ಈ ದೇಶಕ್ಕೆ ಬಂದೊದಗಿದ ಬಹುದೊಡ್ಡ ಆಪತ್ತು ನರೇಂದ್ರ ಮೋದಿ: ಮಮತಾ ಬ್ಯಾನರ್ಜಿ

0
72

ನ್ಯೂಸ್ ಕನ್ನಡ ವರದಿ(14.5.19): ಕೇಂದ್ರ ಸರಕಾರ ಹಾಗೂ ನರೇಂದ್ರ ಮೋದಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದೀಗ ಮತ್ತೆ ಕಿಡಿಕಾರಿರುವ ಮಮತಾ, ಭಾರತ ದೇಶಕ್ಕೆ ಒದಗಿರುವ ಅತೀ ದೊಡ್ಡ ಆಪತ್ತೆಂದರೆ ಅದು ನರೇಂದ್ರ ಮೋದಿ. ಈ ವ್ಯಕ್ತಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದ ಪರಿಸ್ಥಿತಿ ಏನಾಗಬಹುದು ಎಂದು ಮಮತಾ ಬ್ಯಾನರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಎಲ್ಲ ಧರ್ಮದವರೂ ಸೌಹಾರ್ದ ಜೀವನ ನಡೆಸುತ್ತಿದ್ದಾರೆ. ನನ್ನ ಜೀವ ಕೊಟ್ಟಾದರೂ ರಾಜ್ಯದಲ್ಲಿ ಎಲ್ಲಿಯೂ ಗಲಭೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಾನು ಮುಸ್ಲಿಮರನ್ನು ಓಲೈಸುತ್ತೇನೆ ಎಂದು ಹಲವರು ಆರೋಪಿಸುತ್ತಾರೆ. ಅಂದರೆ ಅರ್ಥವೇನು? ಮುಸ್ಲಿಮರೂ ಈ ರಾಜ್ಯದಲ್ಲೇ ವಾಸವಾಗಿಲ್ಲವೇ? ಬಿಜೆಪಿ ಅಸಹ್ಯ ರಾಜಕಾರಣ ನಡೆಸುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here