ಮಂಗಳೂರು ಹಿಂಸಾಚಾರಕ್ಕೆ ಮೂರು ಪೋಲಿಸ್ ಅಧಿಕಾರಿಗಳೆ ಕಾರಣ: ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾಜಿ ಮೇಯರ್ ಕೆ ಅಶ್ರಫ್

0
563

ನ್ಯೂಸ್ ಕನ್ನಡ ವರದಿ: ಮಂಗಳೂರು ಹಿಂಸಾಚಾರಕ್ಕೆ ಆ ಮೂರು ಪೋಲಿಸರು ಇವರನ್ನು ನ್ಯಾಯಾಂಗ ವಿಚಾರಣೆಗೆ ಒಪ್ಪಿಸಬೇಕು ಎಂದು ಮಾಜಿ ಮೇಯರ್ ಕೆ. ಅಶ್ರಫ್ ಒತ್ತಾಯಿಸಿದ್ದಾರ.

ವಾರ್ತಾಭಾರತಿ ಮಾಧ್ಯಮದೊದಿಂದಿಗೆ ಮಾತನಾಡಿದ ಅವರು, ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕೆಂದುಕೊಂಡಿದ್ದೆವು ಆದರೆ ಪೋಲಿಸರು ಯಾವುದೆ ಅನುಮತಿ ನೀಡಿಲಿಲ್ಲ ಆದರಿಂದ ಜನರು ಆಕ್ರೋಶಗೊಂಡರು ಎಂದು ತಿಳಿಸಿದರು.

ಮಂಗಳೂರು ಶಾಂತಿ ಕದಡಲು ಕಮಿಷನರ್ ಹರ್ಷ, ಶಾಂತರಾಮ್ ಕುಂದರ್ ಮತ್ತು ಶರೀಫ್ ಈ ಮೂವರೆ ಕಾರಣ. ನಾವು ಪ್ರತಿಭಟನೆ ಮಾಡಬೇಕು ಎಂದು ಅನುಮತಿ ಕೇಳಿದ್ದು ನೆಹರು ಮೈದಾನದಲ್ಲಿ ಆದರೆ ಪೋಲಿಸರು ನೀವು ಜಿಲ್ಲಾ ಕಛೇರಿ ಬಳಿ ಮಾಡಿ ಎಂದರು. ಅದಕ್ಕೆ ನಾವು, ನೀವು ಅಷ್ಟು ಜನರನ್ನು ಜಿಲ್ಲಾ ಕಛೇರಿಬಳಿ ಹೇಗೆ ನಿಯಂತ್ರಿಸುತ್ತಿರಿ ಎಂಬ ಪ್ರಶ್ನೆಗೆ ಪೋಲಿಸರು ನಾವು ಹೇಗೊ ಮಾಡ್ಕೊತಿವಿ ನೀವು ಜಿಲ್ಲಾ ಕಛೇರಿ ಬಳಿ ಪ್ರತಿಭಟನೆ ಮಾಡಲು ಒಪ್ಪಿಕೊಳ್ಳಿ ಎಂದರು. ಅದರೆ ನಾವು ಅದಕ್ಕೆ ಒಪ್ಪೊಕೆ ರೆಡಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ಅದೆ ದಿನ ಜಿಲ್ಲಾ ಕಛೇರಿ ಬಳಿ ಪ್ರತಿಭಟನೆ ಮಾಡುಲು ಮತ್ತೊಬ್ಬರು ಅನುಮತಿ ಕೇಳಿಕೊಂಡು ಬಂದಿದ್ದರು ಆಗ ಪೋಲಿಸರು ಅವರಿಗೆ ನೋಡೊಣ ಎಂದು ಹೇಳಿ ಕಳಿಸಿದರು. ನಮಗೂ ಅನುಮತಿ ನೀಡದೆ 144 ಸೆಕ್ಸನ್ ಹೆಸರಲ್ಲಿ ಅನುಮತಿಯನ್ನು ರದ್ದು ಮಾಡಿದ್ದಾರೆ.

