ಗಾಯಕ ರಘು ದೀಕ್ಷಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಪತ್ನಿ ಮಯೂರಿ!

0
435

ಬೆಂಗಳೂರು: ಖ್ಯಾತ ಸಂಗೀತಗಾರ ರಘು ದೀಕ್ಷಿತ್ ಮೇಲೆ ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ್ #MeToo ಅಭಿಯಾನದಡಿ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಅವರ ಪತ್ನಿ ಮಯೂರಿ ಉಪಾಧ್ಯ ಪ್ರತಿಕ್ರಿಯೆ ನೀಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಸಭ್ಯವಾಗಿ ಮತ್ತು ಅನುಚಿತವಾಗಿ ವರ್ತಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು, ಅಂತಹವರಿಗೆ ಶಿಕ್ಷೆಯಾಗಲೇಬೇಕು, ಈ ಮೂಲಕವಾದರೂ ಬೇರೆ ಪುರುಷರು ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುವ ಧೈರ್ಯ ಮಾಡುವುದಿಲ್ಲ, ಅನ್ಯ ಪುರುಷರಿಗೆ ಇದು ಪಾಠವಾಗಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.

ಗಾಯಕ ರಘು ದೀಕ್ಷಿತ್, ನಾನು ನನ್ನ ಪತ್ನಿಗೆ ವಿಚ್ಛೇದನ ನೀಡುತ್ತಿದ್ದೇನೆ, ಕಳೆದ ಮೂರು ವರ್ಷಗಳಿಂದ ನಾವು ಜೊತೆಯಲ್ಲಿಲ್ಲ, ವಿಚ್ಛೇದನ ಪ್ರಕ್ರಿಯೆಯ ಕೊನೆಯ ಹಂತದಲ್ಲಿದ್ದೇವೆ, ಆಕೆ ಒಳ್ಳೆಯವಳು, ನಾನು ಆಕೆಗೆ ಉತ್ತಮ ಪತಿಯಾಗಲಿಲ್ಲ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಕೂಡ ಪ್ರತಿಕ್ರಿಯಿಸಿರುವ ಮಯೂರಿ ಉಪಾಧ್ಯ, ನನ್ನ ಮದುವೆ ಮತ್ತು ವಿಚ್ಛೇದನ ವಿಷಯ ಇಲ್ಲಿ ಮುಖ್ಯ ವಿಷಯವಲ್ಲ ಮತ್ತು ಸಾಂದರ್ಭಿಕ ಚರ್ಚೆಯ ವಿಷಯ ಕೂಡ ಅಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here