ಭಾರತದಲ್ಲಿ ಇತಿಹಾಸವನ್ನು ತಿರುಚಿ ಮುಸ್ಲಿಮರನ್ನು ನಿರ್ನಾಮಗೊಳಿಸುವ ಪ್ರಯತ್ನ ನಡೆಯುತ್ತಿದೆ : ಮೌಲಾನಾ ನಜೀಬ್ ಮೌಲವಿ.

0
21

ನ್ಯೂಸ್ ಕನ್ನಡ ವರದಿ ನಾದಾಪುರಂ: ದೇಶದ ಪರಂಪರೆ ಹಾಗೂ ಇತಿಹಾಸವನ್ನು ವಿರೂಪಗೊಳಿಸಿ ಮುಸ್ಲಿಮರನ್ನು ನಿರ್ಮೂಲನೆ ಮಾಡುವ ಪ್ರಯತ್ನವಾಗಿದೆ ಇಂದು ಭಾರತದಲ್ಲಿ ನಡೆಯುವುದೆಂದೂ ಅದರ ಮುಂದುವರಿದ ಕಾರ್ಯಾಚರಣೆಯಾಗಿದೆ ಇತ್ತೀಚಿಗೆ ನಡೆಯುತ್ತಿರುವ ಘಟನೆಗಳೆಂದೂ ಕೇರಳ ಸಂಸ್ಥಾನ ಜಮ್ ಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮೌಲಾನಾ ನಜೀಬ್ ಮೌಲವಿ ಹೇಳಿದರು.

ಹಿಂಸೆ ಮತ್ತು ಅನ್ಯಾಯಗಳು ಮಾತ್ರ ನಡೆದಿರುವುದೆಂದು ಬಿಂಬಿಸುವ ಮಧ್ಯಕಾಲೀನ ಭಾರತದ ಇತಿಹಾಸವಾಗಿದೆ ಇಂದು ಪಠ್ಯಪುಸ್ತಕಗಳಲ್ಲಿ ತುಂಬಿರುವುದು.

ಆ ಮೂಲಕ ಮುಸ್ಲಿಮರನ್ನು ದಾಳಿಕೋರರೆಂದೂ ಯುದ್ಧ ಪ್ರಿಯರೆಂದೂ ಚಿತ್ರೀಕರಿಸುವ ಇತಿಹಾಸವಾಗಿದೆ ಇಂದು ಅಸ್ತಿತ್ವದಲ್ಲಿರುವುದೆಂದೂ ಭಾರತದ ನಿಜವಾದ ಇತಿಹಾಸವನ್ನು ಜನರು ಅರ್ಥಮಾಡಿಕೊಳ್ಳಬೇಕೆಂದೂ ಅವರು ಹೇಳಿದರು.

ಸಂಸ್ಥಾನ ಜಂ ಇಯ್ಯತುಲ್ ಉಲಮಾ ಅಧ್ಯಕ್ಷರೂ ನಾದಾಪುರಂ ಮುದರ್ರಿಸರೂ ಆಗಿದ್ದ ಶಂಸುಲ್ ಉಲಮಾ ಕೀಝನ ಓರ್ ರವರ 20 ನೇ ಅನುಸ್ಮರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡುತಿದ್ದರು ಮೌಲಾನಾ.

ಖಾಝೀ ಪಿ. ಅಹ್ಮದ್ ಮೌಲವಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಉದ್ಘಾಟಿಸಿದರು.
ಸಯ್ಯಿದ್ ಹಸನ್ ಸಖಾಫ್ ತಂಙಳ್ ಕೊಡಕ್ಕಲ್. ಸಯ್ಯಿದ್ ಹಾಶಿಮ್ ಬಾಫಖೀ ತಂಙಳ್. ಕೆ. ಕೆ. ಕುಂಞಾಲಿ ಉಸ್ತಾದ್. ಅಹ್ಮದ್ ಬಾಖವಿ ಅರೂರ್.ಉಸ್ಮಾನ್ ಬಾಖವಿ ತಹ್’ತಾನಿ. ಸಿರಾಜುದ್ದೀನ್ ಮೌಲವಿ. ಮುಜೀಬ್ ವಹಬಿ .
ಮುಂತಾದವರು ಮಾತನಾಡಿದರು.

ಡಾ: ಉವೈಸ್ ಫಲಾಹಿ ಸ್ವಾಗತಿಸಿ ಅಬ್ದುಲ್ಲ ಮಾಸ್ಟರ್ ಧನ್ಯವಾದ ಹೇಳಿದರು

08/03/2020

LEAVE A REPLY

Please enter your comment!
Please enter your name here