ಸರ್ಕಾರಿ ಭೂಮಿ ಕಬಳಿಕೆ: ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ಆರೋಪ

0
211

ನ್ಯೂಸ್ ಕನ್ನಡ ವರದಿ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಖಾಡ ರಂಗೇರಿದ್ದು, ಅಭ್ಯರ್ಥಿಗಳ ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಈ ನಡುವೆ, ಸಂಸದ ಬಚ್ಚೇಗೌಡ ಹಾಗೂ ಪುತ್ರ ಶರತ್ ಬಚ್ಚೇಗೌಡ 261 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೊಸಬಾಂಬ್ ಸಿಡಿಸಿದ್ದಾರೆ.

ಇಂದು ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಸಂಸದ ಬಚ್ಚೇಗೌಡ ಹಾಗೂ ಪುತ್ರ ಶರತ್ ಬಚ್ಚೇಗೌಡ ಶಾಂತನಪುರದ ಬಳಿ 600 ಕೋಟಿ ರೂಪಾಯಿ ಮೌಲ್ಯದ ಸುಮಾರು 261 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಈ ಕುರಿತ ಆರೋಪ ಎಸಿ ಕೋರ್ಟ್ ನಲ್ಲೂ ಸಾಬೀತಾಗಿದೆ. ಸರ್ಕಾರ ಬಡವರಿಗಾಗಿ ಭೂಮಿಯನ್ನು ನೀಡಿತ್ತೇ ಹೊರತು ಸಂಪೂರ್ಣ ಬಿಟ್ಟುಕೊಟ್ಟಿಲ್ಲ. ಈ ಕುರಿತು ತಮ್ಮ ಬಳಿ ಸೂಕ್ತ ದಾಖಲೆಗಳಿವೆ. ಸರ್ಕಾರಿ ಜಮೀನು ಕಬಳಿಸಿರುವ ಬಗ್ಗೆ ಬಚ್ಚೇಗೌಡ ಹಾಗೂ ಶರತ್ ಬಚ್ಚೇಗೌಡ ಬಹಿರಂಗ ಚರ್ಚೆಗೆ ಬರಲಿ.

ತಾವು ಈ ವೇಳೆ, ಎಲ್ಲ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಸವಾಲು ಹಾಕಿದರು. ಒಂದು ವೇಳೆ, ಆರೋಪ ಸಾಬೀತು ಆಗದಿದ್ದಲ್ಲಿ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದರು.

LEAVE A REPLY

Please enter your comment!
Please enter your name here