ಸೆಕೆಯಿಂದ ಕಿಟಕಿ ತೆರೆದು ಮಲಗುತ್ತಿದ್ದ ಮನೆಗಳಲ್ಲಿ ಈ ಕಾನ್‍ಸ್ಟೇಬಲ್ ಮಾಡುತ್ತಿದ್ದುದು ಏನು ಗೊತ್ತೇ?

0
3036

ನ್ಯೂಸ್ ಕನ್ನಡ ವರದಿ: ಈ ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ನಮಗೆಲ್ಲ ಹಲವಾರು ಚಿತ್ರವಿಚಿತ್ರ ಸುದ್ದಿಗಳು ಕೇಳಲು ಸಿಗುತ್ತದೆ. ಅಂತಹದೇ ಒಂದು ಸುದ್ದಿ ಮೈಸೂರಿನಲ್ಲಿ ವರದಿಯಾಗಿದೆ. ಈಗಾಗಲೇ ಸೆಕೆಗಾಲ ಆರಂಭವಾಗಿದೆ, ಹಾಗಾಗಿ ರಾತ್ರಿ ವೇಳೆ ಸೆಕೆ ಎಂದು ಬಾಗಿಲು ಕಿಟಿಕಿ ತೆರೆದು ಹೊರಗಿನ ತಂಪು ಗಾಳಿಯೊಂದಿಗೆ ಮಲಗುವುದು ಹಲವರ ರೂಢಿ, ಹಾಗಿರುವಾಗ ಕಿಟಕಿ ತೆರೆದಿರುವ ಮನೆ ಬಳಿ ಹೋಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವಿಕೃತ ಮನಸ್ಸಿನ ಕಾನ್‍ಸ್ಟೇಬಲ್‍ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ. ಇದೀಗ ಅವನನ್ನು ಅಮಾನತು ಮಾಡಲಾಗಿದೆ.

ಮೈಸೂರು ನಗರದ ಲಷ್ಕರ್ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಮೆಹಬೂಬಳ್ಳಿ ಅಮಾನತುಗೊಂಡವರು.  ಲಷ್ಕರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಗಳ ಕಿಟಕಿ ಬಳಿ ಹೋಗಿ ರಾತ್ರಿ ವೇಳೆ ಚಿತ್ರೀಕರಣ ಮಾಡುತ್ತಿದ್ದ ಈತನನ್ನು ಸ್ಥಳೀಯರು ಕಳ್ಳನೆಂದು ಭಾವಿಸಿ ಹಿಗ್ಗಾಮುಗ್ಗಾ ಥಳಿಸಿ ಮೊನ್ನೆ ಪೊಲೀಸರಿಗೆ ಒಪ್ಪಿಸಿದ್ದರು. ಈತನನ್ನು ವಶಕ್ಕೆ ಪಡೆದ ಪೆಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಿದ್ದರು. ಮೈಸೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಮಹಾಲಿಂಗ ನಂದಗಾವಿ ಅವರು ಮೆಹಬೂಬಳ್ಳಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here