ನರೇಂದ್ರ ಮೋದಿ ವಿರುದ್ಧ ಸ್ಪೋಟಕ ಮಾಹಿತಿ ಹೊರ ಹಾಕಿದ ವಿಜಯ್ ಮಲ್ಯ!

0
2393

ನ್ಯೂಸ್ ಕನ್ನಡ ವರದಿ(14-2-2019)ಲಂಡನ್:ಪ್ರಧಾನಿ ನರೇಂದ್ರ ಮೋದಿಯನ್ನು ಉತ್ತಮ ಭಾಷಣಕಾರ ಎಂದು ವಿಜಯ್ ಮಲ್ಯ ಹೊಗಳುತ್ತಾ ಮೋದಿಯ ಕಾಲೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನಿರರ್ಗಳ ಮಾತುಗಾರ ಎಂದ ಮದ್ಯ ಉದ್ಯಮಿ ವಿಜಯ್ ಮಲ್ಯ, ಸಾರ್ವಜನಿಕರಿಗೆ ನಾನು ನೀಡಬೇಕಾಗಿರುವ ಹಣವನ್ನು ನೀಡಲು  ಮುಂದೆ ಬಂದಿದ್ದರೂ ಕೂಡ ಹಣ ಪಡೆಯಲು ಅವರು ಬ್ಯಾಂಕುಗಳಿಗೆ ಸೂಚಿಸುವುದಿಲ್ಲವೇಕೆ ಎಂದು ಕೇಳುವ ಮೂಲಕ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಬಾರಿ ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರು ಮಾಡಿದ ಭಾಷಣ ನನ್ನ ಗಮನ ಸೆಳೆಯಿತು. ಅವರು ಖಂಡಿತವಾಗಿಯೂ ಉತ್ತಮ ಮಾತುಗಾರ. 9 ಸಾವಿರ ಕೋಟಿ ರೂಪಾಯಿ ಪಡೆದುಕೊಂಡು ಒಬ್ಬರು ಓಡಿಹೋಗಿದ್ದಾರೆ ಎಂದು ಹೆಸರನ್ನು ಹೇಳದೆ ನನ್ನ ಬಗೆಗೆ ಮಾತಿಡಿದ್ದರು. ಮಾಧ್ಯಮಗಳು ಮಾಡಿರುವ ವಿಶ್ಲೇಷಣೆ ಪ್ರಕಾರ ಪ್ರಧಾನಿಯವರು ನನ್ನನ್ನು ಉಲ್ಲೇಖಿಸಿ ಹೇಳಿದ್ದಾಗಿತ್ತು.

ನಾನು ಸಾಲವನ್ನು ತೀರಿಸಲು ಮುಂದೆ ಬಂದಿದ್ದರೂ ಹಣವನ್ನು ಪಡೆಯಲು ಬ್ಯಾಂಕುಗಳಿಗೆ ಪ್ರಧಾನಿಯವರು ಆದೇಶ ನೀಡುವುದಿಲ್ಲವೇಕೆ ಎಂದು ನಾನು ಕೇಳುತ್ತೇನೆ. ನನ್ನಿಂದ ಹಣ ತೆಗೆದುಕೊಂಡರೆ ಕಿಂಗ್ ಫಿಶರ್ ನಲ್ಲಿ ಹಾಕಿದ ಹಣವನ್ನು ಸಾರ್ವಜನಿಕರು ಪಡೆಯಬಹುದಲ್ಲವೇ ಎಂದು ವಿಜಯ್ ಮಲ್ಯ ಸರಣಿ ಟ್ವೀಟ್ ಗಳ ಮೂಲಕ ಪ್ರಶ್ನಿಸಿದ್ದಾರೆ. ಹಣಕಾಸಿಗೆ ಸಂಬಂಧಿಸಿದ ವಿವಾದವನ್ನು ಕರ್ನಾಟಕ ಹೈಕೋರ್ಟ್ ಮುಂದೆ ಬಗೆಹರಿಸಿಕೊಳ್ಳಲು ತಾನು ಅವಕಾಶ ನೀಡಿದ್ದೆ ಎಂದು ಕೂಡ ವಿಜಯ್ ಮಲ್ಯ ಹೇಳಿದ್ದಾರೆ.

The Prime Ministers last speech in Parliament was brought to my attention. He certainly is a very eloquent speaker. I noticed that he referred to an unnamed person who “ran away” with 9000 crores. Given the media narrative I can only infer that reference is to me.

— Vijay Mallya (@TheVijayMallya) February 14, 2019

I have made the offer to settle before the Hon’Ble High Court Court of Karnataka. This cannot be dismissed as frivolous. It is a perfectly tangible, sincere, honest and readily achievable offer. The shoe is on the other foot now. Why don’t the Banks take the money lent to KFA ?

LEAVE A REPLY

Please enter your comment!
Please enter your name here