ನಾನಾ ಪಾಟೇಕರ್ ವಿರುದ್ಧ ಎಫ್.ಐ.ಆರ್ ದಾಖಲಿಸಿದ ಪೊಲೀಸರು!

0
487

ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಮಹಾರಾಷ್ಟ್ರದ ಒಶಿವಾರಾ ಪೊಲೀಸ್ ಠಾಣೆಯಲ್ಲಿ ನಟಿ ತನುಶ್ರೀ ದತ್ತಾ ನೀಡಿದ ಲೈಂಗಿಕ ಕಿರುಕುಳ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ.ನಾನಾ ಪಾಟೇಕರ್ ಜೊತೆಗೆ ಚಿತ್ರ ನಿರ್ದೇಶಕ ರಾಕೇಶ್ ಸಾರಂಗ್, ನಿರ್ಮಾಪಕ ಸಾಮಿ ಸಿದ್ದಿಖಿ ಮತ್ತು ಡ್ಯಾನ್ಸ್ ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧ ಕೂಡ ಎಫ್ಐಆರ್ ದಾಖಲಿಸಲಾಗಿದೆ.

ತನುಶ್ರೀ ದತ್ತಾ ತಮ್ಮ ಪರ ವಕೀಲರ ಜೊತೆ ಪೊಲೀಸ್ ಠಾಣೆಗೆ ಆಗಮಿಸಿ ನಾನಾ ಪಾಟೇಕರ್ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಗಳನ್ನು ದಾಖಲಿಸಿದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ನಿನ್ನೆ ತನುಶ್ರೀ ಪರ ವಕೀಲರು ಮುಂಬೈ ಪೊಲೀಸರಿಗೆ ಮತ್ತು ಮಹಿಳಾ ಆಯೋಗಕ್ಕೆ ನಾನಾ ಪಾಟೇಕರ್ ವಿರುದ್ಧ 40 ಪುಟಗಳ ದೂರು, ದಾಖಲೆಗಳನ್ನು ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here