ವಾರಕ್ಕೆ 5 ದಿನ ಮಾತ್ರ ಕೆಲಸ: ಮಹಾರಾಷ್ಟ್ರ ಸರ್ಕಾರದ ಐತಿಹಾಸಿಕ ಆದೇಶ!

0
67

ನ್ಯೂಸ್ ಕನ್ನಡ ವರದಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ವಾರಕ್ಕೆ 5 ದಿನ ಎಂದು ನಿಗದಿಪಡಿಸಿ ಮಹಾರಾಷ್ಟ್ರ ಸರ್ಕಾರ ಐತಿಹಾಸಿಕ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ಅವರ ವೈಯಕ್ತಿಕ ಜೀವನವನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಅವಧಿಯನ್ನು ವಾರದಲ್ಲಿ 5 ದಿನ ಎಂದು ನಿಗದಿಪಡಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದೇ ಫೆ.29ರಂದು ನೂತನ ಆದೇಶ ಜಾರಿಗೆ ಬರಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಸರ್ಕಾರದ ಈ ಐತಿಹಾಸಿಕ ತೀರ್ಮಾನದಿಂದ ಮಹಾರಾಷ್ಟ್ರದ 20 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಲಾಭವಾಗಲಿದ್ದು, ಇದರಿಂದ ವಿದ್ಯುತ್ ಹಾಗೂ ತೈಲದ ಖರ್ಚನ್ನು ಉಳಿಸಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

ಆದರೆ ದಿನದ ಕೆಲಸದ ಅವಧಿಯನ್ನು 45ನಿಮಿಷಗಳಷ್ಟು ಅಧಿಕಗೊಳಿಸಲಾಗಿದ್ದು, ಬೆಳಗನಿ 9.45 ಗಂಟೆಯಿಂದ ಸಾಯಂಕಾಲ 5.30 ವರೆಗೆ ಹಾಗೂ ಬೆಳಗಿನ 10 ಗಂಟೆಯಿಂದ ಸಾಯಂಕಾಲ 5.45 ಗಂಟೆ ಎಂದು ನಿಗದಿಪಡಿಸಲಾಗಿದೆ.

ಇಷ್ಟೇ ಅಲ್ಲದೇ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದ್ದು, ಒಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರದಿಂದ ಸರ್ಕಾಋಇ ನೌಕರರಿಗೆ ಬಂಪರ್ ಹೊಡೆದಂತಾಗಿದೆ.

LEAVE A REPLY

Please enter your comment!
Please enter your name here