ವೋಟರ್‌ ಐಡಿ ಕೇಸ್‌: 11ನೇ ಆರೋಪಿಯಾಗಿ ಶಾಸಕ ಮುನಿರತ್ನ ವಿರುದ್ಧವೂ FIR ದಾಖಲು!

0
1468

ನ್ಯೂಸ್ ಕನ್ನಡ ವರದಿ : ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರದ ದಾಳಿ ವೇಳೆ ಸಾವಿರಾರು ವೋಟರ್‌ಐಡಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ, ಪತ್ತೆಯಾಗಿರುವ ಎಲ್ಲ 9,896 ಎಪಿಕ್‌ ಕಾರ್ಡ್‌ಗಳು ಅಸಲಿಯಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ರವರ ಹೇಳಿಕೆ ಅನ್ವಯ, ಸ್ಥಳೀಯ ಶಾಸಕ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ವಿರುದ್ಧ ಪ್ರಕರಣದ 11 ನೇ ಆರೋಪಿಯಾಗಿ ಚುನಾವಣಾ ಆಯೋಗ ಗುರುವಾರ ಎಫ್ಐಆರ್‌ ದಾಖಲಿಸಿಕೊಂಡಿದೆ ಎಂದು ಚುನಾವಣಾ ಅಧಿಕಾರಿ ಮಂಜುನಾಥ್‌ ಅವರು ತಿಳಿಸಿದ್ದಾರೆ.

ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರದ ದಾಳಿ ವೇಳೆ ಎಪಿಕ್‌ ಕಾರ್ಡ್‌ಗಳನ್ನು ನಕಲು ಮಾಡುವ 3 ಮುದ್ರಣ ಯಂತ್ರಗಳು, 5 ಲ್ಯಾಪ್‌ಟಾಪ್‌, 9 ಮೊಬೈಲ್‌ ಫೋನ್‌ ಜೊತೆಗೆ ಪ್ಯಾನ್‌ ಕಾರ್ಡ್‌, ಎಟಿಎಂ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌, ವಿಸಿಟಿಂಗ್‌ ಕಾರ್ಡ್‌ ಸಿಕ್ಕಿದ್ದವು. ಬಿಬಿಎಂಪಿ ಮುದ್ರೆ ಹೊಂದಿರುವ 6,342 ಮತದಾರರ ಅರ್ಜಿ ಸ್ವೀಕೃತಿಗಳು, ಬಿಬಿಎಂಪಿ ಮುದ್ರೆ ಇಲ್ಲದ 20,700 ಸ್ವೀಕೃತಿ ಅರ್ಜಿಗಳು ಪತ್ತೆಯಾಗಿದ್ದವು. ಇದಲ್ಲದೇ ಕುಟುಂಬಗಳ ಸಂಖ್ಯೆ, ವ್ಯಕ್ತಿಗಳ ಹೆಸರು, ಜಾತಿ, ಮೊಬೈಲ್‌ ನಂಬರ್‌ ಮತ್ತಿತರ ವಿವರಗಳನ್ನು ಹೊಂದಿರುವ ಸರ್ವೆ ಫಾರಂಗಳು ಮತ್ತು ಸರ್ವೆ ಮಾಡಿದವರ ಹೆಸರುಗಳು ಸ್ಥಳದಲ್ಲಿ ಸಿಕ್ಕಿದ್ದವು. ಜೊತೆಯಲ್ಲಿ ಮುನಿರತ್ನ ಅವರ ಭಾವಚಿತ್ರವುಳ್ಳ ಕಾರ್ಡ್‌ ಪತ್ತೆಯಾಗಿತ್ತು. ಆದ ಕಾರಣ ಶಾಸಕ ಮುನಿರತ್ನ ವಿರುದ್ಧ ಪ್ರಕರಣದ 11 ನೇ ಆರೋಪಿಯಾಗಿ ಚುನಾವಣಾ ಆಯೋಗ ಗುರುವಾರ ಎಫ್ಐಆರ್‌ ದಾಖಲಿಸಿಕೊಂಡಿದೆ.

LEAVE A REPLY

Please enter your comment!
Please enter your name here