ಪಾಕಿಸ್ತಾನದ ಕೈಗಾರಿಕೆಯೇ ಭಯೋತ್ಪಾದನೆ, ಭಾರತೀಯ ಸೇನೆಯ ಬಗ್ಗೆ ಅತೀವ ಗೌರವವಿದೆ: ಎಂ.ಬಿ ಪಾಟೀಲ್

0
425

ನ್ಯೂಸ್ ಕನ್ನಡ ವರದಿ: ಪಾಕಿಸ್ತಾನದ ಭಯೋತ್ಪಾದಕರು ನಮ್ಮ ದೇಶದ ಸೈನಿಕರ ಮೇಲೆ ನಡೆಸಿದ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿ ದಾಟಿ ಭಯೋತ್ಪಾದಕರ ಅಡಗುದಾಣದ ಮೇಲೆ ನಡೆಸಿದ ದಾಳಿಗೆ ನೂರಾರು ಭಯೋತ್ಪಾದಕರು ಮೃತಪಟ್ಟಿರುವುದು ತಿಳಿದು ಬಂದಿದ್ದು, ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಎಂ.ಬಿ ಪಾಟೀಲ್, ಪಾಕಿಸ್ತಾನ ಒಂದು ದರಿದ್ರ ದೇಶ ಎಂದು  ಹೇಳಿದ್ದಾರೆ.  ಅಲ್ಲಿರುವ ಕೈಗಾರಿಕೆಯೇ ಭಯೋತ್ಪಾದನೆ. ಒಸಾಮಾ ಬಿನ್ ಲಾಡನ್ ಗೆ ರಕ್ಷಣೆ ಕೊಟ್ಟಂತ ದೇಶ ಪಾಕಿಸ್ತಾನ. ಭಾರತೀಯ ವಾಯು ಸೇನೆಯ ದಾಳಿ ವಿಚಾರವಾಗಿ ಸೇನೆ ಮೇಲೆ ನಮಗೆ ಗೌರವ ಇದೆ ಎಂದಿದ್ದಾರೆ.

ನಮ್ಮ ಭಾರತೀಯ ಸೇನೆಯು  ಧೈರ್ಯ ಮತ್ತು ದಿಟ್ಟತನವನ್ನ ಈ ದಾಳಿ ತೋರಿಸಿದೆ. ಪಾಕಿಸ್ತಾನವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕಾಗಿದೆ ಉಗ್ರಗಾಮಿಗಳನ್ನು  ಮಟ್ಟ ಹಾಕಲು  ಕೇಂದ್ರ ಸರ್ಕಾರ, ಭಾರತೀಯ ಸೇನೆಯಿಂದ ಬರುವ ಸಲಹೆಗಳನ್ನು  ಆಧರಿಸಿ ರಾಜ್ಯದ ಪೊಲೀಸ್ ಇಲಾಖೆ ಕೂಡ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here