Tuesday March 13 2018

Follow on us:

Contact Us
    1010

ಪತ್ರಕರ್ತೆಯ ಮೇಲೆ ದಾಳಿ ಮಾಡಿ ಕ್ಯಾಮರಾ ಕಿತ್ತೆಸೆದ ಮುಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್!

ನ್ಯೂಸ್ ಕನ್ನಡ ವರದಿ-(13.3.18): ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿಯವರ ಪತ್ನಿ ಹಸೀನ್ ಜಹಾನ್, ಶಮಿ ವಿರುದ್ಧ ಹಲವು ಆರೋಪಗಳನ್ನು ಹೊರಿಸಿದ್ದಾರೆ. ಮುಹಮ್ಮದ್ ಶಮಿ ಮತ್ತು ಅವರ ಕುಟುಂಬಸ್ಥರು ನನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಶಮಿಗೆ ಹಲವು ಯುವತಿಯರೊಂದಿಗೆ ಅನೈತಿಕ ಸಂಬಂಧವಿದೆ ಎಂದೆಲ್ಲಾ ಆರೋಪಿಸಿದ್ದರು. ಆದರೆ ಶಮಿ ಈ ಕುರಿತು ಏನೂ ಮಾತನಾಡದೇ, ನಾನಿನ್ನೂ ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದಷ್ಟೇ ಹೇಳಿದ್ದರು. ಇದೀಗ ಹಸೀನ್ ಜಹಾನ್ ಗೆ ಪ್ರಶೆ ಕೇಳಲು ಬಂದ ಪತ್ರಕರ್ತೆಯೋರ್ವರಿಗೆ ಹಸೀನ್ ದಾಳಿ ಮಾಡಿದ್ದಾರೆಂದು ತಿಳಿದು ಬಂದಿದೆ.

ಕೊಲ್ಕತ್ತಾದಲ್ಲಿ ಮಾಧ್ಯಮಗಳೊಂದಿಗೆ ಹಸೀನ್ ಜಹಾನ್ ಮಾತನಾಡುತ್ತಿದ್ದ ವೇಳೆ ನ್ಯೂಸ್ 18 ವರದಿಗಾರರೋರ್ವರು ಪ್ರಶ್ನೆ ಕೇಳಿದ್ದರು. ಇದರಿಂದ ರೊಚ್ಚಿಗೆದ್ದ ಹಸೀನ್ ಕೂಡಲೇ ಅವರ ಕ್ಯಾಮರಾವನ್ನು ಕಿತ್ತು ನೆಲಕ್ಕೆಸೆದು ದಾಳಿ ಮಾಡಿದ್ದಾರೆಂದು ತಿಳಿದು ಬಂದಿದೆ. ಹಸೀನ್ ರಿಗೆ ತೀರಾ ವೈಯಕ್ತಿಕವಾದ ಪ್ರಶ್ನೆ ಕೇಳಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆಂದು ಹಸೀನ್ ವಕೀಲರು ಸಮಜಾಯಿಷಿ ನೀಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸುಕ್ಮಾ: ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಹಾಸನದ ಯೋಧ ಚಂದ್ರಶೇಖರ್!

ಮುಂದಿನ ಸುದ್ದಿ »

ನಾನು ರಾಜ್ಯಸಭೆಗೆ ಟಿಕೆಟ್ ಕೇಳಲೇ ಇಲ್ಲ: ವಿಜಯ್ ಸಂಕೇಶ್ವರ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×