“ಮೋದಿ, ಅಮಿತ್ ಶಾ ದೇಶಕ್ಕೆ ವಕ್ಕರಿಸಿಕೊಂಡಿರುವ ಶನಿಗಳು”

0
69

ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾರೀ.. ರಾಜಾಹುಲಿ, ನಿಜವಾಗಿಯೂ ರಾಜಾಹುಲಿಯಾಗಿದ್ದರೆ, ತಮ್ಮ ಶಕ್ತಿಯನ್ನು ಮೋದಿ ಮತ್ತು ಶಾ ಮುಂದೆ ಪ್ರದರ್ಶಿಸಲಿ. ಅವರನ್ನು ಕಂಡರೆ, ಯಡಿಯೂರಪ್ಪನವರಿಗೆ ಮಾತೇ ಹೊರಡುವುದಿಲ್ಲ. ರಾಜಾಹುಲಿಯಂತೆ.. ರಾಜಾಹುಲಿ ಎಂದು ಉಗ್ರಪ್ಪ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅನ್ನೋದು ಇದೆ. ಬಿಜೆಪಿಯಲ್ಲಿ ಏನಾದರೂ ಇದೆಯಾ ಎಂದು ಪ್ರಶ್ನಿಸಿರುವ ಉಗ್ರಪ್ಪ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಈ ದೇಶಕ್ಕೆ ವಕ್ಕರಿಸಿಕೊಂಡಿರುವ ಶನಿಗಳು ಎಂದು ಉಗ್ರಪ್ಪ ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here