ಬಿಜೆಪಿ ಗೆಲ್ಲಿಸಿ ಎನ್ನುವ ಮೂಲಕ ‘ಕಮಲ’ ಪರ ಬಹಿರಂಗವಾಗಿ ಮತಯಾಚಿಸಿದ ಎನ್. ಮಹೇಶ್

0
612

ನ್ಯೂಸ್ ಕನ್ನಡ ವರದಿ: ರಾಜ್ಯ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವಂತಹ ಅತ್ಯಂತ ಮಹತ್ತರವಾದ ಉಪ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಉಳಿದಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಕಾರ್ಯ ಅಂತ್ಯಗೊಳ್ಳಲಿದ್ದು, ನಾಡಿದ್ದು ಮತದಾನ ನಡೆಯಲಿದೆ. ಹದಿನೈದು ಕ್ಷೇತ್ರಗಳಲ್ಲಿಯೂ ಚುನಾವಣಾ ಕಾವು ರಂಗೇರಿದ್ದು ಮೂರು ಪಕ್ಷಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಮನೆ ಮನೆ ಪ್ರಚಾರ ಕಾರ್ಯದಲ್ಲಿ ತೊಡಗಿವೆ.

ಇನ್ನು ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತೊಮ್ಮೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸುವ ಮಾತನ್ನು ಹೇಳುತ್ತಿದ್ದರೆ, ಬಿಜೆಪಿ ಬಹುತೇಕ ಕ್ಷೇತ್ರವನ್ನು ನಾವು ಗೆದ್ದು ಮೂರೂವರೆ ವರ್ಷಗಳ ಕಾಲ ಬಲಿಷ್ಠ ಸರ್ಕಾರವನ್ನು ನೀಡುತ್ತೇವೆ ಎನ್ನುತ್ತಿದ್ದಾರೆ‌ ಇದೇ ವೇಳೆ ರಾಜ್ಯದ ಏಕೈಕ ಬಹುಜನ ಸಮಾಜವಾದಿ ಪಕ್ಷದ ಶಾಸಕ ಎನ್ ಮಹೇಶ್ ಉಪ ಚುನಾವಣೆಯಲ್ಲಿ ತಾವು ಯಾರಿಗೆ ಬೆಂಬಲಿಸುತ್ತೇವೆ ಎನ್ನುವುದರ ಕುರಿತು ಹೇಳಿದ್ದಾರೆ‌. ರಾಜ್ಯದಲ್ಲಿ ಸುಭದ್ರ ಸರ್ಕಾರ ಬೇಕಿದ್ದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ಬಿಎಸ್ಪಿಯ ಉಚ್ಚಾಟಿತ ಶಾಸಕ ಎನ್ ಮಹೇಶ್ ಹೇಳಿದ್ದಾರೆ.

ಈ ಮೂಲಕ ಮತ್ತೊಮ್ಮೆ ಬಿಜೆಪಿ ಪರ ಬಹಿರಂಗವಾಗಿ ಮಾತನಾಡಿದ್ದಾರೆ. ಕೊಳ್ಳೇಗಾಲದಲ್ಲಿ ಸೋಮವಾರ ಮಾತನಾಡಿದ ಮಹೇಶ್ ಸ್ವತಂತ್ರ ಶಾಸಕನಾಗಿ ನನಗೆ ಅನುಭವವಿದೆ. ಸಣ್ಣ ಆತಂಕವೂ ಇದೆ. ಈ ಶಾಸನ ಸಭೆಯಲ್ಲಿ 224 ಜನರಲ್ಲಿ 90 ಶಾಸಕರು ಮೊದಲ ಬಾರಿ ಗೆದ್ದಿರುವುದರಿಂದಾಗಿ 90 ಹೊಸ ಶಾಸಕರ ನಿರೀಕ್ಷೆ ಸುಭದ್ರ ಸರ್ಕಾರವಾಗಿದೆ. ಸುಭದ್ರ ಸರ್ಕಾರ ಬೇಕು ಎಂದಾದರೆ ಜನರು ಒಗ್ಗಟ್ಟಿನಿಂದ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಬೆಂಬಲ ಬಿಜೆಪಿ ಸರ್ಕಾರಕ್ಕಿದೆ ಎಂದು ಹೇಳಿದ್ದಾರೆ ಈಗಾಗಲೇ ಓರ್ವ ಪಕ್ಷೇತರ ಶಾಸಕ ಬಿಜೆಪಿಯ ಬೆಂಬಲಕ್ಕಿದ್ದು, ಇವರೂ ಕೂಡ ಬಿಜೆಪಿಯನ್ನು ಬೆಂಬಲಿಸಿರುವುದರಿಂದ ಬಿಜೆಪಿಯ ಪ್ರಸ್ತುತ ಸಂಖ್ಯೆ 107 ಕ್ಕೆ ತಲುಪಿದೆ!

LEAVE A REPLY

Please enter your comment!
Please enter your name here