ಐದು ವರ್ಷಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 5 ಕೋಟಿ ಸ್ಕಾಲರ್ ಶಿಪ್: ಕೇಂದ್ರ ಸರಕಾರ

0
489

ನ್ಯೂಸ್ ಕನ್ನಡ ವರದಿ: (11.06.19):ಅಲ್ಪಸಂಖ್ಯಾತರ ದ್ವೇಷಿ ಎಂದೇ ಬಿಂಬಿತವಾಗಿದ್ದ ನರೇಂದ್ರ ಮೋದಿ ಸರಕಾರ ಇದೀಗ ಅಲ್ಪಸಂಖ್ಯಾತರಿಗೆ ಪ್ರಯೋಜನಕಾರಿಯಾಗುವ ಯೋಜನೆಯೊಂದನ್ನು ಜಾರಿಗೆ ತಂದಿದೆ. ಪ್ರಧಾನಿಯವರ ಸಬ್ ಕಾವಿಶ್ವಾಸ್ ಅನ್ನೇ ಮೂಲವಾಗಿರಿಸಿಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 5 ಕೋಟಿ ವಿದ್ಯಾರ್ಥಿಗಳಿಗೆ 5 ವರ್ಷಗಳೊಳಗೆ ವಿದ್ಯಾರ್ಥಿ ವೇತನ ವಿತರಿಸಲು ಕೇಂದ್ರ ಸರಕಾರ ಯೋಜನೆ ಹಾಕಿಕೊಂಡಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.

ದೆಹಲಿಯ ಅಂತ್ಯೋದಯ ಭವನದಲ್ಲಿ ಮಂಗಳವಾರ ಆಯೋಜನೆಗೊಂಡಿದ್ದ ಮೌಲಾನಾ ಆಜಾದ್​ ಶಿಕ್ಷಣ ಪ್ರತಿಷ್ಠಾನದ 65ನೇ ಸಾಮಾನ್ಯ ಹಾಗೂ 112ನೇ ಆಡಳಿತ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸೌಲಭ್ಯದ ಶೇ.50 ಭಾಗ ಬಾಲಕಿಯರಿಗೆ ಲಭಿಸುವಂತೆ ಮಾಡಲಾಗುವುದು ಎಂದರು. ನರೇಂದ್ರ ಮೋದಿ ಅವರ ನೇತೃತ್ವದ ಎನ್​ಡಿಎ ಸರ್ಕಾರ ರಾಷ್ಟ್ರದಲ್ಲಿ ಮತೀಯವಾದದ ಕಾಯಿಲೆ ಮತ್ತು ಓಲೈಕೆ ರಾಜಕಾರಣಗಳಿಗೆ ಸೂಕ್ತ ಮದ್ದು ಕಂಡುಕೊಳ್ಳುವ ಜತೆಗೆ ಎಲ್ಲರನ್ನೂ ಒಳಗೊಳಿಸಿಕೊಳ್ಳುವಿಕೆಯ ಅಭಿವೃದ್ಧಿಗೆ ಚಾಲನೆ ನೀಡಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here