ವಿವಿಐಪಿ ಸೌಲಭ್ಯವಿಲ್ಲದೇ ಏರ್ ಪೋರ್ಟ್ ನಲ್ಲಿ ಪೇಚಾಡಿದ ಚಂದ್ರಬಾಬು ನಾಯ್ಡು!

0
194

ನ್ಯೂಸ್ ಕನ್ನಡ ವರದಿ : ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿಐಪಿ ಕಲ್ಚರ್ಗೆ ಬ್ರೇಕ್ ಹಾಕಲಾಗಿದೆ. ಚಂದ್ರಬಾಬು ನಾಯ್ಡು ಅವರು ವಿಜಯವಾಡ ವಿಮಾನ ನಿಲ್ದಾಣಕ್ಕೆ ತೆರಳಿದ್ದ ವೇಳೆ ಅಲ್ಲಿನ ಎಲ್ಲರಂತೆ ಅವರನ್ನೂ ಕೂಡ ಭದ್ರತೆಗೆ ಒಳಪಡಿಸಲಾಗಿದೆ. ಅಲ್ಲದೇ ಅವರಿಗೆ ವಿಐಪಿ ಗೇಟ್ ಮೂಲಕ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ. ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರನ್ನು ವಿಐಪಿ ಬಸ್ ನಲ್ಲಿ ವಿಮಾನದ ಬಳಿ ತೆರಳಲು ಅವಕಾಶ ನೀಡದ ಕಾರಣ ಇತರೆ ಪ್ರಯಾಣಿಕರ ಜೊತೆಯೆ ಸಾಮಾನ್ಯರಂತೆ ತೆರಳಿದರು.

ಈ ಘಟನೆ ಬಗ್ಗೆ ಟಿಡಿಪಿ ಮುಖಂಡ ಖಾರವಾಗಿ ಪ್ರತಿಕ್ರಿಯಿಸಿದ್ದು, ವೈಎಸ್ ಆರ್ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಉದ್ದೇಶಪೂರ್ವಕವಾಗಿ ಈ ರೀತಿಯಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆಂಧ್ರ ಪ್ರದೇಶದ ಮಾಜಿ ಗೃಹ ಸಚಿವ ಚಿನ್ನ ರಾಜಪ್ಪ ಇದೊಂದು ಅವಮಾನಕರವಾದ ನಡೆಯಾಗಿದೆ. ಝಡ್ ಫ್ಲಸ್ ಭದ್ರತೆಯನ್ನೂ ಕೂಡ ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲವೆಂದು ಆರೋಪಿಸಿದರು. ಅಲ್ಲದೇ ನಾಯ್ಡು ಅವರು ಈ ಹಿಂದೆ ವಿಪಕ್ಷಗಳಲ್ಲಿ ಇದ್ದಾಗ ಇಂತಹ ಪರಿಸ್ಥಿತಿ ಎಂದಿಗೂ ಎದುರಿಸಿರಲಿಲ್ಲ ಎಂದರು.

LEAVE A REPLY

Please enter your comment!
Please enter your name here