ನಾನು ಪ್ರತಿಭಟನೆಗೆ ನಾನು ಹೋಗಿರಲಿಲ್ಲ ನಾನು ಮನೆಯಲ್ಲೆ ಇದ್ದೆ. ಆಗಾಗ ಯುವಕರನ್ನು ಕಾಲ್ ಮಾಡಿ ಕೊಳ್ಳುತ್ತಿದ್ದೆ. ನನಗೆ ಏನು ಮಾಡಬೇಕು ಎಂದು ತಿಳಿಯದೆ ಆಸ್ಪತ್ರೆಗೆ ಭೇಟಿ ನೀಡಿದೆ ಅಲ್ಲಿ ಲಾಠಿಯಿಂದ ಬೆಟ್ಟು ತಿದ್ದವರ ಬಳಿ ಮಾತಾಡಿ, ನಂತರ ಮತ್ತೊಂದು ಆಸ್ಪತ್ರೆಯಲ್ಲಿ ತುಂಬಾ ಜನ ಪೆಟ್ಟು ತಿಂದವರು ಇದ್ದಾರೆ ಎಂದು ಹೇಳಿದಾಗ ಅಲ್ಲಿಗೆ ಹೊರಟೆವು. ಇದಾದ ನಂತರ ನಮ್ಮ ಯುವಕರು ಗಲಭೆ ನಡೆಯುತ್ತಿರು ಜಾಗಕ್ಕೆ ಹೋಗುವ ಎಂದು ಹೇಳಿದರು ಆದರೆ ನಾನು ಅಲ್ಲಿಗೆ ಹೋಗೊದು ಬೇಡ ಅಲ್ಲಿ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಹೇಳಿದೆ. ಇದಾದ ಬೆನ್ನಲ್ಲೇ ಪೋಲಿಸ್ ಕಮಿಷನರ್ ನನ್ನ ಸ್ನೇಹಿತನಿಗೆ ಕಾಲ್ ಮಾಡಿದರು, ಅವರಿರುವ ಸ್ಥಳಕ್ಕೆ ಕರೆದರು ನಾನು ಪೋಲಿಸ್ ಇರುವ ಜಾಗಕ್ಕೆ ಹೋದಾಗ ಅಲ್ಲಿ ಗೋಲಾಬಾರ್ ಮುಂದುವರೆದಿತ್ತು, ನಾನು ಪೋಲಿಸರನ್ನು ಅಲ್ಲಿಯೆ ನಿಲ್ಲಿಸಿ ಯುವಕರ ಬಳಿ ಹೋಗಿ ಮಾತಾಡಿ ಸಮಾಧಾನ ಮಾಡಿಬಂದಿದ್ದರು ಗೋಲಿಬಾರ್ ಮುಂದುವರೆಯಿತು. ಆಗ ನಮ್ಮ ಯುವಕರು ನೋಡಿ ಅಶ್ರಫ್ ಸರ್ ನಾವು ಸುಮ್ಮನೆ ಇದ್ದರು ಸೂಟ್ ಮಾಡುತ್ತಲೆ ಇದ್ದಾರೆ ಕಲ್ಲು ತೂರುತ್ತಲೆ ಇದ್ದಾರೆ ಎಂದು ಆಕ್ರೋಶದಿಂದ ತಿಳಿಸಿದರು ಇದಾದ ನಂತರ ನನ್ನ ತಲೆಗೆ ಏನೊ ಬಿದ್ದಂತೆ ಆಯ್ತು ನಾನು ಅಲ್ಲಿಯೇ ಬಿದ್ದೆ ಎಂದು ತಿಳಿಸಿದೆರು.

144 ಸೆಕ್ಸನ್ ಇರುವ ಕಾರಣ ಜಿಲ್ಲಾ ಕಚೇರಿ ಬಳಿ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ ಆದರಿಂದ ಅನುಮತಿಯನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು. 144 ಬಗ್ಗೆ ಮತ್ತು ಅನುಮತಿ ರದ್ದಾದ ಬಗ್ಗೆ ತಿಳಿಯದ ಜನ ಮಾರನೆ ದಿನ ಪ್ರತಿಭಟನೆಗೆಂದು ಸ್ಥಳಕ್ಕೆ ಬಂದಿದ್ದಾರೆ. ಆದರೆ ಪೋಲಿಸರು ಈ ಕುರಿತು ಸರಿಯಾಗಿ ಮಾಹಿತಿ ನೀಡದೆ ಬಾಯಿಗೆ ಬಂದಾಗೆ ಬೈದಿದ್ದಾರೆ ಇದರಿಂದ ಜನರು ಆಕ್ರೋಶಗೊಂಡಿದ್ದಾರೆ.

ಇದ್ದ ಇನ್ನೂರು ಜನರಿಗೆ ಪೋಲಿಸರು ಸರಿಯಾದ ಮಾಹಿತಿ ನೀಡಿ ಕಳಿಸಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಮೊದಲು ಬೈದು ಲಾಠಿಚಾರ್ಜ್ ಮಾಡಿದ ನಂತರ ಜನರು ಆಕ್ರೋಶಗೊಂಡಿದ್ದಾರೆ. ಬೇರೆ ಕಡೆ ಲಕ್ಷ ಲಕ್ಷ ಜನರನ್ನು ಪೋಲಿಸರು ನಿಂಯತ್ರಿಸಿದ್ದಾರೆ ಅದರೆ ಮಂಗಳೂರಿನ ಒಂದು ಚಿಕ್ಕ ಗುಂಪನ್ನು ನಿಯಂತ್ರಿಸಲು ಸಾಧ್ಯಾವಾಗಲಿಲ್ಲ ಅಂದರೆ ಈ ಕಮಿಷನರ್ ನಮ್ಮ ಜಿಲ್ಲೆಗೆ ಬೇಕ ಎಂದು ಸರ್ಕಾರ ಆಲೋಚನೆ ಮಾಡಿ ಸಸ್ಪೆಂಡ್ ಮಾಡಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸಬೇಕು ಎಂದು ಅಶ್ರಫ್ ಅವರು ಕೇಳಿಕೊಂಡಿದ್ದಾರೆ.

ಯಾರು ಆತಂಕ ಪಡಬೇಡಿ ನಾನು ಆರೋಗ್ಯವಾಗಿದ್ದೇನೆ ಶಾಂತಿ ಕಾಪಾಡಿ, ಸುಳ್ಳು ಸುದ್ದಿಗೆ ತಲೆಕೊಡಬೇಡಿ ಎಂದು ಮನವಿಮಾಡಿದ್ದಾರೆ.

LEAVE A REPLY

Please enter your comment!
Please enter your name here