ಮಡಿಕೇರಿಯಲ್ಲಿ ಯಶಸ್ವಿಯಾಗಿ ನಡೆದ ಬ್ರಹತ್ ರಕ್ತದಾನ ಶಿಬಿರ

0
547

ಮಡಿಕೇರಿ: ಸಪ್ಟೆಂಬರ್ 07 ಎಸ್.ಡಿ.ಪಿ.ಐ ಮಡಿಕೇರಿ ನಗರ ಸಮಿತಿ ಹಾಗೂ ಸರಕಾರಿ ಆಸ್ಪತ್ರೆ ರಕ್ತನಿಧಿ ಮಡಿಕೇರಿ ಇದರ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ಸೆಪ್ಟೆಂಬರ್ 7 ರಂದು ಮಡಿಕೇರಿಯ ಕೂರ್ಗ್ ಕಮ್ಯುನಿಟಿ ಹಾಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ನಾವು ಮಾಡಿದ ಪ್ರತಿಯೊಂದು ರಕ್ತದ ಹನಿ ಒಂದು ಜೀವಕ್ಕೆ ಉಡುಗೊರೆಯಾಗಿರುತ್ತದೆ ಎನ್ನುವ ನಿರ್ದಿಷ್ಟ ಉದ್ದೇಶದಿಂದ ಆಯೋಜಿಸಿದ ಈ ಒಂದು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಜನಾಬ್ ಅಬೂಬಕ್ಕರ್ ,ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯರಾದ ಮುಹ್ಸಿನ್ ಅಹ್ಮದ್,ಎಸ್ಡಿಪಿಐ ಮಡಿಕೇರಿ ನಾಯಕರಾದ ಮನ್ಸೂರ್ ,ಮಕ್ಕಾ ಮಸೀದಿಯ ಮುದರ್ರಿಸ್ ಮೌಲಾನಾ ಹಕೀಂ ಸಾಬ್ ,
ಮಡಿಕೇರಿ ಸರಕಾರಿ ಆಸ್ಪತ್ರೆಯ ರಕ್ತನಿಧಿಯ ಉಸ್ತುವಾರಿ ಕರೀಂ ಭಯ್ಯಾ ಉಪಸ್ಥಿತರಿದ್ದರು..

ಈ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಸುಮಾರು 50 ಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ಶಿಬಿರದಲ್ಲಿ ರಕ್ತದಾನಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು,

ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸರಕಾರಿ ಆಸ್ಪತ್ರೆ ರಕ್ತನಿಧಿ ಮಡಿಕೇರಿಯ ಸಿಬ್ಬಂದಿ ವರ್ಗ ಹಾಗೂ ಸಹಕರಿಸಿದ ಎಲ್ಲಾ ನಾಗರಿಕರಿಗೂ ಹ್ರದಯಸ್ಪರ್ಶಿ ಅಭಿನಂದನೆಗಳು..

ಪ್ರಕಟಣೆ:
ಎಸ್.ಡಿ.ಪಿ.ಐ ಮಡಿಕೇರಿ ನಗರ ಸಮಿತಿ.

LEAVE A REPLY

Please enter your comment!
Please enter your name here