ಅದ್ಭುತ ಗೋಲ್ ಮೂಲಕ ದಾಖಲೆ ಸೃಷ್ಟಿಸಿದ ಶ್ರೇಷ್ಟಫುಟ್ಬಾಲ್ ಆಟಗಾರ ಮೆಸ್ಸಿ!

0
161

ನ್ಯೂಸ್ ಕನ್ನಡ ವರದಿ(02.5.19): ಅರ್ಜೆಂಟೀನಾ ತಂಡದ ಅಪ್ರತಿಮ ಆಟಗಾರ ಲಿಯೋನಲ್ ಮೆಸ್ಸಿ ತನ್ನದೇ ಆದ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಶ್ರೇಷ್ಟ ಪ್ರದರ್ಶನದ ಮೂಲಕ ಮನೆಮಾತಾಗಿರುವ ಮೆಸ್ಸಿ ಇದೀಗ ನೂತನ ದಾಖಲೆಯನ್ನು ಸೃಷ್ಟಿಸಿದ್ದಾರೆ. ಬಾರ್ಸಿಲೋನಾ ತಂಡವನ್ನು ಪ್ರತಿನಿಧಿಸಿ ಲಿವರ್ ಪೂಲ್ ತಂಡದ ವಿರುದ್ಧದ ಪಂದ್ಯಾಟದಲ್ಲಿ ಅದ್ಭುತವಾದ ಫ್ರೀ ಕಿಕ್ ಗೋಲ್ ಬಾರಿಸುವ ಮೂಲಕ ಮೆಸ್ಸಿ 600 ಗೋಲುಗಳನ್ನು ಗಳಿಸುವ ನೂತನ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಲಿವರ್​​​ಪೂಲ್​​ ಎದುರಿನ ಪಂದ್ಯದಲ್ಲಿ ರೋಚಕ ಎರಡು ಗೋಲುಗಳನ್ನು ಸಿಡಿಸಿ ತಂಡ ಗೆಲುವಿನ ರೂವಾರಿಗಳಾಗಿ ಮಿಂಚಿದರು. ಈ ಮೂಲಕ ತಮ್ಮ ಬಾರ್ಸಿಲೋನಾ ಕ್ಲಬ್​​​​​​​​​​ನ 600ನೇ ಗೋಲನ್ನು ಸಿಡಿಸಿ ಸಂಭ್ರಮಿಸಿದರು. ಮೆಸ್ಸಿ ಅವರು ಮಾಡಿರುವ ಈ ಸಾಧನೆಗೆ ವಿಶ್ವದ ಪ್ರಮುಖ ಫುಟ್ಬಾಲ್​​ ದಿಗ್ಗಜರು ಸಾಮಾಜಿಕ ಜಾಲ ತಾಣಗಳಲ್ಲಿ ಹೊಗಳಿದ್ದಾರೆ. ಈ ಪಂದ್ಯದ ಕೊನೆಯಲ್ಲಿ ಮೆಸ್ಸಿಗೆ ಸಿಕ್ಕ ಫ್ರೀ-ಕಿಕ್​​​​​​​ ಅನ್ನು ಸದುಪಯೋಗಪಡಿಸಿಕೊಂಡು ಅದ್ಭುತ ಗೋಲನ್ನು ಬಾರಿಸಿದರು. ಇದರೊಂದಿಗೆ ಬಾರ್ಸಿಲೋನಾ ತಂಡ 3-0 ಗೋಲುಗಳಿಂದ ಜಯ ದಾಖಲಿಸಿ ಚಾಂಪಿಯನ್ಸ್​​ ಲೀಗ್​ನ ಫೈನಲ್​​ ಪ್ರವೇಶಿಸಿತು.

LEAVE A REPLY

Please enter your comment!
Please enter your name here