Friday August 11 2017

Follow on us:

Contact Us
    483

ಮುಖಾಮುಖಿ ಢಿಕ್ಕಿಯಾದ ರೈಲುಗಳು: 30 ಮಂದಿ ಮೃತ್ಯು

ಕೈರೋ: ಈಜಿಪ್ಟಿನ ಮೆಡಿಟರೇನಿಯನ್ ಬಂದರು ನಗರ ಅಲೆಕ್ಸಾಂಡ್ರಿಯಾದಲ್ಲಿ ಎರಡು ಪ್ಯಾಸೆಂಜರ್‌ ರೈಲುಗಳು ಮುಖಾಮುಖಿಯಾದ ಪರಿಣಾಮ 31ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಈಜಿಪ್ಟ್‌ನ ರಾಜಧಾನಿ ಕೈರೋಗೆ ಪ್ರಯಾಣ ಬೆಳೆಸಿದ್ದ ಅಲೆಗ್ಸಾಂಡ್ರಿಯಾದಲ್ಲಿ ಮತ್ತೋಂದು ರೈಲಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ, ಘಟನೆಯಲ್ಲಿ 109ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇಬ್ಬರು ವೈದ್ಯರು ಸ್ಥಳಕ್ಕೆ ಆಗಮಿಸಿ ಅಲ್ಲೇ ಚಿಕಿತ್ಸೆ ನೀಡಲು ಆರಂಭಿಸಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯ ಅಬು ಹೋಮ್ಸ್‌ ತಿಳಿಸಿದ್ದಾರೆ.

ಈ ಕುರಿತು ರೈಲ್ವೇ ಇಲಾಖೆಯೇ ಪ್ರಕಟಣೆ ಹೊರಡಿಸಿದ್ದು, ಘಟನೆಗೆ ಮೂಲ ಕಾರಣವನ್ನು ಬಿಟ್ಟುಕೊಟ್ಟಿಲ್ಲ. ಆದರೆ ಪ್ರಕರಣದ ತನಿಖೆ ನಡೆಸಿ ಅಧಿಕೃತ ಘೋಷಣೆ ಹೊರಡಿಸಲಾಗುವುದು. ಈ ಹಿಂದಿನ ದಾಖಲೆಗಳ ಪ್ರಕಾರ ಈಜಿಪ್ಟ್‌ ರೈಲ್ವೆ ವಿಶ್ವದಲ್ಲೇ ಅತ್ಯಂತ ಕಳಪೆ ಸೌಲಭ್ಯಗಳಿರುವ ಇಲಾಖೆಯಾಗಿದೆ. ಅಲ್ಲದೇ ಶುಕ್ರವಾರದ ನಡೆದ ರೈಲು ಅಪಘಾತ ಸೇರಿದಂತೆ ಈ ವರ್ಷದಲ್ಲಿ ನೂರಕ್ಕೂ ಅಧಿಕ ಮಂದಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸ್ವಾತಂತ್ರ್ಯ ದಿನದಂದು ಮದ್ರಸಾಗಳು ಮಾಡುವ ಕಾರ್ಯಕ್ರಮಗಳ ವೀಡಿಯೊ ಮಾಡುವಂತೆ ಯೋಗಿ ಸರಕಾರ ಆದೇಶ!

ಮುಂದಿನ ಸುದ್ದಿ »

ಆತ್ಮಹತ್ಯೆಗೈದ ಐಎಎಸ್ ಅಧಿಕಾರಿ ತನ್ನ ಕೊನೆಯ ವೀಡಿಯೊದಲ್ಲಿ ಹೇಳಿದ್ದೇನು?

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×