ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ಮಣಿಶಂಕರ್ ಅಯ್ಯರ್!

0
110

ನ್ಯೂಸ್ ಕನ್ನಡ ವರದಿ (15.5.19): ಪ್ರಧಾನಿ ಮೋದಿಯವರನ್ನು ನೀಚ್ ಆದ್ಮಿ ಎಂದು ಕರೆದು ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಣಿಶಂಕರ್ ಅಯ್ಯರ್ ಅವರು ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ಈ ಬಾರಿ ಟಿವಿ ರಿಪೋರ್ಟರ್ ಒಬ್ಬರಿಗೆ ದೈಹಿಕ ಹಲ್ಲೆ ಮಾಡುವುದಾಗಿ ಬೆದರಿಸಿದ್ದಾರೆ. ಮೋದಿಯವರ ಬಗ್ಗೆ ತನ್ನ ಸಮರ್ಥಿಸಿ ಬರೆದ ಲೇಖನದ ಬಗ್ಗೆ ಪ್ರಸ್ತಾಪಿಸಿದಾಗ ತಾಳ್ಮೆ ಕಳೆದುಕೊಂಡ ಮಣಿ ಶಂಕರ್ ಅಯ್ಯರ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.

“ನಿಮಗೆ ನರೇಂದ್ರ ಮೋದಿ ಎಂಬ ವ್ಯಕ್ತಿ ಇದ್ದಾನೆ ಎಂಬುದು ಗೊತ್ತಿಲ್ಲವೆ? ಅವರು ಮಾಡುತ್ತಿರುವ ವಾಗ್ದಾಳಿಯ ಬಗ್ಗೆ ತಿಳಿದಿಲ್ಲವೆ? ಬೇಕಿದ್ದರೆ ಅವರನ್ನು ಹೋಗಿ ಪ್ರಶ್ನೆ ಕೇಳಿ. ಆದರೆ, ಅವರು ಹೇಡಿಯಂತೆ ವರ್ತಿಸುವುದರಿಂದ ಅವರು ನಿಮ್ಮೊಂದಿಗೆ ಮಾತಾಡುವುದಿಲ್ಲ. ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸುವುದಿಲ್ಲ” ಎಂದು ಮಣಿ ಶಂಕರ್ ಅಯ್ಯರ್ ಹೇಳಿದ್ದಾರೆ. ನಂತರ, ಪತ್ರಕರ್ತನ ಮೇಲೆ ಕೈ ಮಾಡಿದ್ದಲ್ಲದೆ, ಮೈಕ್ರೋಫೋನ್ ಅನ್ನು ತಳ್ಳಿ, ನೀವು ನನಗೆ ಯಾವುದೇ ಪ್ರಶ್ನೆ ಕೇಳುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಪ್ರಶ್ನೆ ಕೇಳಲು ರಿಪೋರ್ಟರ್ ಮುಂದಾದಾಗ, ‘ಐ ವಿಲ್ ಹಿಟ್ ಯು’ ಎಂದು ಅವರ ಮೇಲೆ ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here