ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು: ನಾನಾ ಪಾಟೇಕರ್

0
581

ನ್ಯೂಸ್ ಕನ್ನಡ ವರದಿ(07-04-2018): ಕಳೆದ ನಾಲ್ಕು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದಾಗ , ನಮ್ಮ ದೇಶದ ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಪಕ್ಷ ಕಾರಣ ಎಂಬುವುದು ನಮಗೆ ತಿಳಿಯುತ್ತದೆ. ಹಲವು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿದ ಕೊಡುಗೆಯೇನು ಎಂದು ಕೇಳುವುದು ಸರಿಯಲ್ಲ. ಆ ಪಕ್ಷದಿಂದಾಗಿಯೇ ನಮ್ಮ ಪ್ರಜಾಪ್ರಭುತ್ವ ಉಳಿದಿದೆ ಎಂದು ಬಾಲಿವುಡ್ ನಟ ನಾನಾ ಪಾಟೇಕರ್ ಹೇಳಿದ್ದಾರೆ.

ದೇಶದ ಪ್ರಸಕ್ತ ಸನ್ನಿವೇಶವನ್ನು ನೋಡುವಾಗ ಪ್ರಜಾಪ್ರಭುತ್ವ ಬಹಳ ಅಪಾಯದಲ್ಲಿದೆ ಎನ್ನುವುದು ಖಾತ್ರಿಯಾಗುತ್ತದೆ. ದೇಶಕ್ಕೆ ಸ್ಸಾತಂತ್ರ್ಯ ಸಿಕ್ಕ ನಂತರದಲ್ಲಿ ಇದುವರೆಗೆ ದೇಶದ ಪ್ರಜಾಪ್ರಭುತ್ವಕ್ಕೆ ದಕ್ಕೆ ಬರದಂತೆ ಸೂಕ್ಷಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದು ನಾನಾ ಪಾಟೇಕರ್ ಅಭಿಪ್ರಾಯಪಟ್ಟರು.

ಪ್ರಧಾನ ಮಂತ್ರಿ ಸ್ಥಾನಕ್ಕೆ ಶರದ್ ಪವಾರ್ ಸೂಕ್ತ ವ್ಯಕ್ತಿ. ಮರಾಠನೋರ್ವ ಪ್ರಧಾನ ಮಂತ್ರಿಯಾಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ದೇವೆಗೌಡ ಪ್ರಧಾನಿಯಾದಾಗಲೇ ಶರದ್ ಪವಾರ್ ಹೆಸರು ಮುಂಚೂಣಿಯಲ್ಲಿತ್ತು ಆದರೆ ದುರಾದೃಷ್ಟವಶಾತ್ ಅದು ಕೈತಪ್ಪಿತು ಎಂದು ಇದೇ ಸಂದರ್ಭದಲ್ಲಿ ನಾನಾ ಪಟೇಕರ್ ಹೇಳಿದರು.

LEAVE A REPLY

Please enter your comment!
Please enter your name here