ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ದಾವಣಗೆರೆಯ ಮಂಗನ ಡ್ರೈವಿಂಗ್!

0
317

ನ್ಯೂಸ್ ಕನ್ನಡ ವರದಿ : ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ದಾವಣಗೆರೆಯ ಡ್ರೈವಿಂಗ್ ಮಂಗ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿ ಮಾಡಿದೆ. ಅಕ್ಟೋಬರ್ 1 ರಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಿ ಬಸ್ ಸ್ಟೇರಿಂಗ್ ತಿರುಗಿಸುತ್ತಿದ್ದ ಮಂಗನಾಟವನ್ನು ಪಾಕಿಸ್ತಾನದ ರಾಜಕಾರಣಿಯೊಬ್ಬರು ತಮ್ಮದೇ ದೇಶದ ಪ್ರಧಾನಿಗೆ ಹೋಲಿಕೆ ಮಾಡಿರುವುದು ಭಾರೀ ಸುದ್ದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಡ್ರೈವಿಂಗ್ ಮಂಗನ ವೀಕ್ಷಣೆ ಮಾಡಿರುವ ಪಾಕಿಸ್ತಾನ ರಾಜಕಾರಣಿ ಮೌಲಾನ ಫಜ್ವಲ್ ರೆಹೆಮಾನ್ ಎಂಬುವರು ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್​ಗೆ ಟಾಂಗ್ ನೀಡಿದ್ದಾರೆ. ಇವರ ಹೇಳಿಕೆ ರಾಜ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ದಾವಣಗೆರೆ ಮಂಗನನ್ನು ಪಾಕಿಸ್ತಾನದ ಪ್ರಧಾನಿಗೆ ಹೊಲಿಸಿದ್ದರಿಂದ ದಾವಣಗೆರೆಯ ಮಂಗನ ವಿಡಿಯೋ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ವೈರಲ್ ಆಗಿದೆ.

ಮಂಗ ಸ್ಟೇರಿಂಗ್ ಹಿಡಿದು ತಿರುಗಿಸುತ್ತಿದ್ದರೆ ಚಾಲಕ ಗೇರ್ ಚೇಂಜ್ ಮಾಡಿ ಬಸ್ ಹಿಡಿತದಲ್ಲಿಟ್ಟುಕೊಂಡಿದ್ದ. ಅದೇ ರೀತಿ ಪಾಕಿಸ್ತಾನದಲ್ಲಿಯು ಮಂಗ ಮತ್ತು ಚಾಲನ ಸ್ಥಿತಿ ನಿರ್ಮಾಣವಾಗಿದೆ. ಮಂಗ ಬಸ್ ಚಾಲಕ ನಾನೇ ಎಂದುಕೊಂಡಿತ್ತು. ಆದ್ರೆ ಹಿಂದೆ ಚಾಲಕ ಬಸ್ ಚಲಾಯಿಸುತ್ತಿದ್ದ. ಅದೇ ರೀತಿ ಪ್ರಧಾನಿ ನಾನೇ ಸರ್ಕಾರ ನಡೆಸುತ್ತೇನೆ ಎಂದುಕೊಂಡಿದ್ದಾರೆ. ಆದರೆ ಹಿಂದೆ ಇರುವುದು ಸೈನಿಕ ಆಡಳಿತ ಎಂದು ಮೌಲಾನ ಟಾಂಗ್ ನೀಡಿದ್ದಾರೆ.

cts: eenadu

LEAVE A REPLY

Please enter your comment!
Please enter your name here