳ ಪ್ರಮಾಣವನ್ನು ಅರ್ಧದಷ್ಟು ಇಳಿಸುವ ಗುರಿ ಹೊಂದಿರುವ ಗಡ್ಕರಿ,  ಜನರ ಪ್ರಾಣ ಕಾಪಾಡುವುದು ಸರ್ಕಾರಕ್ಕೆ ಬಹಳ ಮುಖ್ಯ ಎಂದಿದ್ದಾರೆ.

ಜಾಗತಿಕವಾಗಿ ಅತಿ ಹೆಚ್ಚು ಅಪಘಾತಗಳಾಗುವ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಭಾರತದಲ್ಲಿ ಪ್ರತಿವರ್ಷ ಐದು ಲಕ್ಷದಷ್ಟು ರಸ್ತೆ ಅಪಘಾತಗಳಾಗುತ್ತಿದ್ದು,  ಸುಮಾರು 1.5 ಲಕ್ಷದಷ್ಟು ಜನರು ಅಪಘಾತದಿಂದ ಮೃತಪಡುತ್ತಾರೆ. ಸುಮಾರು 3 ಲಕ್ಷದಷ್ಟು ಜನ ಗಾಯಾಳುಗಳಾಗುತ್ತಾರೆ.

2020ರ ವೇಳೆ ರಸ್ತೆ ಅಪಘಾತಗಳನ್ನು ತಗ್ಗಿಸಲು ರಾಷ್ಟ್ರೀಯ ಕಾರ್ಯ ಯೋಜನೆಯನ್ನು ಸರ್ಕಾರ ಈಗಾಗಲೇ ರೂಪಿಸಿದೆ.

nkhap

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮತ್ತೆ ಜೀವ ಪಡೆದುಕೊಂಡ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ

ಮುಂದಿನ ಸುದ್ದಿ »

ಸ್ವಾವಲಂಬನೆ, ಸ್ವಾಭಿಮಾನದ ಮತ್ತೊಂದು ಮುಖ ಶಾಂತಿದೇವಿ: ದೇಶದ ಏಕೈಕ ಮಹಿಳಾ ಮೆಕ್ಯಾನಿಕ್ ಬಗ್ಗೆ ಒಂದಿಷ್ಟು…

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×