Monday December 26 2016

Follow on us:

Contact Us
john-valverde_650x400_41482736393
  6266

16 ವರ್ಷ ಜೈಲುವಾಸ ಅನುಭವಿಸಿದಾತ ಇದೀಗ ಸಂಸ್ಥೆಯೊಂದರ ಸಿಇಒ

ನ್ಯೂಸ್ ಕನ್ನಡ(26-12-2016): ಕೊಲೆ ಅಪರಾಧಿಯಾಗಿ 16 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದಾತ ತನ್ನ ಸಾಧನೆ, ಛಲದ ಮೂಲಕ ಕಂಪೆನಿಯೊಂದರ ಸಿಇಒ ಆದ ಅಸಾಧಾರಣ ಕತೆಯಿದು.

1991ರಲ್ಲಿ ಜಾನ್ ವಾಲ್‍ವೆರ್ಡ್ ಎನ್ನುವ 20ರ ಹರೆಯದ ತರುಣನೋರ್ವ ತನ್ನ ಪ್ರೇಯಸಿಯನ್ನು ಅತ್ಯಾಚಾರ ಮಾಡಿದ್ದವನನ್ನು ಕೊಂದಿದ್ದ. ಇನ್ನೂ ಎರಡು ಅತ್ಯಾಚಾರ ಆರೋಪಗಳು ಕೊಲೆಗೀಡಾದಾತನ ಮೇಲಿತ್ತು. ಕೋಪಗೊಂಡ ಮನಸ್ಥಿತಿ ಎಲ್ಲಾ ಆಲೋಚನೆಗಳನ್ನು ಶೂನ್ಯಗೊಳಿಸುವಂತೆ ವಾಲ್‍ವೆರ್ಡ್ ತನ್ನ ಪ್ರೇಯಸಿಯ ಮೇಲೆ ದೌರ್ಜನ್ಯವೆಸಗಿದ್ದ ಫೋಟೋಗ್ರಾಫರ್ ನನ್ನು ಗುಂಡು ಹಾರಿಸಿ ಕೊಂದಿದ್ದ.

ಕೊಲೆ ಆರೋಪ ಸಾಬೀತಾಗಿ ವಾಲ್‍ವೆರ್ಡ್‍ಗೆ 16 ವರ್ಷ ಜೈಲುಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿತ್ತು. “ಘಟನೆಯ ನಂತರ ನಾನು ಮಾಡಿದ್ದ ಮಾಡಿದ ತಪ್ಪಿನ ಬಗ್ಗೆ ಅರಿವಾಗಿತ್ತು. ಯಾವುದೇ ತರ್ಕ, ಸಮರ್ಥನೆ, ಆರೋಪ ಹಾಗೂ ಕ್ಷಮೆಯಿಲ್ಲದ ದೀರ್ಘಾವಧಿ ಪ್ರಯಾಣವಾಗಿ ಆ ಘಟನೆ ಪರಿಣಮಿಸಿತು.” ಎಂದು ವಾಲ್‍ವೆರ್ಡ್ ನುಡಿಯುತ್ತಾರೆ.
ಆದರೆ ಜೈಲಿನಲ್ಲಿ ಕೊರಗುತ್ತಾ ಕೂರದೆ ತನ್ನ ಶಿಕ್ಷಣವನ್ನು ಅಲ್ಲೇ ಮುಂದುವರಿಸಿದ ಅವರು, ಎರಡು ಪದವಿ ಗಳಿಸಿದರು. ಅಲ್ಲದೆ, ಸಹಖೈದಿಗಳಿಗೆ ಬರೆಯುವುದು ಹಾಗೂ ಓದುವುದನ್ನು ಕಲಿಸಿದರು.

ಈ ಬಗ್ಗೆ ಮಾತನಾಡುವ ವಾಲ್‍ವೆರ್ಡ್, “ಅವರು ಕೂಡ ನನ್ನಂತೆಯೇ ಶಿಕ್ಷೆ ಅನುಭವಿಸುತ್ತಿದ್ದರು. ಅವರ ಹಾದಿಯೂ ನನ್ನಂತೆಯೇ ಆಗಬೇಕು, ಅವರು ನಿರೀಕ್ಷಿಸದ ಸಾಧನೆಗಳನ್ನು ಮಾಡಬೇಕೆಂಬ ಹಿನ್ನೆಲೆಯಲ್ಲಿ ಸಹಾಯ ಮಾಡಿದೆ” ಎನ್ನುತ್ತಾರೆ.

ಜೈಲಿನಲ್ಲೇ ಮರ್ಸಿ ಕಾಲೇಜಿನಿಂದ ಬ್ಯಾಚುಲರ್ ಡಿಗ್ರಿ ಹಾಗೂ ನ್ಯೂಯಾರ್ಕ್ ಥಿಯೋಲಾಜಿಕಲ್ ಸೆಮಿನರಿಯಿಂದ ಮಾಸ್ಟರ್ಸ್ ಡಿಗ್ರಿ ಗಳಿಸಿದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಕಾನೂನಿಗೆ ಸಂಬಂಧಪಟ್ಟ ಕೆಲಸಕ್ಕೆ ಸೇರಿಕೊಂಡರು. ನಂತರ ಎನ್‍ಜಿಒಗಳಲ್ಲಿ ಕೆಲಸ ಮಾಡಬೇಕೆಂದು ನಿರ್ಧರಿಸಿದ ಅವರು ಚಿಕಿತ್ಸೆ, ಶಿಕ್ಷಣ ಒದಗಿಸುವ ಸಂಸ್ಥೆಯೊಂದಕ್ಕೆ ಸೇರಿಕೊಂಡರು.

