ಪ್ರಧಾನಿ ನರೇಂದ್ರ ಮೋದಿ ಇಂಜಿನಿಯರಿಂಗ್ ಪದವೀಧರರಂತೆ; ಮತ್ತೆ ಚರ್ಚೆಯಲ್ಲಿ ಮೋದಿಯವರ ಶೈಕ್ಷಣಿಕ ಪದವಿ

0
158

ನ್ಯೂಸ್ ಕನ್ನಡ ವರದಿ (16-5-2019): ಮೋದಿ ಚಹಾ ಮಾರುತ್ತಿದ್ದರಂತೆ, ಮೋದಿ ಹಿಮಾಲಯದಲ್ಲಿ ನಾಲ್ಕು ವರ್ಷ ತಪಸ್ಸು ಮಾಡಿದ್ದರಂತೆ ಹೀಗೆ ಹಲವಾರು ವಿಷಯಗಳು ಜನಸಾಮಾನ್ಯರ ಮಧ್ಯೆ ಹರಿದಾಡುತ್ತಾ ಇದೆ. ಅವರ ಶೈಕ್ಷಣಿಕ ಪದವಿಯ ಬಗ್ಗೆ ಒಮ್ಮೆ ಬೃಹತ್ ಚರ್ಚೆ ಕೂಡಾ ಆಗಿತ್ತು. ಈಗ ಮೋದಿ ಇಂಜಿನಿಯರಿಂಗ್ ಪದವೀಧರ ಅನ್ನೋ ವಿಚಾರ ಚರ್ಚೆಗೆ ಬಂದಿದೆ.

1992ರಲ್ಲಿ ಪ್ರಕಟವಾಗಿದ್ದ ಲೇಖನವೊಂದರಲ್ಲಿ ನರೇಂದ್ರ ಮೋದಿ ಉಡುಪಿಗೆ ಬಂದಿದ್ದರ ಬಗ್ಗೆ ಮಾಹಿತಿಗಳಿವೆ. ತರಂಗ ವಾರಪತ್ರಿಕೆಯ ಈ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಈ ಸಂದರ್ಭ ತರಂಗದ ವರದಿಗಾರರು ಮೋದಿ ಅವರ ಸಂದರ್ಶನ ಮಾಡಿದ್ದಾರೆ. ಆರ್ ಎಸ್‍ಎಸ್ ನ ಸೌರಾಷ್ಟ್ರದ ಕಾರ್ಯಾವಾಹಕ, ಸಂಘಟನಾ ಚತುರ, ಇಂಜಿನಿಯರ್ ಪದವೀಧರ, ಅವಿವಾಹಿತ ಅಂತ ಉಲ್ಲೇಖ ಮಾಡಿದ್ದಾರೆ. ಪದವಿ ಬಗ್ಗೆ ಇದು ಪ್ರಮಾದದಿಂದಾದ ವರದಿ ಎಂಬುದನ್ನು ಮೋದಿ ಜೊತೆಗಿದ್ದ ಉಡುಪಿ ನಗರಸಭೆಯ ಆಗಿನ ಅಧ್ಯಕ್ಷ ಗುಜ್ವಾಡಿ ಪ್ರಭಾಕರ ನಾಯಕ್ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ 1992ರಲ್ಲಿ ಉಡುಪಿಗೆ, ಎಲ್.ಕೆ. ಅಡ್ವಾಣಿಯವರ ರಥಯಾತ್ರೆಯ ಉಸ್ತುವಾರಿಯನ್ನು ಮೋದಿಯವರು ನೋಡಿಕೊಂಡಿದ್ದ ಕಾರಣ ಯಾತ್ರೆಯ ರೂಪುರೇಷೆಯ ಸಭೆ ನಡೆಸಲು ಬಂದಿದ್ದರು. ಸಭೆ ಮಾಜಿ ಸಚಿವರಾಗಿದ್ದ, ದಿವಂಗತ ವಿಎಸ್ ಆಚಾರ್ಯರ ಮನೆಯಲ್ಲಿ ನಡೆದಿತ್ತು ಮೋದಿಯವರ ಸಂದರ್ಶನ ಮಾಡುತ್ತಿರುವಾಗ ಅವರ ಜೊತೆಗೆ ಎಂಜಿನಿಯರ್ ಒಬ್ಬರಿದ್ದರು. ಅವರ ಕ್ವಾಲಿಫಿಕೇಶನ್ ಮೋದಿಯವರ ಹೆಸರಿನ ಮುಂದೆ ಬಿದ್ದಿತ್ತು ಎನ್ನುವ ಸ್ಪಷ್ಟನೆ ಸಿಕ್ಕಿದೆ.

LEAVE A REPLY

Please enter your comment!
Please enter your name here