Monday October 9 2017

Follow on us:

Contact Us
    1085

ರಟ್ಟಿನ ಬಾಕ್ಸ್ ನಲ್ಲಿ ಹುತಾತ್ಮ ಯೋಧರ ಮೃತದೇಹ: ತೀವ್ರ ಆಕ್ರೋಶ

ನ್ಯೂಸ್ ಕನ್ನಡ ವರದಿ-(09.10.17): ತವಾಂಗ್ ನಲ್ಲಿ ಸಂಭವಿಸಿದ ಸೇನ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 7 ಮಂದಿ ಯೋಧರ ಮೃತದೇಹಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ರಟ್ಟಿನ ಬಾಕ್ಸ್ ನಲ್ಲಿ ಹಾಕಿದ ಆಘಾತಕಾರಿ ಘಟನೆ ನಡೆದಿದೆ.

ಇದೀಗ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಟ್ವೀಟ್ ಮಾಡಿದ ಉತ್ತರ ಸೇನ ಕಮಾಂಡರ್ (ನಿವೃತ) ಹೆಚ್.ಎಸ್. ಪನಾಗ್ ಅವರು “ಇದೋ ನೋಡಿ ದೇಶಕ್ಕಾಗಿ ಹೋರಾಡಿ ಮಡಿದ ಯೋಧರಿಗೆ ಸಿಗುವ ಗೌರವ” ಎಂದು ಆಕ್ರೋಶತರಾಗಿ ಟ್ವೀಟ್ ಮಾಡಿದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೇನೆ, ಸ್ಥಳೀಯವಾಗಿ ಸಿಕ್ಕಿರುವ ಸಂಪನ್ಮೂಲದಿಂದ ಮೃತದೇಹಗಳನ್ನು ಸುತ್ತಲಾಗಿತ್ತು. ಅಪಘಾತದಲ್ಲಿ ಮಡಿದ ಯೋಧರಿಗೆ ಸಕಲ ಸೇನಾ ಗೌರವಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದೋಣಿ ದುರಂತ: 12 ಮಂದಿ ರೋಹಿಂಗ್ಯಾ ಮುಸ್ಲಿಮರು ನೀರುಪಾಲು

ಮುಂದಿನ ಸುದ್ದಿ »

ವಿಶ್ವವಿದ್ಯಾಲಯಗಳ ಹೆಸರಿನಿಂದ ‘ಹಿಂದೂ, ಮುಸ್ಲಿಂ’ ಪದಗಳನ್ನು ತೆಗೆದು ಹಾಕಿ: ಯುಜಿಸಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×