Thursday December 7 2017

Follow on us:

Contact Us
    529

ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಘೋಷಣೆ: ಇಸ್ರೇಲ್ ವಿರುದ್ಧ ದಂಗೆಯೇಳಲು ಹಮಾಸ್ ನಾಯಕನ ಕರೆ!

ನ್ಯೂಸ್ ಕನ್ನಡ ವರದಿ-(07.12.17): ಇಸ್ರೇಲ್ ನ ಜೆರುಸಲೇಂ ಎಂಬ ಪ್ರದೇಶದಲ್ಲಿರುವ ಬೈತುಲ್ ಮುಖದ್ದಸ್ ಎಂಬ ಪವಿತ್ರ ಸ್ಥಳದ ವಿಚಾರದಲ್ಲಿ ಮತ್ತು ಗಡಿ, ಭೂಭಾಗಗಳ ಕುರಿತಾದಂತೆ ಫೆಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಕಲಹಗಳು ನಡೆಯುತ್ತಲೇ ಇರುತ್ತವೆ. ಇದುವರೆಗೂ ಜೆರುಸಲೇಮ್ ನ್ನು ತಮ್ಮ ರಾಜಧಾನಿಯೆಂದು ಇಸ್ರೇಲ್ ಘೋಷಿಸಿರಲಿಲ್ಲ. ಇದೀಗ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ಪ್ರಕಾರ ಇಸ್ರೇಲ್ ನ ರಾಜಧಾನಿಯಾಗಿ ಜೆರುಸಲೇಮ್ ಅನ್ನು ಘೋಷಿಸಲಾಗಿದ್ದು, ವಿಶ್ವಾದ್ಯಂತ ಈ ನಡೆಯ ಕುರಿತು ಮುಸ್ಲಿಮರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ನಿರ್ಧಾರದ ವಿರುದ್ಧ ದಂಗೆಯೇಳಲು ಫ್ಯಾಲೆಸ್ತೀನ್ ನ ಸಂಘಟನೆಯಾಗಿರುವ ಹಮಾಸ್ ತೀರ್ಮಾನಿಸಿದ್ದು, ಹಮಾಸ್ ನ ಮುಖ್ಯಸ್ಥ ಇಸ್ಮಾಯೀಲ್ ಹಾನಿಯೇ ಈ ಕುರಿತು ಭಾಷಣದ ಮೂಲಕ, ನಾವು ಇಸ್ರೇಲ್ ನ ಯಹೂದಿ ಶತ್ರುಗಳ ವಿರುದ್ಧ ದಂಗೆಯೇಳುವ ಕಾಲ ಬಂದಿದೆ. ಪ್ರತಿಯೊಬ್ಬರೂ ಸಿದ್ಧರಾಗಬೇಕು ಎಂದು ಕರೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಸ್ರೇಲ್ ಮತ್ತು ಟರಂಪ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗುತ್ತದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನೋಟ್ ಬ್ಯಾನ್ ಮಾಡಿದ ಕೇವಲ 53 ದಿನಗಳಲ್ಲೇ ನಡೆಯಿತು ಈ ಘಟನೆ!

ಮುಂದಿನ ಸುದ್ದಿ »

ದಿಲ್ಲಿಯ ಜಾಮಿಯಾ ಮಸ್ಜಿದ್ ಮೊದಲು ಜಮುನಾ ದೇವಸ್ಥಾನವಾಗಿತ್ತು: ಬಿಜೆಪಿ ಸಂಸದ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×