40ಕ್ಕಿಂತ ಹೆಚ್ಚು ಸೀಟು ಗೆದ್ದರೆ ನರೇಂದ್ರ ಮೋದಿ ನೇಣು ಹಾಕಿಕೊಳ್ಳುತ್ತಾನಾ?: ಖರ್ಗೆ ಕಿಡಿ

0
76

ನ್ಯೂಸ್ ಕನ್ನಡ ವರದಿ(13.5.19):ಕಲಬುರ್ಗಿ: ಚಿಂಚೋಳಿ ಮತ ಕ್ಷೇತ್ರ ವ್ಯಾಪ್ತಿಯ ಕೊಡ ದೂರಿನಲ್ಲಿ ಭಾನುವಾರ ಕಾಂಗ್ರೆಸ್ ಪರ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದರು. “ಕಾಂಗ್ರೆಸ್ 40 ಸೀಟು ಗೆಲ್ಲುತ್ತದೆ ಎಂದು ನರೇಂದ್ರ ಮೋದಿ ಟೀಕಿಸುತ್ತಾನೆ . 40ಕ್ಕಿಂತ ಹೆಚ್ಚು ಸೀಟುಗಳು ಗೆದ್ದರೆ ಮೋದಿ ನೇಣು ಹಾಕಿಕೊಳ್ಳುತ್ತಾನ” ಎಂದು ಖರ್ಗೆ ಪ್ರಶ್ನಿಸಿದರು.

ಕರ್ಗೆ ಮೋದಿಯನ್ನು ಪ್ರಶ್ನಿಸುತ್ತಾ “ಸ್ವಾತಂತ್ರ್ಯ ಬಂದಾಗ ಅವನಿನ್ನೂ ಹುಟ್ಟೇ ಇರಲಿಲ್ಲ , ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷವನ್ನು ಅವನು ಟೀಕಿಸುತ್ತಿದ್ದಾನೆ. ಅಬ್ ಎಕ್ ಔರ್ ಬಾರ್ ಮೋದಿ ಸರ್ಕಾರ್ ಎಂದು ಹೇಗೆ ತಾನೇ ಘೋಷಿಸಿ ಕೊಳ್ಳುತ್ತಿದ್ದಾನೆ. ಕಾಂಗ್ರೆಸ್ 40ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದರೆ ದೆಹಲಿಯ ವಿಜಯ್ ಚೌಕ್ ನಲ್ಲಿ ನೇಣು ಹಾಕಿಕೊಳ್ಳುತ್ತಾನ?

“ರಾಜೀವ್ ಗಾಂಧಿ ಸತ್ತು 30 ವರ್ಷಗಳಾಗಿವೆ. ಅವರ ಬೂದಿ ಎಲ್ಲಾ ಕಡೆ ಚೆಲ್ಲಿಯಾಗಿವೆ ಈಗ ಮೋದಿ ಅವರ ಬೂದಿಯಲ್ಲಿ ಹುಳು ಹುಡುಕುತ್ತಿದ್ದಾನೆ”. ಎಂದು ಖರ್ಗೆ ಮೋದಿ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here