ನನ್ನ ಚಿತ್ರವನ್ನು ಹೇಗೆ ಬೇಕಾದರೂ ತಿರುಚಿ, ನಾನು ಅರೆಸ್ಟ್ ಮಾಡಿಸುವುದಿಲ್ಲ: ನರೇಂದ್ರ ಮೋದಿ

0
208

ನ್ಯೂಸ್ ಕನ್ನಡ ವರದಿ: (16.05.19) ಪಶ್ಚಿಮ ಬಂಗಾಳದ ಬಸಿರಹತ್ ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮಮತಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿ ಮಮತಾ ಬ್ಯಾನರ್ಜಿಯ ಚಿತ್ರ ತಿರುಚಿದ ಆರೋಪದಲ್ಲಿ ಬಿಜೆಪಿ ಯುವ ನಾಯಕಿಯನ್ನು ಬಂಧಿಸಿದ ಪ್ರಕರಣವನ್ನು ಉಲ್ಲೇಖಿಸುತ್ತಾ ಮೋದಿ ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ  ಗೆಲುವು ನಮ್ಮದೇ. ಇದರಲ್ಲಿ ಪಶ್ಚಿಮ ಬಂಗಾಳ ಬಹುಮುಖ್ಯ ಪಾತ್ರ ವಹಿಸಲಿದೆ.ನೀವು ನನ್ನ ಚಿತ್ರ ರಚಿಸಿ ನಿಮಗೆ ಮನಬಂದಂತೆ ತಿರುಚಿ. ಮೇ 23ರಂದು ನಾನು ಗೆಲುವು ಸಾಧಿಸಿದ ನಂತರ ಅದನ್ನು ನನಗೆ ಉಡುಗೊರೆಯಾಗಿ ನೀಡಿ ನಾನು ಸ್ವೀಕರಿಸುತ್ತೇನೆ,ಅದು ನನ್ನ ಪಾಲಿನ ನಿಧಿ .ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಮೋದಿಯನ್ನು ನಾನು ಪ್ರಧಾನಿಯಾಗಿ ಪರಿಗಣಿಸುವುದಿಲ್ಲ ಎಂದು ಮಮತಾ ಹೇಳಿದ್ದರು,ಆದರೆ ಪಾಕಿಸ್ತಾನದ  ಪ್ರಧಾನಿಯನ್ನು ಪಾಕ್ ಪ್ರಧಾನಿಯಾಗಿ ಪರಿಗಣಿಸುತ್ತಾರೆ. ಆಕೆ ಎಲ್ಲ ಮಿತಿಗಳನ್ನು ಮೀರಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.ತನ್ನ ನೆರಳನ್ನು ನೋಡಿ ಬೆಚ್ಚಿಬೀಳುವ ವ್ಯಕ್ತಿಯಂತಾಗಿದ್ದಾರೆ ಮಮತಾ. ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here