ಮಧ್ಯಪ್ರದೇಶ ರಾಜಕೀಯಕ್ಕೆ ‘ಟ್ರಬಲ್ ಶೂಟರ್ ಡಿಕೆಶಿ’ ಎಂಟ್ರಿ..!

0
111

ನ್ಯೂಸ್ ಕನ್ನಡ ವರದಿ: ಕೆಪಿಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರು ಮಧ್ಯಪ್ರದೇಶ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇಂದು ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ಮಧ್ಯಪ್ರದೇಶ ಕಾಂಗ್ರೆಸ್ ನ 22 ಶಾಸಕರು ವಾಸ್ತವ್ಯ ಹೂಡಿರುವ ಬೆಂಗಳೂರಿನ ಯಲಹಂಕ ಸಮೀಪದ ರೆಸಾರ್ಟ್ ಗೆ ಭೇಟಿ ನೀಡಿದ್ದಾರೆ.ಇಂದು ಬೆಳಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಕೃಷ್ಣಬೈರೇಗೌಡ, ಹ್ಯಾರೀಸ್ ಸೇರಿದಂತೆ ಹಲವು ನಾಯಕರು ರೆಸಾರ್ಟ್ ನಲ್ಲಿ ಶಾಸಕರ ಭೇಟಿಗೆ ಯತ್ನಿಸಿದ್ದಾರೆ.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡುತ್ತಿದೆ. ನಮ್ಮದೇ ಆದ ರಾಜಕೀಯ ತಂತ್ರಗಳಿವೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿದೆ. ನಾನು ದಿಗ್ವಜಯ್ ಸಿಂಗ್ ಬೆಂಬಲಕ್ಕಿದ್ದೇನೆ. ಕಾನೂನು, ಸುವ್ಯವಸ್ಥೆ ಆದೇಶವನ್ನು ಸರ್ಕಾರ ಜಾರಿಗೆ ತರಬೇಕಾದ ಪರಿಸ್ಥಿತಿ ಬರಬಾರದು ಎಂದು ಹೇಳಿದರು.

LEAVE A REPLY

Please enter your comment!
Please enter your name here