ಇದೀಗ ಮುಂದಿನ ವಾರದಲ್ಲಿ ವಾಲ್‍ವೆರ್ಡ್ ಯೂತ್‍ಬಿಲ್ಡ್ ಎಂಬ ಸಂಸ್ಥೆಯೊಂದರ ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.  124 ಅಭ್ಯರ್ಥಿಗಳನ್ನು ಮೀರಿಸಿ ಯೂತ್‍ಬಿಲ್ಡ್ ಸಂಸ್ಥೆಗೆ ವಾಲ್‍ವೆರ್ಡ್ ಸೇರ್ಪಡೆಗೊಂಡಿದ್ದರು. ಯೂತ್‍ಬಿಲ್ಡ್ ಸಂಸ್ಥೆಯು 16ರಿಂದ 24 ವರ್ಷದೊಳಗಿನ ಕೆಲಸವಿಲ್ಲದ, ಶಿಕ್ಷಣವಿಲ್ಲದ ಯುವಜನತೆಗೆ ಸಹಾಯ ಮಾಡುತ್ತದೆ.
ವಾಲ್‍ವೆರ್ಡ್ ಅವರ ಜೀವನಕಥನ ಹಲವಾರು ಯುವಕ/ಯುವತಿಯರಿಗೆ ಮಾದರಿಯಾಗಿದ್ದು, ಅವರ ಸಾಧನೆಗೆ ಸ್ಪೂರ್ತಿಯಾಗಿದೆ.

“ಅವರನ್ನು ಭೇಟಿಯಾದ ನಂತರ ನನಗೆ ಅವರ ಕಥೆ ತಿಳಿಯಿತು. ತನ್ನ ಜೀವನವನ್ನೇ ನಿರೀಕ್ಷಿಸಿರದ ಮಟ್ಟಕ್ಕೆ ಕೊಂಡೊಯ್ಯಲು ವಾಲ್‍ವೆರ್ಡ್ ಅವರಿಗೆ ಸಾಧ್ಯವಾಗಿದ್ದರೆ ನಮಗೆ ಏಕೆ ಸಾಧ್ಯವಾಗುವುದಿಲ್ಲ.” ಎಂದು ಯೂತ್‍ಬಿಲ್ಡ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ 18ರ ಹರೆಯದ ಬ್ರಿಯಾನ್ನ ಬೆಲ್ ಹೇಳುತ್ತಾರೆ.
“ಭೂತಕಾಲದಲ್ಲಿ ನಾವು ಏನು ಮಾಡಿದ್ದೇವೆನ್ನುವುದು ಮುಖ್ಯವಲ್ಲ. ಭವಿಷ್ಯತ್ತಿಗಾಗಿ ನಾವೇನು ಮಾಡಬಲ್ಲೆವು ಎನ್ನುವುದಷ್ಟೇ ಮುಖ್ಯ ಎನ್ನುವುದನ್ನು ವಾಲ್‍ವೆರ್ಡ್ ನಿರೂಪಿಸಿದ್ದಾರೆ” ಎಂದು 19ರ ಹರೆಯದ ಕರೀಂ ಹೇಳುತ್ತಾರೆ.

ಸಣ್ಣಪುಟ್ಟ ತಪ್ಪುಗಳು, ಕಹಿಘಟನೆಗಳಿಗೆ ಮರುಗಿ ಜೀವನವೇ ಮುಗಿಯಿತು ಎಂದು ತಪ್ಪುದಾರಿ ಹಿಡಿಯುವ ಅಥವಾ ಮೂಲೆಸೇರುವ ಯುವಜನರಿಗೆ “ಈ ಜಗತ್ತಿನಲ್ಲಿ ನಾನು ಏನು ಬೇಕಾದರೂ ಮಾಡಬಲ್ಲೆ” ಎಂದು ಸವಾಲುಗಳನ್ನೇ ಅಪ್ಪಿಕೊಂಡು ಸಾಗುವವನಂತೆ ಹೇಳುವ ವಾಲ್‍ವೆರ್ಡ್ ಸ್ಪೂರ್ತಿಯ ಸೆಲೆಯಂತೆ ತೋರುತ್ತಾರೆ ಎಂದರೆ ತಪ್ಪಾಗದು.

nkibk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಟಲ್ ಬಿಹಾರಿ ವಾಜಪೇಯಿ ಇಂದು ನಮ್ಮೊಂದಿಗಿಲ್ಲ-ಬಿಜೆಪಿ ಮೇಯರ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ

ಮುಂದಿನ ಸುದ್ದಿ »

10 ಸಾವಿರಕ್ಕೂ ಅಧಿಕ ಮೊತ್ತದ ಅಮಾನ್ಯ ನೋಟುಗಳನ್ನು ಹೊಂದಿದವರಿಗೆ ಕಾದಿದೆ ಶಿಕ್ಷೆ!

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×