ಅತೃಪ್ತ ಶಾಸಕರಲ್ಲೆ ನಾಲ್ಕು ಬಣಗಳು!: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮುನಿರತ್ನ.

0
1009

ನ್ಯೂಸ್ ಕನ್ನಡ ವರದಿ: ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷದಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ ಸಿಎಂ.ಕುಮಾರಸ್ವಾಮಿಯವರಿಗೆ. ಕಳೆದ ಎರಡುವಾರಗಳಿಂದ ಅನೇಕ ಶಾಸಕರು ಮೇಲಿಂದ ಮೇಲೆ ರಾಜಿನಾಮೆ ಕೊಟ್ಟು ಶಾಕ್ ನೀಡಿದ್ದರು, ಇದರ ಕುರಿತು ಈಗ ಮುನಿರತ್ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ನಾವು ಕಾಂಗ್ರೆಸ್ ಪಕ್ಷವನ್ನು ಬಿಟ್ಟೊಗುತ್ತಿಲ್ಲ ಈಗಾಗಲೆ ಅತೃಪ್ತ ಶಾಸಕರಲ್ಲೆ ನಾಲ್ಕು ಬಣಗಳಾಗಿವೆ ಒಂದು ಎಂ.ಟಿ.ಬಿ ಸುಧಾಕರ ಬಣವಾದರೆ, ಎರಡನೆಯದು ರಮೇಶ್ ಜಾರಕಿಹೊಳಿ ಬಣ್ಣ ಮತ್ತೊಂದು ಜೆಡಿಎಸ್ ನ ವಿಶ್ವನಾಥ್ ಬಣವಾಗಿದೆ, ಇವೆಲ್ಲವನ್ನೂ ಕೇಂದ್ರವಾಗಿ ನಿಯಂತ್ರಿಸುವ ಮತ್ತು ನಿರ್ಣಯವನ್ನು ಕೈಗೊಳ್ಳುವ ಬೆಂಗಳೂರು ಬಣ ಕೂಡ ಇದೆ ಎಂದು ತಿಳಿಸಿದ್ದಾರೆ.

ಯಾವುದು ಆ ನಿರ್ಣಯ ಮಾಡುವ ಬೆಂಗಳೂರು ಬಣ ಅದರಲ್ಲಿ ಯಾರ್ ಯಾರ್ ಇದ್ದಾರೆ?

ಸೋಮಶೇಖರ್, ರಾಮಲಿಂಗ ರೆಡ್ಡಿ, ಬಸವರಾಜು ಮತ್ತು ನಾನು ( ಮುನಿರತ್ನ) ಈ ಮೂವರು ಅತೃಪ್ತ ಶಾಸಕರ ನಾಯಕರೆಂದು ಮುನಿರತ್ನ ತಿಳಿಸಿದ್ದಾರೆ. ನಾವು ಕಾಂಗ್ರೆಸ್ ಪಕ್ಷವನ್ನು ಬಿಡುತ್ತೇವೆ ಎಂದು ಹೇಳಿಲ್ಲ ನಮಗೆ ಬೆಂಗಳೂರು ಅಭಿವೃದ್ಧಿ ಮುಖ್ಯ ಕಳೆದ ಒಂದು ವರ್ಷದಿಂದ ಯಾವುದೆ ಅಭಿವೃದ್ಧಿ ಕಾರ್ಯ ನಾವು ಕಂಡಿಲ್ಲ ಅದಕ್ಕೆ ರಾಜಿನಾಮೆ ನೀಡಿದ್ದೇವೆ ಹಾಗೂ ನಮ್ಮ ನಾಯಕರಾದ ರಾಮಲಿಂಗ ರೆಡ್ಡಿ ಮತ್ತು ಬೇರೆ ಶಾಸಕರು ಯಾವ ನಿರ್ಣಾಯ ಕೈಗೊಳ್ಳುತ್ತಾರೊ ಅದಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here