ಅರ್ಥಿಕ ಸಂಕಷ್ಟ, ನೇಣಿಗೆ ಸರಣಾದ ಲಾನ್ಸನ್ ಟೊಯೋಟಾ ಎಂಡಿ! ಸುದ್ದಿ ಓದಿ

0
8334

ನ್ಯೂಸ್ ಕನ್ನಡ ವರದಿ ಚೆನೈ: ಆರ್ಥಿಕ ಸಂಕಷ್ಟದಿಂದ ಉದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಚೆನೈನ್​ಪ್ರಸಿದ್ಧ ಉದ್ಯಮ ಸಂಸ್ಥೆಯಾದ ಲಾನ್ಸನ್ ಟೊಯೋಟಾ ಸಂಸ್ಥೆಯ ಲಾನ್ಸನ್ ಗ್ರೂಪ್ ಜಾಯಿಂಟ್ ಎಂಡಿ ರೀಟಾ ಲಂಕಲಿಗಂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುರುವಾರ ಮುಂಜಾನೆ ಚೈನೈನ ನುಂಗಾಬಕ್ಕಂನ ಕೊಥಾರಿ ರಸ್ತೆಯಲ್ಲಿರೋ ತಮ್ಮ ನಿವಾಸದ ಸ್ನಾನದ ಕೋಣೆಯಲ್ಲಿ ರೀಟಾ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಚೈನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಉಂಟಾದ ಆರ್ಥಿಕ ಸಂಕಷ್ಟ ಹಾಗೂ ಅಟೋಮೊಬೈಲ್​ ಉದ್ಯಮದಲ್ಲಿ ಉಂಟಾದ ಭಾರಿ ಏರುಪೇರಿನಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಇನ್ನು ರೀಟಾ ಆತ್ಮಹತ್ಯೆಗೆ ಆರ್ಥಿಕ ನೀತಿ ಕಾರಣ ಎಂಬ ಆರೋಪವೂ ಕೇಳಿಬಂದಿದೆ.

LEAVE A REPLY

Please enter your comment!
Please enter your name here