ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ.

0
184

ನ್ಯೂಸ್ ಕನ್ನಡ ವರದಿ: ವಿಜಯಪುರದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ. ಬಿಜೆಪಿ ಸರಕಾರ ಪಾಪದ ಕೂಸು. ಯಡಿಯೂರಪ್ಪಗೆ ಸಿಎಂಯಾಗುವ ಅರ್ಜೆನ್ಸಿ ಇತ್ತು, ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ನಮಗೆ ಸಿಕ್ಕಿರಲಿಲ್ಲ ಈ ರಾಜ್ಯ ಮತ್ತು ಕೇಂದ್ರ ಎರಡು ಕಡೆ ನಿಮ್ಮದೆ ಸರ್ಕಾರ ಇದೆ ಈಗಾದರು ತಾರತಮ್ಯ ಮಾಡದೆ ಹಳೆ ಅನುದಾನ ಮತ್ತು ಈಗ ಬರಬೇಕಾದ ಅನುದಾನ ತರಿಸಿಕೊಂಡು ಬರ ಮತ್ತು ನರೆಯಿಂದ ತತ್ತರಿಸಿರುವ ಜನರಿಗಾಗಿ ಕೆಲಸ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಸಿಎಂಗೆ ಇಂಟರೆಸ್ಟ್ ಇಲ್ಲ. ಬಿಎಸ್‌ವೈ ಒನ್ ಮ್ಯಾನ್ ಶೋ ಮಾಡುವ ಚಿಂತನೆ ಮಾಡಿದ್ದಾರೆ. ಇದೊಂದು ಅನೈತಿಕ ಸರಕಾರ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಗರಂ ಆದರು ಎಂಬಿ ಪಾಟೀಲ್.

LEAVE A REPLY

Please enter your comment!
Please enter your name here