ಮಂಗಳೂರು: ಪ್ರೇಮಿಸಿ ಕೈಕೊಟ್ಟಳೆಂದು ಚಾಕು ಇರಿದು, ತಾನು ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿ

0
1749
ಸುಶಾಂತ್ ಮತ್ತು ದೀಕ್ಷಾ

ನ್ಯೂಸ್ ಕನ್ನಡ ವರದಿ (29-6-2019): ಉಳ್ಳಾಲ ಸಮೀಪದ ಬಗಲಂಬಿ ಬಳಿ ಮಂಗಳೂರಿನ ಶಕ್ತಿನಗರ ನಿವಾಸಿ ಸುಶಾಂತ್ ಎಂಬುವಾತ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ದೀಕ್ಷಾ ಎಂಬಾಕೆಗೆ ಇರಿದು ಕೊಲ್ಲಲು ಯತ್ನಿಸಿ ಬಳಿಕ ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಕೃತ್ಯದ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡಿದ್ದು ದೀಕ್ಷಾ ತನ್ನ ಕಾಲೇಜಿನಿಂದ ಹಿಂದಿರುಗುತ್ತಿದ್ದಾಗ ಆರೋಪಿಯು ಬೈಕ್‌ನಲ್ಲಿ ಬಂದು ಅವಳ ಮೇಲೆ ಹಲ್ಲೆ ನಡೆಸಿದ. ತನ್ನೊಡನೆ ಸುತ್ತಾಡಿ, ಪ್ರೇಮಿಸಿ ಬಳಿಕ ಕೈಕೊಟ್ಟಳು ಎನ್ನುವ ಆರೋಪ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಕೆಲವು ಮೂಲಗಳ ಪ್ರಕಾರ ಇದು ಏಕಮುಖ ಪ್ರೇಮವಾಗಿದೆ.

ಯುವತಿಗೆ ಚೂರಿಯಿಂದ ಇರಿದ ಪರಿಣಾಮ ಕಾಲು, ಎದೆ ಮತ್ತು ಹೊಟ್ಟೆಗೆ ತೀವ್ರ ಗಾಯಗಳಾಗಿವೆ. ಆಕೆ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾಳೆ. ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಆಕೆಯನ್ನು ಪಾರು ಮಾಡಲು ಮುಂದಾದಾಗ ಆರೋಪಿ ತಾನೂ ಸಹ ಕುತ್ತಿಗೆಗೆ ಹಲವು ಬಾರಿ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಸ್ಥಳೀಯರು ಇಬ್ಬರನ್ನೂ ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಯುವಕ ಅಪಾಯದಿಂದ ಪಾರಾಗಿದ್ದು, ಯುವತಿಯ ಸ್ಥಿತಿ ಗಂಭೀರವಾಗಿದೆ ಎನ್ನುವ ವರದಿ ಲಭ್ಯವಾಗಿದೆ.
ಇದಕ್ಕೂ ಮೊದಲು, ಏಪ್ರಿಲ್ 24, 2019 ರಂದು ದೀಕ್ಷಾ ಬಳಿ ಕೆಟ್ಟದಾಗಿ ವರ್ತಿಸಿದ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದ ಸುಶಾಂತ್ ವಿರುದ್ಧ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಶಾಂತ್ ತಾಯಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಹಲ್ಲೆ ನಡೆಸಿದ ಸ್ಥಳ

 

LEAVE A REPLY

Please enter your comment!
Please enter your name here