ರಾಜಕೀಯ ಲಾಭಕ್ಕಾಗಿ ಪತ್ನಿಯನ್ನೇ ಬಿಟ್ಟ ವ್ಯಕ್ತಿ ಮಹಿಳೆಯರಿಗೆ ನ್ಯಾಯ ಕೊಡಿಸಲು ಹೇಗೆ ಸಾಧ್ಯ: ಮಾಯಾವತಿ

0
183

ನ್ಯೂಸ್ ಕನ್ನಡ ವರದಿ(13.5.19): ನವದೆಹಲಿ: ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ವಾಕ್ಸಮರ ತಾರಕ್ಕೇರಿದ್ದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆಗೆ ತೆರೆಬೀಳುವ ಸಮಯ ಸನಿಹವಾಗಿದ್ದು ರಾಜಕೀಯ ಕೆಸರಾಟ ಮತ್ತಷ್ಟು ಹೆಚ್ಚಾಗಿದೆ. ಆಳ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಅವರು ಮೊಸಳೆ ಕಣ್ಣೀರು ಸುರಿಸಿದ್ದಾರೆ ಎಂದು ಪ್ರಧಾನಿಯವರ ಹೇಳಿಕೆಗೆ ಮಾಯಾವತಿಯವರು ಕೆಂಡಾಮಂಡಲರಾಗಿದ್ದಾರೆ. ಪ್ರಧಾನಿ ಮೋದಿ ಕೊಳಕು ರಾಜಕೀಯ ಮಾಡುತ್ತಿದ್ದಾರೆ ಅವರು ಸಾರ್ವಜನಿಕ ಜೀವನದಲ್ಲಿರುವ ಲಾಯಕ್ಕಲ್ಲ ಎಂದು ಕಿಡಿಕಾರಿದರು.

‘ಬಿಜೆಪಿಯಲ್ಲಿನ ಶಾಸಕಿಯರು ತಮ್ಮ ಗಂಡಂದಿರು ಮೋದಿ ಬಲಿ ಸುಳಿದಾಡುತ್ತಿರುವ ಅನ್ನು ಕಂಡು ಭಯಪಡುತ್ತಿದ್ದಾರೆ , ಎಲ್ಲಿ ಇವರು ಕೂಡ ಪ್ರಧಾನಿಯವರ ಹಾಗೆ ಹೆಂಡತಿಯನ್ನು ಬಿಟ್ಟು ಹೋಗುತ್ತಾರೆ ಎಂಬ ಆತಂಕದಲ್ಲಿದ್ದಾರೆ’. ಎಂದು ಮಾತಿನ ಚಾಟಿ ಬೀಸಿದ್ದಾರೆ.’ ರಾಜಕೀಯ ಲಾಭಕ್ಕಾಗಿ ತನ್ನ ಹೆಂಡತಿಯನ್ನೇ ಬಿಟ್ಟು ಬಂದ ಪ್ರಧಾನಿ ಮೋದಿ ಇತರ ಮಹಿಳೆಯರನ್ನು ಗೌರವಿಸಲು ಸಾಧ್ಯವೇ?’ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

ಮೋದಿ ಅವರು ದಲಿತರ ಮತವನ್ನು ಪಡೆಯುವುದಕ್ಕಾಗಿ ಅವರ ಮೇಲೆ ಕಪಟ ಪ್ರೀತಿಯನ್ನು ತೋರಿಸುತ್ತಿದ್ದಾರೆ .ರೋಹಿತ್‌ ವೇಮುಲ ಸಾವು, ಗುಜರಾತ್‌ನ ಊನಾ ಜಿಲ್ಲೆಯಲ್ಲಿ ಸ್ವಯಂಘೋಷಿತ ಗೋರಕ್ಷಕರು ಮತ್ತು ಶಬ್ಬೀರಪುರ ಗ್ರಾಮದ ದಲಿತರ ಮೇಲೆ ನಡೆದ ದಾಳಿ ಇವ್ಯಾವುದನ್ನೂ ದಲಿತರು ಮರೆತಿಲ್ಲ’ ಎಂದರು.

LEAVE A REPLY

Please enter your comment!
Please enter your name here