Friday January 12 2018

Follow on us:

Contact Us

ಇಸ್ರೋದಿಂದ ಮತ್ತೊಂದು ಮೈಲುಗಲ್ಲು: ಕಾರ್ಟೋಸ್ಯಾಟ್-2 ಯಶಸ್ವೀ ಉಡಾವಣೆ

ನ್ಯೂಸ್ ಕನ್ನಡ ನವದೆಹಲಿ (12-01-2018): ಸದಾ ಒಂದಲ್ಲೊಂದು ಸಾಧನೆಯ ಮೂಲಕ ಜಗತ್ತಿನ ಗಮನ ಸೆಳೆಯುತ್ತಿರುವ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮತ್ತೊಂದು ಮಹತ್ತರ ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಇಸ್ರೋ ಕಾರ್ಟೋಸ್ಯಾಟ್-2 ಮತ್ತು ಇತರ 30 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಉಡಾಯಿಸಿದೆ.

ಇಸ್ರೋದ 100 ನೇ ಉಪಗ್ರಹವಾಗಿರುವ ಕಾರ್ಟೋಸ್ಯಾಟ್-2ನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ನೆಲೆಯಿಂದ ಉಡಾವಣೆ ಮಾಡಲಾಗಿದೆ. ಉಡಾವಣೆಗೊಂಡು ಬಾಹ್ಯಾಕಾಶ ಸೇರಿರುವ ಉಪಗ್ರಹಗಳು ವಿವಿಧ ಕ್ಷೇತ್ರಗಳಿಗೆ ಉಪಯೋಗವಾಗಲಿದೆ.

ಇಸ್ರೋ ಉಡಾವಣೆ ಮಾಡಿರುವ ಉಪಗ್ರಹಗಳಲ್ಲಿ ಭಾರತದ 3, ಕೆನಡಾ, ಫಿನ್’ಲ್ಯಾಂಡ್, ಫ್ರಾನ್ಸ್, ಕೊರಿಯಾ, ಬ್ರಿಟನ್, ಅಮೆರಿಕದ ಒಟ್ಟು 28 ಉಪಗ್ರಹಗಳು ಒಳಗೊಂಡಿದೆ ಎಂದು ಹೇಳಲಾಗಿದೆ. ಉಪಗ್ರಹ ಉಡಾವಣೆ ಕಾರ್ಯ ಬೆಳಿಗ್ಗೆ 5.30ಕ್ಕೆ ಆರಂಭಗೊಂಡಿತ್ತು. ಬೆಳಗ್ಗಿನ ಜಾವ 9.29ಕ್ಕೆ ಕಾರ್ಟೋಸ್ಯಾಟ್-2 ಸರಣಿಯ ಉಪ್ರಗ್ರಹಗಳನ್ನು ಕಕ್ಷೆಗೆ ಹಾರಿಬಿಡಲಾಗಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಾಲಕಿ ಮೇಲೆ ಅತ್ಯಾಚಾರಗೈದ ಪೊಲೀಸ್ ಕಾನ್ ಸ್ಟೇಬಲ್ ಗೆ ಸಾರ್ವಜನಿಕರಿಂದ ಥಳಿತ!

ಮುಂದಿನ ಸುದ್ದಿ »

ಮೊದಲ ಬಾರಿಗೆ ಸ್ಟೇಡಿಯಂನಲ್ಲಿ ಕುಳಿತು ಫುಟ್ಬಾಲ್ ಪಂದ್ಯ ವೀಕ್ಷಿಸಿದ ಸೌದಿ ಮಹಿಳೆಯರು!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×